ಕೆಲವರಿಗೆ ಮೋದಿ ಮೊದಲು. ದೇಶ ನಂತರ ಎಂದು ತಮ್ಮ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಟಿ ಬೀಸುತ್ತಲೇ ಗೂಢಾರ್ಥದ ಟ್ವೀಟ್‌ ಮಾಡಿರುವ ಸಂಸದ ಶಶಿ ತರೂರ್‌, ಪಕ್ಷಿಯ ಚಿತ್ರವೊಂದನ್ನು ಹಾಕಿ ಹಾರಲು ಅನುಮತಿ ಬೇಕಿಲ್ಲ. ರೆಕ್ಕೆ ನಿನ್ನದು. ಆಕಾಶ ಯಾರ ಸೊತ್ತೂ ಅಲ್ಲ ಎಂದು ಬರೆದಿದ್ದಾರೆ.

ನವದೆಹಲಿ: ಕೆಲವರಿಗೆ ಮೋದಿ ಮೊದಲು. ದೇಶ ನಂತರ ಎಂದು ತಮ್ಮ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಟಿ ಬೀಸುತ್ತಲೇ ಗೂಢಾರ್ಥದ ಟ್ವೀಟ್‌ ಮಾಡಿರುವ ಸಂಸದ ಶಶಿ ತರೂರ್‌, ಪಕ್ಷಿಯ ಚಿತ್ರವೊಂದನ್ನು ಹಾಕಿ ಹಾರಲು ಅನುಮತಿ ಬೇಕಿಲ್ಲ. ರೆಕ್ಕೆ ನಿನ್ನದು. ಆಕಾಶ ಯಾರ ಸೊತ್ತೂ ಅಲ್ಲ ಎಂದು ಬರೆದಿದ್ದಾರೆ. ಇದರ ಬೆನ್ನಲ್ಲೇ ಅವರು ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಬಹುದೇ ಎಂಬ ಊಹಾಪೋಹ ಪುನಃ ಸೃಷ್ಟಿಯಾಗಿದೆ.

ಆಪರೇಶನ್‌ ಸಿಂದೂರ ಸೇರಿದಂತೆ ದೇಶಕ್ಕೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಹಾಗೂ ಕೆಲವು ಕೇಂದ್ರ ಸರ್ಕಾರದ ನೀತಿ ನಿರೂಪಣೆಗಳ ವಿಚಾರದಲ್ಲಿ ತರೂರ್‌ ಅವರು ಮೋದಿ ಸರ್ಕಾರಕ್ಕೆ ಬೆಂಬಲಿಸಿದ್ದರು. ಇದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ಖರ್ಗೆ ಬುಧವಾರ ಬೆಳಗ್ಗೆ, ‘ನಮಗೆ ದೇಶ ಮೊದಲಾದರೆ ಕೆಲವರಿಗೆ ಮೋದಿ ಮೊದಲು’ ಎಂದು ಟಾಂಗ್ ನೀಡಿದ್ದರು.

ಇತ್ತೀಚೆಗೆ ತರೂರ್ ಇಷ್ಟೆಲ್ಲ ವಿದ್ಯಮಾನಗಳು ನಡೆದಿದ್ದರೂ, ‘ನಾನು ಕಾಂಗ್ರೆಸ್‌ ಬಿಡುವ ಪ್ರಶ್ನೆಯೇ ಇಲ್ಲ’ ಎಂದಿದ್ದರು.