ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಉತ್ತರಾಖಂಡದ ಮಾಜಿ ಸಿಎಂ ಹಾಗೂ ಮಹಾರಾಷ್ಟ್ರ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ , "ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರಂತೆ ಪರಿಗಣಿಸುವುದು ತಪ್ಪೇನಲ್ಲ ಎಂದಿದ್ದಾರೆ.
ನವದೆಹಲಿ (ಏಪ್ರಿಲ್ 24, 2023): ಕರ್ನಾಟಕದ ದೇವನಹಳ್ಳಿ ಗ್ರಾಮದ ವೃದ್ಧರೊಬ್ಬರು ಮಳೆಯಲ್ಲಿ ನೆನೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಟೌಟ್ ಅನ್ನು ಒರೆಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ, ಪ್ರಧಾನಿ ಮೋದಿಯನ್ನು ದೇವರು ಎಂದೂ ಇತ್ತೀಚೆಗೆ ಹೊಗಳಿದ್ದರು. ಈ ಘಟನೆ ನಡೆದ ಒಂದು ದಿನದ ನಂತರ, ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೋಶ್ಯಾರಿ ಅವರು ಶನಿವಾರದ ಕಾರ್ಯಕ್ರಮವೊಂದರಲ್ಲಿ ಭಾರತದ ಪ್ರಧಾನಿಯನ್ನು ಇದೇ ರೀತಿ ಹೊಗಳಿದ್ದಾರೆ.
ಉತ್ತರಾಖಂಡದ ನೈನಿತಾಲ್‌ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಉತ್ತರಾಖಂಡದ ಮಾಜಿ ಸಿಎಂ ಹಾಗೂ ಮಹಾರಾಷ್ಟ್ರ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ , "ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರಂತೆ ಪರಿಗಣಿಸುವುದು ತಪ್ಪಲ್ಲ" ಎಂದು ಹೇಳಿದ್ದಾರೆ. "ನಾವು ಪ್ರಧಾನಿಯನ್ನು ಪೂಜಿಸಬೇಕೆಂದು ನಾನು ಹೇಳುತ್ತಿಲ್ಲ, ಆದರೆ ಅವರು ಹೇಳುವುದನ್ನು ನಾವು ಕೇಳಬೇಕು" ಎಂದು ಭಗತ್ ಸಿಂಗ್ ಕೋಶ್ಯಾರಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ: ಉದ್ಧವ್ ಠಾಕ್ರೆ ವಿಶ್ವಾಸಮತಕ್ಕೆ ಸೂಚಿಸಿದ ಗೌರ್ನರ್ ಬಗ್ಗೆ ಸುಪ್ರೀಂ ಕಿಡಿ: ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದ ಕೋರ್ಟ್
"ಸರ್ಕಾರವು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಉದ್ಯೋಗಗಳನ್ನು ನೀಡಿದೆ. ಯಾವುದೇ ಸರ್ಕಾರವು ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ; ಆದ್ದರಿಂದ, ನಾವು ಸ್ವಾವಲಂಬಿಗಳಾಗಿದ್ದೇವ." ಎಂದೂ ಮಹಾರಾಷ್ಟ್ರದ ಮಾಜಿ ಗವರ್ನರ್ ಹೇಳಿದ್ದಾರೆ.
ಶುಕ್ರವಾರ, ಕರ್ನಾಟಕದ ದೇವನಹಳ್ಳಿ ಗ್ರಾಮದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ರೋಡ್‌ಶೋ ಮಳೆಯ ಕಾರ ಮುಂದೂಡಿಕೆಯಾಗಿದೆ. ಈ ವೇಳೆ, ಗ್ರಾಮಸ್ಥರೊಬ್ಬರು ಪ್ರಧಾನಿ ಮೋದಿಯವರ ಕಟ್‌ಔಟ್ ಅನ್ನು ಒರೆಸುತ್ತಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಳಿ ಅಂಗಿ ಮತ್ತು ಧೋತಿ ತೊಟ್ಟಿದ್ದ ಗ್ರಾಮಸ್ಥನಿಗೆ ಅವರ ಇಂಗಿತದ ಬಗ್ಗೆ ಮತ್ತು ಪ್ರಧಾನಿ ಮೋದಿಯವರ ಕಟೌಟ್ ಒರೆಸಿದ್ದಕ್ಕೆ ಹಣ ಪಡೆದಿದ್ದೀರಾ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ದೇವನಹಳ್ಳಿಯ ಆ ಗ್ರಾಮಸ್ಥ, ಪ್ರಧಾನಿ ಮೋದಿಯವರ ಕಟೌಟ್‌ನ ‘ವಿಶ್ವಾಸ’ದಿಂದ ಮಳೆ ನೀರನ್ನು ಒರೆಸುತ್ತಿರುವುದಾಗಿ ಹೇಳಿದರು. "ಮೋದಿ ಜೀ ದೇವರು, ಯಾರೂ ನನಗೆ ಹಣ ನೀಡಿಲ್ಲ" ಎಂದೂ ಅವರು ಹೇಳಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ, ಮರಾಠಿಗರ ಅವಮಾನ ಒಪ್ಪಲ್ಲ ಎಂದ ಸಿಎಂ ಶಿಂಧೆ!
ಈ ಮಧ್ಯೆ, ಹಿಂದಿನ ಸರ್ಕಾರಗಳು ಹಳ್ಳಿಗಳನ್ನು ವೋಟ್ ಬ್ಯಾಂಕ್ ಅಲ್ಲ ಎಂದು ಗ್ರಾಮಗಳ ಅಭಿವೃದ್ಧಿಯನ್ನು ಕಡೆಗಣಿಸಿವೆ ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ. ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ಮಧ್ಯ ಪ್ರದೇಶದ ರೇವಾದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ ನೇತೃತ್ವದ ಸರ್ಕಾರವು ಪರಿಸ್ಥಿತಿಯನ್ನು ಬದಲಾಯಿಸಿದೆ ಮತ್ತು ಪಂಚಾಯತ್‌ಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದೆ ಎಂದು ಹೇಳಿದರು.
"ಹಿಂದಿನ ಸರಕಾರಗಳು ತಮ್ಮಲ್ಲಿ ಮತಬ್ಯಾಂಕ್ ಆಗಿಲ್ಲ ಎಂದು ಹಳ್ಳಿಗಳಿಗೆ ಹಣ ಖರ್ಚು ಮಾಡಲು ಹಿಂದೇಟು ಹಾಕಿದವು. ಆದ್ದರಿಂದಲೇ ಅವರನ್ನು ಕಡೆಗಣಿಸಲಾಯಿತು. ಅನೇಕ ರಾಜಕೀಯ ಪಕ್ಷಗಳು ಹಳ್ಳಿ ಜನರನ್ನು ವಿಭಜಿಸಿವೆ" ಎಂದೂ ಮೋದಿ ಹೇಳಿದ್ದಾರೆ. "ಬಿಜೆಪಿಯು ಹಳ್ಳಿಗಳಿಗೆ ನಡೆದ ಈ ಅನ್ಯಾಯವನ್ನು ಕೊನೆಗೊಳಿಸಿದೆ ಮತ್ತು ಅವರ ಅಭಿವೃದ್ಧಿಗಾಗಿ ನಮ್ಮ ಖಜಾನೆಯ ಹುಂಡಿಯನ್ನು ತೆರೆದಿದ್ದೇವೆ" ಎಂದೂ ಅವರು ಹೇಳಿದರು.
ಇದನ್ನೂ ಓದಿ: 'ಸಂಸ್ಕೃತ ಶ್ಲೋಕಗಳನ್ನು ಬೋಧಿಸಿದರೆ ರೇಪ್ ತಡೆಯಬಹುದು'!
ತಮ್ಮ ಸರ್ಕಾರವು ಜನ್ ಧನ್ ಯೋಜನೆಯಡಿ ಹಳ್ಳಿಗಳಲ್ಲಿ 40 ಕೋಟಿಗೂ ಹೆಚ್ಚು ಜನರ ಬ್ಯಾಂಕ್ ಖಾತೆಗಳನ್ನು ತೆರೆದಿದೆ ಎಂದೂ ಪ್ರಧಾನಿ ಮೋದಿ ಹೇಳಿದರು. ಈ ಸಮಾರಂಭದಲ್ಲಿ ಮೋದಿ ಅವರು ಮಧ್ಯಪ್ರದೇಶದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.
ಇದನ್ನೂ ಓದಿ: ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!
