ನಿರ್ಭಯಾ ಹಂತಕರ ಅಂತಿಮ ಆಟವೂ ಫೇಲ್: ಮಾ. 20ಕ್ಕೆ ಗಲ್ಲು ಫಿಕ್ಸ್!
ನಿರ್ಭಯಾ ದೋಷಿಗಳ ಅಂತಿಮ ಆಟವೂ ಫೇಲ್| ಅಪರಾಧಿ ಮುಕೇಶ್ ಸಿಂಗ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್| ಮಾ. 20ಕ್ಕೆ ಗಲ್ಲು ಫಿಕ್ಸ್
ನವದೆಹಲಿ[ಮಾ.16]: ನಿರ್ಭಯಾ ರೇಪ್ ಪ್ರಕರಣದ ದೋಷಿ ಮುಕೇಶ್ ಕೊನೆಯ ಆಟಕ್ಕೂ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಮುಕೇಶ್ ಗೆ ಶಾಕ್ ಕೊಟ್ಟಿರುವ ಸುಪ್ರೀಂ ಮತ್ತೊಂದು ಬಾರಿ ಕ್ಯುರೇಟಿವ್ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ನಿರ್ಭಯಾ ದೋಷಿ ಮುಕೇಶ್ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಅರುಣ್ ಮಿಶ್ರಾ ಹಾಗೂ ಜಸ್ಟೀಸ್ ಎಂ. ಆರ್. ಶಾ ನೇತೃತ್ವದ ಸುಪ್ರೀಂ ಪೀಠ, ಆತನ ಅರ್ಜಿ ವಜಾಗೊಳಿಸಿದೆ. ಮುಕೇಶ್ ತನ್ನ ಅರ್ಜಿಯಲ್ಲಿ ಈ ಹಿಂದೆ ತನ್ನ ಪರ ವಾದಿಸುತ್ತಿದ್ದ ವಕೀಲ ವೃಂದಾ ಗ್ರೋವರ್ ತನ್ನ ಮೇಲೆ ಒತ್ತಡ ಹೇರಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತನಗೆ ಮತ್ತೊಂದು ಬಾರಿ ಕ್ಯುರೇಟಿವ್ ಅರ್ಜಿ ಹಾಗೂ ಕ್ಷಮಾದಾನ ಸರ್ಜಿ ಸಲ್ಲಿಸುವ ಅವಕಾಶ ನೀಡಬೇಕೆಂದು ಸುಪ್ರೀಂಗೆ ಮನವಿ ಮಾಡಿದ್ದರು. ಆದರೀಗ ನ್ಯಾಯಾಲಯ ಆತನ ಮನವಿಯನ್ನು ವಜಾಗೊಳಿಸಿದೆ.
ಇನ್ನು ಈ ಅರ್ಜಿ ವಜಾಗೊಂ.ಡಿರುವುದರಿಂದ ನಿರ್ಭಯಾ ದೋಷಿಗಳ ಬಳಿ ಇದ್ದ ಎಲ್ಲಾ ಕಾನೂನಾತ್ಮಕ ಹಾದಿಗಳಿಗೆ ಬ್ರೇಕ್ ಬಿದ್ದಿದ್ದು, ಡೆತ್ ವಾರಂಟ್ ಅನ್ವಯ ಮಾರ್ಚ್ 20ರ ಬೆಳಗ್ಗೆ 05.30ಕ್ಕೆ ಗಲ್ಲಿಗೇರಿಸುವುದು ಖಚಿತವಾಗಿದೆ.
ವಿಚಾರಣೆ ವೇಳೆ ಈ ಕುರಿತು ಉಲ್ಲೇಖಿಸಲಾಗಿದ್ದು, ದೋಷಿಗಳು ತಮ್ಮ ಬಳಿ ಇದ್ದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಇನ್ನ್ಯಾವುದೇ ಹಾದಿ ಉಳಿದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನಿರ್ಭಯಾ ಹಂತಕರ ನೇಣಿಗೇರಿಸುವಾತಗೆ ಜೈಲಿನಿಂದ ಬುಲಾವ್
ನಿರ್ಭಯಾ ಗ್ಯಾಂಗ್‌ರೇಪ್ ಭೀಕರ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳು ದೇಶದ ಕಾನೂನುಗಳನ್ನೇ ದಾಳವಾಗಿ ಬಳಸಿಕೊಂಡು ತಮ್ಮ ಗಲ್ಲು ಶಿಕ್ಷೆಯನ್ನು ಮತ್ತೆ ಮುಂದೂಡಲು ಯತ್ನಿಸುತ್ತಿರುವ ಬೆನ್ನಲ್ಲೇ, ಮಾ.20ರಂದು ನಿಗದಿಯಾಗಿರುವ ಈ ನಾಲ್ವರ ಗಲ್ಲು ಶಿಕ್ಷೆಗೆ ತಿಹಾರ್ ಜೈಲಿನ ಸಿಬ್ಬಂದಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಮಾ.20ಕ್ಕೆ 3 ದಿನಗಳ ಮುಂಚಿತವಾಗಿ ತಿಹಾರ್ ಜೈಲಿಗೆ ಆಗಮಿಸಬೇಕು ಎಂದು ನೇಣಿಗೇರಿಸುವ ಪವನ್ ಜಲ್ಲಾದ್ ಅವರಿಗೆ ಜೈಲು ಅಧಿಕಾರಿಗಳು ಕೋರಿದ್ದಾರೆ. ಈ ಹಿಂದೆ ಕಾನೂನು ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಈ ಪ್ರಕರಣದ ನಾಲ್ವರು ದೋಷಿಗಳು 3 ಬಾರಿ ನೇಣು ಕುಣಿಕೆಯಿಂದ ಪಾರಾಗಿದ್ದರು.