Asianet Suvarna News Asianet Suvarna News

ಭಾರತವೇ ಟಾರ್ಗೆಟ್, ಕಂಗೆಟ್ಟ ಚೀನಾದಿಂದ 'ಬೀಜ ಭಯೋತ್ಪಾದನೆ' ಎಚ್ಚರ!

ಚೀನಾ ಈ ಕುತಂತ್ರ ಮಾಡಿದರೂ ಅಚ್ಚರಿ ಇಲ್ಲ/ ಎಚ್ಚರಿಕೆ ನೀಡಿದ ಬೀಜ ನಿಗಮ/ ಬೀಜ ಭಯೋತ್ಪಾದನೆ/ ಚೀನಾ ಬಳಸಹೊರಟಿರುವ ಅಸ್ತ್ರ/ ಭಾರತವೇ ಚೀನಾದ ಗುರಿ

NSAI asks Centre to watch out for Chinese seed terrorism
Author
Bengaluru, First Published Aug 3, 2020, 10:03 PM IST

ನವದೆಹಲಿ(ಆ.  03)    ಗಡಿಯಲ್ಲಿ ಕಾರಣವಿಲ್ಲದೆ ಕ್ಯಾತೆ ಮಾಡಿದ್ದ ಚೀನಾದ ಮೇಲೆ ಭಾರತ ಡಿಜಿಟಲ್ ಸಮರ ಮಾಡುತ್ತಲೇ ಬಂದಿದೆ.  ದೂರದ ಅಮೆರಿಕದಲ್ಲಿ ಕೆಲ ದಿನಗಳ ಹಿಂದೆ ಚೀನಾ ವಿಳಾಸದ ಕೆಲ ಬೀಜಗಳು ಪತ್ತೆಯಾಗಿದ್ದವು. ಹೌದು ಈ ಸುದ್ದಿ ಒಂದಕ್ಕೊಂದು ಲಿಂಕ್ ಇದೆ.

ಭಾರತದ ಆಹಾರ ವ್ಯವಸ್ಥೆ ಮೇಲೆ  ಚೀನಾ ತನ್ನ ಅಡ್ವಾನ್ಸಡ್ ಜೈವಿಕ ತಂತ್ರಜ್ಞಾನ ಬಳಸಿಕೊಂಡು ಇಲ್ಲದ ಕಿತಾಪತಿ ಮಾಡಬಹುದು ಎಂಬ ಎಚ್ಚರಿಕೆ ಇದೀಗ ಬಂದಿದೆ.

ರಾಷ್ಟ್ರೀಯ ಬೀಜ ನಿಗಮ The National Seed Association of India (NSAI) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಕೇಂದ್ರ ತನ್ನ ಗುಪ್ತಚರ ದಳಗಳ ಮೂಲಕ ಜಾಗೃತವಾಗಿರಬೇಕು ಎಂದು ಹೇಳಿದೆ.  ಚೀನಾ ಸದ್ದಿಲ್ಲದೆ ಬೀಜ ಉಗ್ರವಾದ ಮಾಡಿಬಹುದು ಎಚ್ಚರದಿಂದ ಇರಿ ಎಂದು ಹೇಳಿದೆ. ಭಾರತದ ಹೊಲದಲ್ಲಿ ಚೀನಾ ತನ್ನ ಬೀಜ ಮೊಳಕೆ ಮಾಡಬಹುದು!

ಇಲ್ಲಿಯವರೆಗೆ ಭಾರತದ ಮಾರುಕಟ್ಟೆಯಲ್ಲಿ  ಚೀನಾದ ಯಾವ ಬೀಜಗಳು ಕಂಡುಬಂದಿಲ್ಲ.  ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳ ನಂತರ ಈ ಎಚ್ಚರಿಕೆ ನೀಡಲಾಗಿದೆ.

ಭಾರತದ ಹವಾಮಾನ ಮತ್ತು ಕೃಷಿ ವ್ಯವಸ್ಥೆಯನ್ನು ಚೀನಾ ಕಳೆದ ಇಪ್ಪತ್ತು ವರ್ಷಗಳಿಂದ ಅಧ್ಯಯನ ಮಾಡಿಕೊಂಡು ಬಂದಿದೆ.  ಸೂಕ್ಷ್ಮಾಣು ವ್ಯವಸ್ಥೆಯೂ ಅದಕ್ಕೆ ಗೊತ್ತು ಎಂಬ ಮಾಹಿತಿ ನೀಡಿದೆ.

ಅಮೆರಿಕದಲ್ಲಿ ಸಿಕ್ಕ ಚೀನಾದ ರಹಸ್ಯ ಬೀಜದ ಪ್ಯಾಕೇಟ್

ಭಾರತದ ಕಂಪನಿಗಳು ಚೀನಾದಲ್ಲಿ ಬೀಜ ಘಟಕ ಸ್ಥಾಪಿಸಲು ಸಾಧ್ಯವಿಲ್ಲ, ಆದರೆ ಚೀನಾದವರು ಭಾರತದಲ್ಲಿ ಆ ಕೆಲಸ ಮಾಡಬಲ್ಲರು.  ಸರ್ಕಾರದ ಅನುಮತಿ ಇಲ್ಲದೆ  ಯಾವುದೇ ಬೀಜ ಆಮದು ಮಾಡಿಕೊಳ್ಳಲು ಅವಕಾಶ ಇಲ್ಲ. ಆದರೆ ಚೀನಾ ಅನ್ಯ ಮಾರ್ಗ ಅನುಸರಿಸಬಹುದು ಎಂಬ ಎಚ್ಚರಿಕೆಯನ್ನು ರವಾನಿಸಿದೆ.

ಒಂದು ವೇಳೆ ಚೀನಾದ ಕುತಂತ್ರ ನಡೆದು ಬಿಟ್ಟರೆ ಭಾರತದ ಆಹಾರ ಭದ್ರತೆ ಮೇಲೆ ಕೆಟ್ಟ ಪರಿಣಾಮ ನಿಶ್ಚಿತ.   ಹಿಂದೆ ಬಿಟಿ ಹತ್ತಿಯನ್ನು ಇದೆ ರೀತಿ ಭಾರತದಲ್ಲಿ ಚೀನಾ ಹೊಕ್ಕಿಸಿತ್ತು. ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಪ್ರದೇಶದಲ್ಲಿ ಸದ್ದಿದಲ್ಲದೆ ತನ್ನ ಕೆಲಸ ಮಾಡಿತ್ತು. ಸುಂಕ ಇಲಾಖೆ ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ಯಾವ ಮಾರ್ಗದಿಂದಲೂ ಚೀನಾ ಬೀಜಗಳು ಒಳಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ಬೀಜ ನಿಗಮ ತಿಳಿಸಿದೆ.

Follow Us:
Download App:
  • android
  • ios