Asianet Suvarna News Asianet Suvarna News

ದೆಹಲಿ ಚುನಾವಣೆಗೆ ಕ್ಷಣಗಣನೆ, ಇತ್ತ ಡಿಸಿಎಂ ಸಿಸೋಡಿಯಾಗೆ ಬಿಗ್ ಶಾಕ್!

ರಂಗೇರಿದ ಚುನಾವಣಾ ಅಖಾಡ| ಅತ್ತ ಎಲೆಕ್ಷನ್‌ಗೆ ಕ್ಷಣಗಣನೆ, ಇತ್ತ ಡಿಸಿಎಂ ಸಿಸೋಡಿಯಾಗೆ ಬಿಗ್ ಶಾಕ್| ಲಂಚಾರೋಪದಲ್ಲಿ ಅಧಿಕಾರಿ ಅರೆಸ್ಟ್

Officer On Special Duty To Manish Sisodia Arrested By CBI On Bribery Charge
Author
Bangalore, First Published Feb 7, 2020, 1:02 PM IST

ನವದೆಹಲಿ[ಫೆ.07]: ದೆಹಲಿ ವಿಧಾನಸಭಾ ಚುನಾವಣಾ ಭರಾಟೆಯ ನಡುವೆಯೇ ಬಹುದೊಡ್ಡ ಕಾರ್ಯಾಚರಣೆ ನಡೆಸಿದ CBI, 2 ಲಕ್ಷ ರೂಪಾಯಿ ಲಂಚ ಸ್ವೀಕರಿಸಿರುವ ಆರೋಪದಡಿ ಅಧಿಕಾರಿಯೊಬ್ಬರನ್ನು ಬಂಧಿಸಿದೆ. ಈ ಅಧಿಕಾರಿ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾರ OSD ಎನ್ನಲಾಗಿದೆ. 

ಈ ಸಂಬಂಧ ಮಾಹಿತಿ ನೀಡಿರುವ CBI ಅಧಿಕಾರಿಗಳು ಗೋಪಾಲ ಕೃಷ್ಣ ಮಾಧವ್ ಹೆಸರಿನ ಅಧಿಕಾರಿಯನ್ನು ತಡರಾತ್ರಿ GST ಸಂಬಂಧಿತ ಪ್ರಕರಣದಲ್ಲಿ, 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಗೋಪಾಲ್ ರನ್ನು ವಿಚಾರಣೆಗೆಂದು CBI ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. ಈ ಪ್ರಕರಣದಲ್ಲಿ ಮನೀಷ್ ಸಿಸೋಡಿಯಾರ ಯಾವುದೇ ಪಾತ್ರವಿಲ್ಲ ಎಂಬುವುದು ವರದಿಗಳಿಂದ ಬಯಲಾಗಿದೆ. 

ಮನೋಜ್ ತಿವಾರಿ ಬಳಕುವ ಸೊಂಟ ಇಷ್ಟ: ಕೇಜ್ರಿವಾಲ್ ವ್ಯಂಗ್ಯ!

ಇನ್ನು ಗೋಪಾಲ ಕೃಷ್ಣ ಮಾಧವ್ 2015ರಿಂದ ಸಿಸೋಡಿಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. CBI ಮೂಲಗಳಿಂದ ಈ ಸಂಬಂಧ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಶನಿವಾರ, ಫೆಬ್ರವರಿ 8 ರಂದು ನಡೆಯಲಿದೆ ಚುನಾವಣೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ, ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಕ್ಷಣಗಣಗನೆ ಆರಂಭವಾದಾಗಲೇ ನಡೆದಿರುವ ಈ ಪ್ರಕರಣ ರಾಜಕೀಯ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗುವದರಲ್ಲಿ ಅನುಮಾನವಿಲ್ಲ. ಈ ಚುನಾವಣೆಗೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು, 40 ಸಾವಿರ ಜವಾನರನ್ನು ಭದ್ರತೆಗೆ ನೇಮಿಸಲಾಗಿದೆ.

ಬಿಜೆಪಿಯ ಉಗ್ರ ಪಟ್ಟಕ್ಕೆ ಕಣ್ಣೀರಿಟ್ಟ ದಿಲ್ಲಿ ಸಿಎಂ ಕೇಜ್ರಿವಾಲ್

Follow Us:
Download App:
  • android
  • ios