Asianet Suvarna News Asianet Suvarna News

ಲಾಕ್‌ಡೌನ್ ಹೇರಿಕೆ ಬಗ್ಗೆ ಕೇಂದ್ರದ ನಿಲುವೇನು? ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು!

ಲಾಕ್‌‌ಡೌನ್‌ ಹೇರಿಕೆ ಬಗ್ಗೆ ಒಲವಿಲ್ಲ| ಸರ್ಕಾರ ಲಾಕ್‌ಡೌನ್ ಹೇರಲ್ಲ| ಸರ್ಕಾರದ ನಿಲುವು ಸ್ಪಷ್ಟಪಡಿಸಿದ ನಿರ್ಮಲಾ ಸೀತಾರಾಮನ್

No Plan Of Imposing Lockdown In India Finance Minister Nirmala Sitharaman pod
Author
Bangalore, First Published Apr 14, 2021, 9:08 AM IST

ನವದೆಹಲಿ(ಏ.14): ಒಂದೆಡೆ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಿರುವಾಗ ಇತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲಾಕ್‌ಡೌನ್ ಬಗ್ಗೆ ಮಾತನಾಡುತ್ತಾ ಸರ್ಕಾರ ವ್ಯಾಪಕವಾಗಿ ಲಾಕ್‌ಡೌನ್ ಹೇರುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಮಹಾಮಾರಿಗೆ ಬ್ರೇಕ್ ಹಾಕಲು ಕೇವಲ ಸ್ಥಳೀಯ ಮಟ್ಟದಲ್ಲಿ ನಿಯಂತ್ರಣಾ ಕ್ರಮ ಕೈಗೊಳ್ಳಲಿದೆ ಎಂದೂ ತಿಳಿಸಿದ್ದಾರೆ. ದೇಶಾದ್ಯಂತ ಕೊರೋನಾ ಪ್ರಕರಣಗಳು ಏರುತ್ತಿರುವ ಮಧ್ಯೆ ಅವರು ಈ ಮಾತುಗಳನ್ನಾಡಿದ್ದಾರೆ.

ವಿಶ್ವಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್‌ಪಾಸ್‌ ಜೊತೆ ನಡೆದ 'ಆನ್‌ಲೈನ್‌' ಸಂವಾದದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತದ ಪ್ರಗತಿ ಹಾಗೂ ಹೆಚ್ಚಿನ ಸಾಲ ಸೌಲಭ್ಯಕ್ಕಾಗಿ ವ್ಯಾಪ್ತಿಯನ್ನು ಹೆಚ್ಚಿಸಲು ವಿಶ್ವಬ್ಯಾಂಕ್‌ ತೆಗೆದುಕೊಂಡ ಕ್ರಮವನ್ನು ಶ್ಲಾಘಿಸಿದ್ದಾರೆ. 

ಈ ಬಗ್ಗೆ ಹಣಕಾಸು ಸಚಿವಾಲಯದ ಅಧಿಕೇತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಮತ್ತೆ ಹರಡುವುದನ್ನು ತಡೆಗಟ್ಟುಲು ಐದು ಅಂಶಗಳ ಕಾರ್ಯತಂತ್ರ... ತನಿಖೆ, ಪತ್ತೆ, ಚಿಕಿತ್ಸೆ, ವ್ಯಾಕ್ಸಿನೇಷನ್ ಮತ್ತು ಸೋಂಕು ತಡೆಯಲು ಬೇಕಾದ ಕ್ರಮ ಒಳಗೊಂಡಂತೆ  ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಭಾರತ ತೆಗೆದುಕೊಂಡ ಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತುತಪಡಿಸಿದರು ಎಂದಿದೆ. 

Follow Us:
Download App:
  • android
  • ios