Asianet Suvarna News Asianet Suvarna News

ಹಣ ಕೂಡಿಟ್ಟು ಪಿಜಿಯಲ್ಲಿ ಜೊತೆಗಿರುವ ಯುವತಿಯರ ಟ್ರಿಪ್ ಪ್ಲಾನ್, ದುರಂತ ಅಂತ್ಯ ಕಂಡ ಪ್ರವಾಸ!

ಬೇರೆ ಬೇರೆ ಕಂಪನಿಯಲ್ಲಿ ಕೆಲಸ, ಆದರೆ ಒಂದೇ ಪಿಜಿಯಲ್ಲಿ ವಾಸ. ಕಳೆದ 6 ತಿಂಗಳಿನಿಂದ ಬಂದ ಸ್ಯಾಲರಿಯಲ್ಲಿ ಹಣ ಕೂಡಿಟ್ಟು ಟ್ರಿಪ್ ಪ್ಲಾನ್ ಮಾಡಿದ್ದಾರೆ. ಉತ್ತರಖಂಡ ಪ್ರವಾಸ ಹೊರಟ 6 ಯುವತಿಯರ ಪೈಕಿ ನಾಲ್ವರು ದುರಂತ ಅಂತ್ಯ ಕಂಡರೆ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Noida 6 PG Girls trip ends with tragic accident two were only survive ckm
Author
First Published Jun 18, 2024, 6:51 PM IST | Last Updated Jun 18, 2024, 6:51 PM IST

ನೋಯ್ಡಾ(ಜೂ.18) ಕೆಲಸಕ್ಕೆ ಸೇರಿದ ಬಳಿಕ ರೋಮ್ ಮೇಟ್ಸ್, ಪಿಜಿ ಮೇಟ್ಸ್, ಹಾಸ್ಟೆಲ್ ಮೇಸ್ಟ್ ಸೇರಿದಂತೆ ಜೊತೆಗಿರುವ ಜೊತೆ ಟ್ರಿಪ್, ಮಸ್ತಿ ಎಲ್ಲವೂ ಇದ್ದಿದ್ದೆ. ಹೀಗೆ ನೋಯ್ಡಾದಲ್ಲಿ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ 6 ಯುವತಿಯರು ಒಂದೇ ಪಿಜಿಯಲ್ಲಿ ವಾಸವಿದ್ದರು. ಕಳೆದ 6 ತಿಂಗಳಿಂದ ಟ್ರಿಪ್ ಪ್ಲಾನ್ ಮಾಡಿದ್ದಾರೆ. 6 ಯುವತಿರು ಇದಕ್ಕಾಗಿ ತಮ್ಮ ಸ್ಯಾಲರಿಯಲ್ಲಿ ಒಂದಿಷ್ಟು ಹಣ ಕೂಡಿಡಲು ಆರಂಭಿಸಿದ್ದಾರೆ. ಹಣ ಕೂಡಿಟ್ಟು ಉತ್ತರಖಂಡ್‌ಗೆ ಪ್ರವಾಸ ಹೊರಟಿದ್ದಾರೆ. ಆದರೆ ಉತ್ತರಖಂಡದಲ್ಲಿ ನಡೆದ ಭೀಕರ ಅಪಘಾತದಲ್ಲಿ 6 ಯುವತಿಯರ ಪೈಕಿ ನಾಲ್ವರು ಮತಪಟ್ಟರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೋಯ್ಡಾದ ಸೆಕ್ಟರ್ 51 ಪಿಜಿಯಲ್ಲಿ ವಾಸವಿದ್ದ 6 ಯುವತಿರು, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪಿಜಿಯಲ್ಲಿ ಜೊತೆಗಿರುವ ಈ ಯುವತಿಯರು ಟ್ರಿಪ್ ಪ್ಲಾನ್ ಮಾಡಿದ್ದಾರೆ. ಕೆಲಸ, ಒತ್ತಡದ ಜೀವನ, ಜಂಟಾಗಳಿಂದ ಕೆಲ ದಿನ ರಿಫ್ರೆಶ್ ಆಗಲು ಬಯಸಿದ್ದಾರೆ. ಹಲವು ಸುತ್ತಿನ ಚರ್ಚೆ ಬಳಿಕ ಉತ್ತರಖಂಡಕ್ಕೆ ಪ್ರವಾಸ ಫಿಕ್ಸ್ ಮಾಡಿದ್ದಾರೆ. 

Boat Accident ಗಂಗಾ ನದಿಯಲ್ಲಿ ಮುಳುಗಿದ ಭಕ್ತರ ದೋಣಿ, 17ರ ಮಂದಿ ಪೈಕಿ 6 ಜನ ನಾಪತ್ತೆ!

ಪ್ರಯಾಣ, ಉಳಿದುಕೊಳ್ಳುವ ಹೊಟೆಲ್, ಊಟ, ತಿರುಗಾಟಕ್ಕಾಗಿ ಒಂದಿಷ್ಟು ಹಣ ಬೇಕು. ಹೀಗಾಗಿ ಯುವತಿಯರು ಕಳೆದ 6 ತಿಂಗಳಿನಿಂದ ಹಣ ಕೂಡಿಡಲು ಆರಂಭಿಸಿದ್ದಾರೆ. ಕೂಡಿಟ್ಟ ಹಣದೊಂದಿಗೆ ಉತ್ತರಖಂಡ ಪ್ರವಾಸ ತೆರಳಿದ್ದಾರೆ. ರುದ್ರಪ್ರಯಾಗದಲ್ಲಿ  ಯುವತಿಯರು ಟೆಂಪೋ ಟ್ರಾವಲರ್ ಮೂಲಕ ಸಾಗುತ್ತಿದ್ದರು. ಈ ವೇಳೆ 27 ವರ್ಷದ ಶುಭಂ ಸಿಂಗ್ ಆಪ್ತರಿಗೆ ವಿಡಿಯೋ ಕಾಲ್ ಮಾಡಿ ಪ್ರಕೃತಿ ಸೌಂದರ್ಯ ತೋರಿಸಿದ್ದರು. ಇದಾದ ಕೆಲವೇ ಹೊತ್ತಲ್ಲಿ ಈ ಟೆಂಪೋ ಟ್ರಾವಲರ್ ಅಪಘಾತಕ್ಕೀಡಾಗಿದೆ.

6 ಯುವತಿಯರು ಸೇರಿದಂತೆ ಒಟ್ಟು 26 ಮಂದಿ ಇದ್ದ ಈ ಟೆಂಪೋ ಟ್ರಾವಲರ್ ಅಪಘಾತದಿಂದ ಪ್ರಪಾತಕ್ಕೆ ಉರುಳಿದೆ. ಭೀಕರ ಅಪಘಾತದಲ್ಲಿ ಯುವತಿಯರ ಗುಂಪಿನಲ್ಲಿದ್ದ 6 ಮಂದಿ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬದ್ರಿನಾಥ್ ಹೆದ್ದಾರಿಯಲ್ಲಿ ಭೀಕರ ಅಪಘಾತ, ಪ್ರಯಾಣಿಕರ ಬಸ್ ನದಿಗೆ ಉರುಳಿ 10 ಸಾವು!

ಪ್ರತಿ ದಿನ ಕಚೇರಿ ಕೆಲಸದಲ್ಲಿ ಮಗ್ನರಾಗಿದ್ದ ಯುವತಿರು ಪ್ರವಾಸಕ್ಕೆ ತೆರಳಿ ತುಂಬಾ ಖುಷಿಯಾಗಿದ್ದರು. ಇವರ ಪ್ರಯಾಣದಲ್ಲೇ ಮತ್ತೊಂದು ಟ್ರಿಪ್ ಕುರಿತು ಪ್ಲಾನ್ ಮಾಡಿದ್ದರು. ಪ್ರತಿ 6 ತಿಂಗಳಿಗೆ ಒಮ್ಮೆ ಹಣ ಕೂಡಿಟ್ಟು ಟ್ರಿಪ್ ಮಾಡಲು ಎಲ್ಲರೂ ಚರ್ಚಿಸಿದ್ದರು. ಈ ಪ್ಲಾನ್‌ಗೆ ಎಲ್ಲರೂ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಅಪಘಾತದಲ್ಲಿ ಇದೀಗ ಬದುಕುಳಿದವರು ಇಬ್ಬರು ಮಾತ್ರ. 
 

Latest Videos
Follow Us:
Download App:
  • android
  • ios