ಒಡಿಶಾ ರೈಲು ದುರಂತ ಮಾಸುವ ಮುನ್ನವೇ ಬಿಹಾರದಲ್ಲಿ ಈಶಾನ್ಯ ಎಕ್ಸ್‌ಪ್ರೆಸ್ ಅಪಘಾತ: ನಾಲ್ವರು ಸಾವು
ಒಡಿಶಾದ ಬಾಲಾಸೋರ್ ರೈಲು ದುರಂತ ನೋವು ಇನ್ನು ಮಾಸಿಲ್ಲ. ಇದೀಗ ಬಿಹಾರದಲ್ಲಿ ಈಶಾನ್ಯ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿ ನಾಲ್ವರು ಸಾವನ್ನಪ್ಪಿದ್ದಾರೆ. 3 ಬೋಗಿಗಳು ಹಳಿ ತಪ್ಪಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.

ಪಾಟ್ನಾ(ಅ.11) ಭಾರತೀಯ ರೈಲು ಇತಿಹಾಸದಲ್ಲಿ ನಡೆದ ಅತ್ಯಂತ ಘನಘೋರ ಒಡಿಶಾ ರೈಲು ದುರಂತ ನಡೆದ ನಾಲ್ಕೇ ತಿಂಗಳಿಗೆ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಬಿಹಾರದ ರಘುನಾಥ್ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ನಾಲ್ವರು ಸಾವನ್ನಪ್ಪಿ 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ದೆಹಲಿಯ ಆನಂದ್ ವಿಹಾರ್‌ನಿಂದ ಹೊರಟ ರೈಲು ರುಘನಾಥ್ ರೈಲು ನಿಲ್ದಾಣದ ಬಳಿಕ ಹಳಿ ತಪ್ಪಿದೆ. ಮೂರು ಬೋಗಿಗಳು ಸಂಪೂರ್ಣವಾಗಿ ಪಲ್ಟಿಯಾಗಿ ಕೆಲ ದೂರ ಎಳೆದೊಯ್ದಿದೆ. ಸ್ಥಳೀಯರು, ಪೊಲೀಸರು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಿಂದ ಅಸ್ಸಾಂನ ಕಾಮಾಕ್ಯ ರೈಲು ನಿಲ್ದಾಣಕ್ಕೆ ಹೊರಟ ಈ ರೈಲು ಅಪಘಾತಕ್ಕೀಡಾಗಿದೆ. ವೈದ್ಯಕೀಯ ತಂಡ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರ ನೆರವಿನಿಂದ ಬೋಗಿಯೊಳಗೆ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ರೈಲು ಇಲಾಖೆ ಸಹಾಯವಾಣಿ ತೆರೆದಿದೆ.
ಪಾಟ್ನ ಜಂಕ್ಷನ್: 9771449971
ದಾನಾಪುರ್: 8905697493
ಅರಾ: 8306182542