Asianet Suvarna News Asianet Suvarna News

Omicron case ದೇಶದಲ್ಲಿ ಹೆಚ್ಚಾಯ್ತು ಓಮಿಕ್ರಾನ್ ಆತಂಕ, ಬೂಸ್ಟರ್‌ ಡೋಸ್‌ ಬಗ್ಗೆ ಕ್ಲಿನಿಕಲ್‌ ಪರೀಕ್ಷೆಗೆ ಸೀರಂಗೆ ಸೂಚನೆ!

  • ಬೂಸ್ಟರ್ ಡೋಸ್  ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚನೆ
  • ಸೀರಂ ಸಂಸ್ಥೆಗೆ ತಜ್ಞರ ಸಮಿತಿ ಸೂಚನೆ, ಕ್ಲಿನಿಕಲ್ ಟೆಸ್ಟ್‌ಗೆ ತಯಾರಿ
  • ಓಮಿಕ್ರಾನ್ ಆತಂಕದಿಂದ ದೇಶದಲ್ಲಿ ಬೂಸ್ಟರ್ ಡೋಸ್‌ಗೆ ಆಗ್ರಹ
Omicron cases DCGI ask serum institute of india to conduct booster dose clinical trial ckm
Author
Bengaluru, First Published Dec 14, 2021, 3:45 AM IST
  • Facebook
  • Twitter
  • Whatsapp

ನವದೆಹಲಿ(ಡಿ.14): ಭಾರೀ ವೇಗವಾಗಿ ಹಬ್ಬುವ ರೂಪಾಂತರಿ ಒಮಿಕ್ರೋನ್‌ ನಿಯಂತ್ರಣಕ್ಕೆ ಬೂಸ್ಟರ್‌ ಡೋಸ್‌ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ, ಬೂಸ್ಟರ್‌ ಡೋಸ್‌ ಪರಿಣಾಮಕಾರಿ ಎಂಬುದನ್ನು ನಿರೂಪಿಸುವ ಸ್ಥಳೀಯವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಪುಣೆ ಮೂಲದ ಸೀರಂ ಸಂಸ್ಥೆಗೆ ಕೇಂದ್ರೀಯ ಔಷಧಗಳ ಗುಣಮಟ್ಟನಿಯಂತ್ರಣ ಸಂಸ್ಥೆ(ಡಿಸಿಜಿಐ)ಯ ತಜ್ಞರ ಸಮಿತಿ ಸೂಚನೆ ನೀಡಿದೆ.

ಡಿ.1ರಂದು ಸೀರಂ ಸಂಸ್ಥೆಯ ನಿಯಂತ್ರಣ ವ್ಯವಹಾರ ಮತ್ತು ಸರ್ಕಾರಿ ನಿರ್ದೇಶಕ ಪ್ರಕಾಶ್‌ ಕುಮಾರ್‌ ಸಿಂಗ್‌ ಅವರು, ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ನೀಡಲು ಅವಕಾಶ ನೀಡಬೇಕು ಎಂದು ಡಿಸಿಜಿಐಗೆ ಪ್ರಸ್ತಾಪ ಸಲ್ಲಿಸಿದ್ದರು. ಅಸ್ಟ್ರಾಜೆನಿಕಾ ಹೆಸರಿನ ಇದೇ ಲಸಿಕೆಯನ್ನು ಬ್ರಿಟನ್‌ನಲ್ಲಿ ಬೂಸ್ಟರ್‌ ಡೋಸ್‌ ಆಗಿ ಪಡೆಯಲು ಅವಕಾಶ ನೀಡಲಾಗಿದೆ ಎಂದು ಸೀರಂ ತಿಳಿಸಿತ್ತು.

Omicron Variant: ಮೊದಲ ಬಲಿ ಪಡೆದುಕೊಂಡ ಒಮಿಕ್ರೋನ್

ಆದರೆ ಭಾರತದ ಜನತೆಗೆ ಬೂಸ್ಟರ್‌ ಡೋಸ್‌ ಅಗತ್ಯ, ಮೊದಲ ಮತ್ತು 2ನೇ ಡೋಸ್‌ ಮಧ್ಯೆ ಇರುವ ಅಂತರದ ಮಾಹಿತಿಗಳನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬೂಸ್ಟರ್‌ ಡೋಸ್‌ ಅಗತ್ಯವನ್ನು ಎತ್ತಿ ಹಿಡಿಯುವ ಪರೀಕ್ಷಾ ವರದಿ ನೀಡುವಂತೆ ಸೀರಂಗೆ ಡಿಸಿಜಿಐನ ತಜ್ಞರ ಸಮಿತಿ ಹೇಳಿದೆ.

7350 ಕೇಸ್‌, 202 ಸಾವು: ಸಕ್ರಿಯ ಸೋಂಕಿತರ ಸಂಖ್ಯೆ 561 ದಿನಗಳ ಕನಿಷ್ಠಕ್ಕೆ
ನವದೆಹಲಿ: ಸೋಮವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 7350 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. 202 ಮಂದಿ ಮೃತಪಟ್ಟಿದ್ದು, ಈವರೆಗೆ ಈ ಮಹಾಮಾರಿಗೆ 4,75,636 ಮಂದಿ ಬಲಿಯಾದಂತಾಗಿದೆ. ಇನ್ನು ಸಕ್ರಿಯ ಸೋಂಕಿತರ ಸಂಖ್ಯೆ 561 ದಿನಗಳ ಕನಿಷ್ಠ 91,456ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸತತ 46ನೇ ದಿನವೂ ದೈನಂದಿನ ಸೋಂಕಿನ ಸಂಖ್ಯೆ 15 ಸಾವಿರಕ್ಕಿಂತ ಕಮ್ಮಿ ಇದೆ. ಅಲ್ಲದೆ ಸೋಂಕಿನಿಂದ ಗುಣಮುಖರಾದವರ ಪ್ರಮಾಣ 2020ರ ಮಾಚ್‌ರ್‍ನಿಂದ ಈವರೆಗಿನ ದಾಖಲೆ ಶೇ.98.37ಕ್ಕೆ ಜಿಗಿದಿದೆ. ಈವರೆಗೆ 133.17 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

Omicron Threat: ಶಾಲೆಗಳನ್ನು ಮುಚ್ಚುವುದಿಲ್ಲ: ಶಿಕ್ಷಣ ಸಚಿವ ನಾಗೇಶ್‌

ಹೈರಿಸ್ಕ್‌ ದೇಶದಿಂದ ಬಂದವರಿಗೆ ಏರ್‌ಪೋರ್ಟಲ್ಲೇ ಕ್ವಾರಂಟೈನ್‌?
ಹೈರಿಸ್ಕ್‌ ರಾಷ್ಟ್ರಗಳಿಂದ ಆಗಮಿಸುವ ಎಲ್ಲ ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಕ್ವಾರಂಟೈನ್‌ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಕುರಿತು ತಜ್ಞರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ರಾಜ್ಯ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದೆ. ಆದರೂ ಬಿಬಿಎಂಪಿ ವಿದೇಶಗಳಿಂದ ಬರುವ ಪ್ರಯಾಣಿಕರ ಚಲನ-ವಲನಗಳ ಮೇಲೆ ನಿಗಾ ವಹಿಸಲಿದೆ ಎಂದು ಗೌರವ್‌ ಗುಪ್ತಾ ತಿಳಿಸಿದರು.

ಚೀನಾದಲ್ಲಿ ಡೆಲ್ಟಾದ ಉಪತಳಿ ಆತಂಕ

ಭಾರತದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದೆ. ಆದರೆ ಚೀನಾದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಆತಂಕ ಶುರುವಾಗಿದೆ.  ಮಾರಣಾಂತಿಕ ಡೆಲ್ಟಾರೂಪಾಂತರಿಯ ಉಪತಳಿಯೊಂದು ಚೀನಾದಲ್ಲಿ ಪತ್ತೆಯಾಗಿದೆ. ಝೆಜಿಯಾಂಗ್‌ ಪ್ರಾಂತ್ಯದಲ್ಲಿ 138 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ಹಬ್ಬಿದೆ. ಸ್ಥಳೀಯವಾಗಿ ಕಾಣಿಸಿಕೊಂಡಿರುವ ಕೊರೋನಾದ ರೂಪಾಂತರಿ ಡೆಲ್ಟಾದ ಉಪ ರೂಪಾಂತರಿ ಎವೈ.4 ಹೆಸರಿನ ಪ್ರಭೇದದಿಂದ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪ್ರಾಂತ್ಯಕ್ಕೆ ಯಾರೂ ತೆರಳದಂತೆ ಸರ್ಕಾರ ಸೂಚನೆ ನೀಡಿದೆ.ಈ ವೈರಸ್‌ ಹೆಚ್ಚು ವೇಗವಾಗಿ ಹಬ್ಬುವ ಮತ್ತು ಹೆಚ್ಚು ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಒಳಗೊಂಡಿರುವ ತಳಿಯಾಗಿದೆ ಎಂದು ಝೆಜಿಯಾಂಗ್‌ ಪ್ರಾಂತ್ಯದ ರೋಗ ನಿಯಂತ್ರಣ ಮತ್ತು ತಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಡೆಲ್ಟಾ ಅತ್ಯಂತ ಅಪಯಾಕಾರಿಯಾಗಿದ್ದು, ಇತರ ದೇಶಗಳಿಗೂ ಹರಡುವ ಸಾಧ್ಯತೆ ಹೆಚ್ಚಿದೆ.

Follow Us:
Download App:
  • android
  • ios