ನವದೆಹಲಿ (ಸೆ.25): ಸತತ 6ನೇ ದಿನವಾದ ಗುರುವಾರ ಕೂಡಾ ದೇಶದಲ್ಲಿ ಹೊಸ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಪ್ರಮಾಣವೇ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 ಬುಧವಾರ ಬೆಳಗ್ಗೆಯಿಂದ ಗುರುವಾರದ ಬೆಳಗ್ಗೆವರೆಗಿನ 24 ಗಂಟೆಯಲ್ಲಿ ದೇಶಾದ್ಯಂತ 86,508 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಆದರೆ, ಇದೇ ವೇಲೆ 87,374 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಇದರೊಂದಿಗೆ ಒಟ್ಟು ಸೋಂಕಿತರ ಪೈಕಿ 46.7 ಲಕ್ಷಕ್ಕಿಂತ ಹೆಚ್ಚು ಮಂದಿ ಕೊರೋನಾದಿಂದ ಗುಣವಾಗಿದ್ದಾರೆ. ಹೀಗಾಗಿ, 56 ಲಕ್ಷಕ್ಕಿಂತ ಹೆಚ್ಚು ಸೋಂಕಿಗೆ ತುತ್ತಾದವರ ಪೈಕಿ ಕೇವಲ 9.66 ಲಕ್ಷ ಮಂದಿ ಮಾತ್ರವೇ ಸಕ್ರಿಯ ಸೋಂಕಿತರಾಗಿದ್ದಾರೆ ಎಂದು ತಿಳಿಸಿದೆ. 

ಕೊರೋನಾ ಕಳವಳ: ಜನರಿಗೆ ಸಲಹೆಗಳನ್ನ ಕೊಟ್ಟ ಪ್ರಧಾನಿ ಮೋದಿ ...

ಇದೇ ವೇಳೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ಹೊಸದಾಗಿ ಶೇ.74ರಷ್ಟುಪ್ರಮಾಣದಷ್ಟುಸೋಂಕಿತರು ಕೊರೋನಾವನ್ನು ಜಯಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಈಗಾಗಲೇ ಲಕ್ಷ ಲಕ್ಷ ಸಂಖ್ಯೆಯಲ್ಲಿ ದೇಶದಲ್ಲಿ ಜನರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಸಾವಿರಾರು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.