ತಿರುಪತಿ(ಸೆ. 22)   ಬೇರೆ ಜಾತಿ, ನಂಬಿಕೆ, ಧರ್ಮಕ್ಕೆ ಸೇರಿದ ಯಾವುದೆ ವ್ಯಕ್ತಿ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡುವುದಾದರೆ ಸ್ವಯಂ ಪ್ರಕಟಣೆ ಮಾಡಬೇಕು ಎಂದು ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ ಸೋಮು ವೀರಾಜು ಹೇಳಿದ್ದಾರೆ.

 ಹಿಂದೂಗಳಲ್ಲದವರು ತಿರುಪತಿ ದೇವಾಲಯಕ್ಕೆ ಬಂದರೆ ಸ್ವಯಂ  ಘೋಷಣೆ ಮಾಡಿಕೊಳ್ಳಬೇಕು.  ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಹ ಭೇಟಿ ನೀಡಿದ್ದ ವೇಳೆ ಡಿಕ್ಲೋರೇಶನ್ ಫಾರ್ಮ್‌ ಗೆ ಸಹಿ ಮಾಡಿದ್ದರು.  ಈ ಕಾನೂನು  ಹಿಂದೂಗಳಲ್ಲದವರಿಗೆ ಅನ್ವಯಯಾಗುತ್ತದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ದೇವರ ಬಗ್ಗೆ ಅಸಡ್ಡೆ ಮತ್ತು ನಿರ್ಜಜ್ಜತನದ ಮಾತನಾಡುವ ರಾಜಕೀಯ ನಾಯಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಕೇಂದ್ರ ಸರ್ಕಾರ ತರಬೇಕು ಎಂದು ಒತ್ತಾಯ ಮಾಡಿದ್ದಾರೆ.

ಭಗವಾನ್ ಹನುಮಾನ್ ದೇವರ ಬಗ್ಗೆ ಸಚಿವ ಕೋಡಾಲಿ ವೆಂಕಟೇಶ್ವರ ರಾವ್ ನೀಡಿದ್ದ ಹೇಳಿಕೆ ಖಂಡಿಸಿರುವ ಸೋಮು ಸಚಿವರು ತಮ್ಮ ಮಾತನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.  ದಚಿವರ ವಿರುದ್ಧ ರಾಜ್ಯಾದ್ಯಂತ ಹಿಂದೂ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ದೂರು ದಾಖಲಾಗಿದೆ.

ಟಿಡಿಪಿ ಅಧಿಕಾರದಲ್ಲಿ ಇದ್ದಾಗ  ವಿಜಯವಾಡದಲ್ಲಿ ಮೂವತ್ತು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲಾಗಿತ್ತು. ಗೋದಾವರಿ ಪುಷ್ಕರಣದಲ್ಲಿ ಮೂವತ್ತು ಜನರು ಸಾವಿಗೆ ಗುರಿಯಾಗಿದ್ದಕ್ಕೆ ಚಂದ್ರಬಾಬು ನಾಯ್ಡು ಅವರೇ ಕಾರಣ ಎಂದು 2015 ರ ಘಟನೆಯನ್ನು ಮತ್ತೆ ಉಲ್ಲೇಖ ಮಾಡಿದ್ದಾರೆ.