Asianet Suvarna News Asianet Suvarna News

ಸಬ್ಸಿಡಿ ರಹಿತ ಎಲ್‌ಪಿಜಿ ದರ 50 ರು. ಇಳಿಕೆ: ನಿನ್ನೆಯಿಂದಲೇ ಜಾರಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಬೆನ್ನಲ್ಲೇ, ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು 50 ರು.ನಷ್ಟುಇಳಿಕೆ ಮಾಡಿವೆ. ಭಾನುವಾರದಿಂದಲೇ ಈ ಇಳಿಕೆ ಜಾರಿಯಾಗಿದೆ. 

Non Subsidized LPG Price reduced by more than Rs 50 Rs cylinder
Author
Bengaluru, First Published Mar 2, 2020, 10:26 AM IST

ನವದೆಹಲಿ (ಮಾ. 02): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಬೆನ್ನಲ್ಲೇ, ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು 50 ರು.ನಷ್ಟುಇಳಿಕೆ ಮಾಡಿವೆ. ಭಾನುವಾರದಿಂದಲೇ ಈ ಇಳಿಕೆ ಜಾರಿಯಾಗಿದೆ.

200 ರು ತಲುಪಿದ್ದ ಈರುಳ್ಳಿ ಬೆಲೆ ಈಗ 10 ರು

ದರ ಇಳಿಕೆಯಿಂದಾಗಿ ಬೆಂಗಳೂರಿನಲ್ಲಿ 14.2 ಕೆ.ಜಿ ಸಿಲಿಂಡರ್‌ ಬೆಲೆ 862.5 ರು. ನಿಂದ 812.5ಗೆ ಇಳಿದಿದೆ. ದೆಹಲಿಯಲ್ಲಿ 858 ರು. ನಿಂದ 805 ರು.ಗೆ ಹಾಗೂ ಚೆನ್ನೈನಲ್ಲಿ 826.5ರು. ನಿಂದ 776.5ಕ್ಕೆ ಇಳಿದಿದೆ. ಕೆಲ ದಿನಗಳ ಹಿಂದಷ್ಟೇ ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯಲ್ಲಿ 150 ರು.ನಷ್ಟುಭರ್ಜರಿ ಏರಿಕೆ ಮಾಡಲಾಗಿತ್ತು.

ಆದರೆ ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಮತ್ತು ಎಲ್‌ಪಿಜಿ ಬೇಡಿಕೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪರಿಣಾಮ ಇವುಗಳ ಬೆಲೆಯಲ್ಲೂ ಭಾರೀ ಇಳಿಕೆ ಕಂಡುಬಂದಿದೆ.

Follow Us:
Download App:
  • android
  • ios