ಭಾರತದ ಗಡಿಯಲ್ಲಿ ಚೀನಾ ಕಿತಾಪತಿ/ ಬಿಹಾರ ರೆಜಿಮೆಂಟ್ ಯೋಧರಿಗೆ ಸೈನ್ಯದಿಂದ ಹಾಡಿನ ವಂದನೆ/ ಇವರು ಬಾವಲಿಗಳಲ್ಲ. ಇವರು ಬ್ಯಾಟ್‍ಮನ್‍ಗಳು/ ಸಂದರ್ಭ ಯಾವುದೇ ಇರಲಿ ದೇಶದ ಸೈನಿಕರ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ

ನವದೆಹಲಿ(ಜೂ. 22) ಕಾಲು ಕೆದರಿಕೊಂಡು ಗಡಿಯಲ್ಲಿ ಉದ್ಧಟತನ ತೋರಿದ್ದ ಚೀನಾಕ್ಕೆ ಭಾರತೀಯ ಸೈನಿಕರು ಸಿಂಹಸ್ವಪ್ನವಾಗಿ ಕಾಡಿದ್ದರು. ಚೀನಾ ಸೈನಿಕರಿಗೆ ಪಾಠ ಕಲಿಸಿದ ಬಿಹಾರ ರೆಜಿಮೆಂಟ್‍ ಸೈನಿಕರಿಗೆ ಭಾರತೀಯ ಸೇನೆಯ ಉತ್ತರ ಕಮಾಂಡ್ ವಿಡಿಯೋ ಮೂಲಕ ವಂದನೆ ಸಲ್ಲಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಲೇ ಇದೆ.

ಇವರು ಬಾವಲಿಗಳಲ್ಲ. ಇವರು ಬ್ಯಾಟ್‍ಮನ್‍ಗಳು ಎಂದು ಸಾರಿರುವ ವಿಡಿಯೋ ಸೈನಿಕರ ಶೌರ್ಯ, ಹೋರಾಟದ ಕಿಚ್ಚನ್ನು ಕೊಂಡಾಡಿದೆ. ಒಳ್ಳೆಯ ದಿನ ಬಂದೇ ಬರುತ್ತದೆ ಎಂದು ಹೇಳಿರುವ ಹಿನ್ನೆಲೆ ದನಿ ಭಜರಂಗ್ ಬಲಿ ಕೀ ಜೈ ಎಂದು ಹೇಳಲು ಮರೆತಿಲ್ಲ. 1 ನಿಮಿಷ 57 ಸೆಕೆಂಡಿನ ವಿಡಿಯೋದಲ್ಲಿ ಹುತಾತ್ಮರಾದ ಸೈನಿಕರಿಗೆ ವಂದನೆ ಸಲ್ಲಿಸಲಾಗಿದೆ.

ಸೇನೆಗೆ ಪರಮಾಧಿಕಾರ; ತಂಟೆಗೆ ಬಂದ್ರೆ ಹುಷಾರ್

1948, 1971 ಮತ್ತು 1999 ಯಾವುದೇ ಇರಲಿ. ಇವರು ಹೋರಾಟ ಮಾಡಲೆಂದು ಜನಿಸಿದವರು. ಇವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಇವರು ಬಾವಲಿಗಳಲ್ಲ. ಇವರು ಬ್ಯಾಟ್‍ಮನ್‍ಗಳು ಎಂದು ಹೇಳುತ್ತ ಸೈನ್ಯದ ಪರಂಪರೆ ಸಾರುತ್ತ ವಿಡಿಯೋ ಸಾಗುತ್ತದೆ. 

ಮೇಜರ್‌ ಅಖಿಲ್‌ ಹಿನ್ನೆಲೆ ಧ್ವನಿ ನೀಡಿದ್ದು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಕಾರ್ಗಿಲ್‌ ಯುದ್ಧದ ವೇಳೆಯೂ ಬಿಹಾರ ರೆಜಿಮೆಂಟ್‌ ಪಾತ್ರ ಮುಖ್ಯವಾಗಿತ್ತು. ಸೈನಿಕರ ಶೌರ್ಯ ಮತ್ತು ಧೀರತ್ವದ ದ್ಯೋತಕವಾಗಿ ವಿಡಿಯೋ ಮೂಡಿ ಬಂದಿದ್ದು ನೀವು ಒಮ್ಮೆ ಜೈ ಹಿಂದ್ ಎಂದು ಹೇಳಿ. 

Scroll to load tweet…