ನವದೆಹಲಿ(ಡಿ.16): ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್‌ ಹೆರಿಗೆ ವಿಧಾನವೇ ಈಗ ಸಾಮಾನ್ಯ ಎನ್ನುವಂತಾಗಿದೆ. ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರ ಸೇರಿದಂತೆ 18 ರಾಜ್ಯಗಳ ಪೈಕಿ 10 ರಾಜ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಗಿಂತ ಸಿಸೇರಿಯನ್‌ ಹೆರಿಗೆಯ ಪಾಲೇ ಹೆಚ್ಚು. ಈ ಪೈಕಿ ಮೂರು ರಾಜ್ಯಗಳಲ್ಲಿ ಸಿಸೇರಿಯನ್‌ ಹೆರಿಗೆಯ ಪ್ರಮಾಣ ಶೇ.80ಕ್ಕಿಂತಲೂ ಅಧಿಕ.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿಸೇರಿಯನ್‌ ಹೆರಿಯ ಪ್ರಮಾಣ ಖಾಸಗಿ ಆಸ್ಪತ್ರೆಗಳಲ್ಲಿ ಶೇ.52.5 ರಷ್ಟುಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.22.6ರಷ್ಟುಹೆರಿಯನ್ನು ಸಿಸೇರಿಯನ್‌ ಮೂಲಕ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಸರಾಸರಿ ಶೇ.31.5ರಷ್ಟುಹೆರಿಗೆಗಳು ಸಿಸೇರಿಯನ್‌ ಆಗಿವೆ. ಸಿಸೇರಿಯನ್‌ ಹೆರಿಗೆಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ನ್ಯಾಷನಲ್‌ ಹೆಲ್ತ್‌ ಸರ್ವೆ 2019-20ರ ವರದಿಯ ಪ್ರಕಾರ, ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಸಿಸೇರಿಯನ್‌ ಹೆರಿಗೆಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಶೇ.82.7ರಷ್ಟುಹೆರಿಗೆಯನ್ನು ಸಿಸೇರಿಯನ್‌ ಮೂಲಕ ನೆರವೇರಿಸುತ್ತಿವೆ.

ಆದರೆ, ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಗಳು ಇದಕ್ಕೆ ತದ್ವಿರುದ್ಧ ಶೇ.22ರಷ್ಟುಹೆರಿಗೆಗಳು ಮಾತ್ರ ಸಿಸೇರಿಯನ್‌ ಮೂಲಕ ನಡೆಯುತ್ತಿವೆ. ಎರಡನೇ ಸ್ಥಾನದಲ್ಲಿರುವ ತೆಲಂಗಾಣದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.81.5ರಷ್ಟುಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಶೇ.44.5ರಷ್ಟು ಹೆರಿಗೆಯನ್ನು ಸಿಸೇರಿಯನ್‌ ಮೂಲಕ ನೆರವೇರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.