Asianet Suvarna News Asianet Suvarna News

ಕೊರೋನಾ ಸೋಂಕು ಪತ್ತೆಯಾದರೆ ಕಚೇರಿ ಸೀಲ್‌ ಮಾಡಲ್ಲ

ಕೇಂದ್ರ ಸರ್ಕಾರ ಕೊರೋನಾ ನಿಯಂತ್ರಣದ ಜೊತೆ ಜೊತೆಗೆ ಆರ್ಥಿಕತೆಯನ್ನು ಪುನಾರಂಭಿಸಲು ಒತ್ತು ನೀಡುತ್ತಿದೆ. ಹೀಗಾಗಿ ಒಂದು ವೇಳೆ ಕಚೇರಿಯಲ್ಲಿ ಕೊರೋನಾ ಸೋಂಕು ಪತ್ತೆಯಾದರೂ ಕಚೇರಿ ಸೀಲ್ ಮಾಡದಿರುವ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

office won't be sealed if Covid case is found says central officials
Author
New Delhi, First Published Apr 29, 2020, 9:42 AM IST

ನವದೆಹಲಿ(ಏ.29): ಲಾಕ್‌ಡೌನ್‌ ಅವಧಿ ಮುಗಿದ ಬಳಿಕ ಪುನಾರಂಭಗೊಳ್ಳುವ ಕಚೇರಿಗಳಲ್ಲಿ ಒಂದು ವೇಳೆ ಯಾವುದಾದರೂ ಸಿಬ್ಬಂದಿಗೆ ಕೊರೋನಾ ವೈರಸ್‌ ಇರುವುದು ಪತ್ತೆಯಾದರೆ ಇಡೀ ಕಚೇರಿಯ ಸ್ಥಳವನ್ನು ಸೀಲ್‌ ಮಾಡುವುದು ಅಥವಾ ಆ ಸ್ಥಳವನ್ನು ಕಂಟೈನ್‌ಮೆಂಟ್‌ ವಲಯವೆಂದು ಘೋಷಿಸುವುದಿಲ್ಲ. ಏಕೆಂದರೆ, ಕೇಂದ್ರ ಸರ್ಕಾರ ಕೊರೋನಾ ನಿಯಂತ್ರಣದ ಜೊತೆ ಜೊತೆಗೆ ಆರ್ಥಿಕತೆಯನ್ನು ಪುನಾರಂಭಿಸಲು ಒತ್ತು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಕಚೇರಿಗಳಲ್ಲಿ ಸಿಬ್ಬಂದಿಗೆ ಕೊರೋನಾ ವೈರಸ್‌ ಕಂಡು ಬಂದರೆ, ಅಂಥವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಬಳಿಕ ಸ್ಥಳೀಯ ಅಧಿಕಾರಿಗಳ ಸೂಚನೆಯಂತೆ ಕಚೇರಿಯ ಸ್ಥಳವನ್ನು ಸೋಂಕು ನಾಶಕಗಳಿಂದ ಸ್ವಚ್ಛಗೊಳಿಸಲಾಗುತ್ತದೆ. ಆರೋಗ್ಯ ತಜ್ಞರ ಸಲಹೆಯಂತೆ ಜಿಲ್ಲಾ ಮ್ಯಾಜಿಸ್ಪ್ರೇಟ್‌ಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಆದರೆ, ಇಡೀ ಕಚೇರಿಯನ್ನು ಸಂಪೂರ್ಣ ಸೀಲ್‌ ಮಾಡುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಐಟಿ,ಬಿಟಿ ನೌಕರರಿಗೆ ಜುಲೈ 31ರವರೆಗೆ ವರ್ಕ್ ಫ್ರಮ್ ಹೋಮ್

ಈ ಮುನ್ನ ಆರೋಗ್ಯ ಸಚಿವಾಲಯ ಕೈಗಾರಿಕೆ ಮತ್ತು ವಾಣಿಜ್ಯಿಕ ಕೇಂದ್ರಗಳಲ್ಲಿ ಯಾರಿಗಾದರೂ ಕೊರೋನಾ ವೈರಸ್‌ ಪತ್ತೆ ಆದರೆ, ಅವುಗಳನ್ನು ಸೀಲ್‌ಡೌನ್‌ ಮಾಡುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿತ್ತು. ಕೊರೋನಾ ವೈರಸ್‌ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಕೊರೋನಾ ಹಾಟ್‌ಸ್ಪಾಟ್‌ಗಳನ್ನು ಈಗಾಗಗಲೇ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಅಂತರ್ಜಿಲ್ಲೆ ಹಾಗೂ ಅಂತಾರಾಜ್ಯಗಳ ಓಡಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಈಗಾಗಲೇ ಹಲವಾರು ಐಟಿ-ಬಿಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟಿದೆ. ಜುಲೈ 31ರವರೆಗೂ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಲು ಅನುಮತಿ ನೀಡಲಾಗಿದೆ.  
 

Follow Us:
Download App:
  • android
  • ios