ಮಂದಸೂರ್ (ಅ.26): ಕಾಂಗ್ರೆಸ್‌ನಲ್ಲಿ ಇನ್ನೇನು ಉಳಿದಿಲ್ಲ, ಯಾರೂ ಅಲ್ಲಿ ಉಳಿಯಲೂ ಬಯಸುತ್ತಿಲ್ಲ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. 

ಕಾಂಗ್ರೆಸ್ ತೊರೆದವರನ್ನು ಕಮಲ್ ನಾಥ್ ಹಾಗೂ ದಿಗ್ವಿಜಯ್ ಸಿಂಗ್  ಮಾರಾಟವಾದವರು ಎಂದು ಕರೆದಿದದ್ದಾರೆ. ಆದರೆ ಮೋತಿಲಾಲ್ ನೆಹರು ಹಾಗೂ ಸುಭಾಷ್ ಚಂದ್ರ ಬೋಷ್ ಅವರೂ ಕಾಂಗ್ರೆಸ್ ತೊರೆದಿದ್ದರು. ಇಂದಿರಾ ಜಿ ಅವರು ಕಾಂಗ್ರೆಸ್ ತೊರೆದಿದ್ದರು. ದಿಗ್ವಿಜಯ್ ಸಿಂಗ್ ಅವರ ಸಹೋದರ ಕೂಡ ಕಾಂಗ್ರೆಸ್ ತೊರೆದಿದ್ದರು. ಇನ್ನೇನು ಉಳಿದಿದೆ ಕಾಂಗ್ರೆಸ್ ಬಳಿ ಎಂದು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದರು. 

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಸಂದರ್ಶನ: ಡಿ.ಕೆ. ರವಿ ಬಗ್ಗೆ ಮನದ ಮಾತು..!

ಮಧ್ಯ ಪ್ರದೇಶ ಕಾಂಗ್ರೆಸಿಗೆ ಕಮಲ್ ನಾಥ್ ಒಬ್ಬರೇ ಸರ್ವಾಧಿಕಾರಿಯಾಗಿದ್ದಾರೆ. ಮುಖ್ಯಮಂತ್ರಿ, ಅಧ್ಯಕ್ಷ, ವಿಪಕ್ಷ ನಾಯಕ ಎಲ್ಲವೂ ಅವರೇ ಆಗಿದ್ದಾರೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. 

74 ನೇ ವರ್ಷದಲ್ಲಿ ಕಮಲ್ ನಾಥ್ ಸಚಿವೆಯೊಬ್ಬರ ಬಗ್ಗೆ ಹೇಳಿದ ಮಾತಿಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.  ರಾಜ್ಯದಲ್ಲಿ ಕೊಟ್ಟಿದ್ದ ಯಾವುದೇ ಭರವಸೆಯನ್ನೂ ಈಡೇರಿಸುವಲ್ಲಿಯೂ ಪಕ್ಷ ಸಫಲವಾಗಿಲ್ಲ ಎಂದರು.