ನೇಶನ್ ವಿತ್ ನಮೋ ಫೇಸ್‌ಬುಕ್ ಪೇಜ್ ಹಲವಾರು ಜನರು ಕತ್ತಿ ಹಿಡಿದು ನಡೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಯದ್ದು ಎಂದು ಹೇಳಿದೆ. ೧ ನಿಮಿಷದ ವಿಡಿಯೋದೊಂದಿಗೆ, ‘ಬಿಹಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ದಂಗೆಕೋರರು ಕತ್ತಿ ಗುರಾಣಿ ಹಿಡಿದು ಪ್ರತಿಭಟಿಸಿದ್ದು ಹೀಗೆ. ಪ್ರತಿಪಕ್ಷಗಳು ಇವರನ್ನು ಸಮರ್ಥಿಸುತ್ತ ಅವರ ಪರ ನಿಂತಿವೆ’ ಎಂದು ಒಕ್ಕಣೆ ಬರೆಯಲಾಗಿದೆ.

ನೇಷನ್ ವಿತ್ ನಮೋ ಫೇಸ್‌ಬುಕ್ ಪೇಜ್ ಸುಮಾರು 14 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದೆ. ಈ ಪೇಜ್ ಪೋಸ್ಟ್ ಮಾಡಿರುವ ವಿಡಿಯೋ 26000 ಬಾರಿ ವೀಕ್ಷಣೆಯಾಗಿದ್ದು, 1600 ಬಾರಿ ಶೇರ್ ಆಗಿದೆ. ಇದೇ ವಿಡಿಯೋವನ್ನು ಟ್ವೀಟರ್‌ನಲ್ಲಿ, ‘ಬುದ್ಧಿಜೀವಿಗಳು ಮತ್ತು ವಿರೋಧ ಪಕ್ಷಗಳು ಕತ್ತಿಯನ್ನೂ ಶಾಂತಿಯುತ ಪ್ರತಿಭಟನೆಯ ಸಂಕೇತ ಎಂದು ಲೇಬಲ್ ಮಾಡಲು ಬರುತ್ತವೆ, ಕಾಯುತ್ತಿರಿ!’ ಎಂದು ವ್ಯಂಗ್ಯವಾಗಿ ಒಕ್ಕಣೆ ಬರೆದು ಪೋಸ್ಟ್ ಮಾಡಿದೆ.

 

ಆದರೆ ಈ ವಿಡಿಯೋ ಹಿಂದಿನ ಸತ್ಯಾಸತ್ಯ ಏನು, ಇದು ನಿಜಕ್ಕೂ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಯದ್ದೇ ಎಂದು ಬೂಮ್‌ಲೈವ್ ಸುದ್ದಿಸಂಸ್ಥೆ ಪರಿಶೀಲಿಸಿದಾಗ ವೈರಲ್ ಆಗಿರುವ ವಿಡಿಯೋ ಮೊಹರಂ ಮೆರವಣಿಗೆಯದ್ದು ಎಂದು ತಿಳಿದುಬಂದಿದೆ. 2007 ಅಕ್ಟೋಬರ್ ೧ರಂದು ಯುಟ್ಯೂಬ್ ನಲ್ಲಿ 2.19 ನಿಮಿಷದ ಮೂಲ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಇದೇ ವಿಡಿಯೋವನ್ನು ಬಳಸಿಕೊಂಡ ನಮೋ ವಿತ್ ನೇಷನ್ ಫೇಸ್‌ಬುಕ್ ಪೇಜ್ ಸಿಎಎ ವಿರೋಧಿ ಪ್ರತಿಭಟನೆ ಎಂದು ಸುಳ್ಳುಸುದ್ದಿ ಹರಡಿದೆ