- Home
- News
- India News
- ಪಹಲ್ಗಾಮ್ ದಾಳಿ ಬಗ್ಗೆ ಶಶಿ ತರೂರ್ ಪ್ರಶ್ನಿಸಿದ ಮಗ ಇಶಾನ್ ತರೂರ್ ಯಾರು? ಭಾರತದಲ್ಲಿ ಇಲ್ಲವೇಕೆ?
ಪಹಲ್ಗಾಮ್ ದಾಳಿ ಬಗ್ಗೆ ಶಶಿ ತರೂರ್ ಪ್ರಶ್ನಿಸಿದ ಮಗ ಇಶಾನ್ ತರೂರ್ ಯಾರು? ಭಾರತದಲ್ಲಿ ಇಲ್ಲವೇಕೆ?
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಶಶಿ ತರೂರ್ ಅವರನ್ನು ಪ್ರಶ್ನಿಸಿದ ಪತ್ರಕರ್ತ ಇಶಾನ್ ತರೂರ್, ವಾಷಿಂಗ್ಟನ್ ಪೋಸ್ಟ್‌ನಲ್ಲಿ ಜಾಗತಿಕ ವ್ಯವಹಾರಗಳ ಅಂಕಣಕಾರರಾಗಿದ್ದಾರೆ. ಶಶಿ ತರೂರ್ ಮತ್ತು ಅವರ ಮೊದಲ ಪತ್ನಿ ತಿಲೋತ್ತಮ ಮುಖರ್ಜಿ ಅವರ ಅವಳಿ ಪುತ್ರರಲ್ಲಿ ಒಬ್ಬರು.
- FB
- TW
- Linkdin
Follow Us
)
ಅಮೆರಿಕದಲ್ಲಿ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಅವರ ಮಗ ಇಶಾನ್ ತರೂರ್ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಬಗ್ಗೆ ಗುರುವಾರ ಪತ್ರಕರ್ತರಾಗಿ ಪ್ರಶ್ನೆ ಕೇಳಿದರು. ಆ ಬಳಿಕ ಶಶಿ ತರೂರ್ ಅವರ ಮಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ? ಎಲ್ಲಿ ಕೆಲಸ ಮಾಡುತ್ತಿದ್ದಾರೆ? ಅವರ ಮೊದಲ ಪತ್ನಿ ಯಾರು? ಎಂಬ ಬಗ್ಗೆ ವ್ಯಾಪಕ ಪ್ರಶ್ನೆ ಹುಟ್ಟಿಕೊಂಡಿದೆ.
ತಿರುವನಂತಪುರಂ ಕಾಂಗ್ರೆಸ್ ಸಂಸದ, ಸದ್ಯಕ್ಕೆ ಪಾಕಿಸ್ತಾನದದ ಭಯೋತ್ಪಾದನೆ ಶಮನಕ್ಕೆ ಬೆಂಬಲ ಕೇಳಿ ಇತರ ದೇಶಗಳಿಗೆ ಪ್ರವಾಸ ಕೈಗೊಂಡಿರುವ ಸರ್ವಪಕ್ಷ ನಿಯೋಗವನ್ನು ಮುನ್ನಡೆಸುತ್ತಿರುವ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್. ಅವರು ಅಮೆರಿಕದ ವಾಷಿಂಗ್ಟನ್, ಡಿಸಿಯಲ್ಲಿ ನೆಲೆಸಿರುವ ಪತ್ರಕರ್ತರಾಗಿದ್ದಾರೆ. ಇಶಾನ್ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಜಾಗತಿಕ ವ್ಯವಹಾರಗಳ ಅಂಕಣಕಾರರಾಗಿದ್ದಾರೆ
ಶಶಿ ತರೂರ್ ಮತ್ತು ಮೊದಲ ಪತ್ನಿ ತಿಲೋತ್ತಮ ಮುಖರ್ಜಿ ಅವರಿಗೆ ಜನಿಸಿದ ಅವಳಿ ಮಕ್ಕಳಲ್ಲಿ ಒಬ್ಬರು ಇಶಾನ್ ತರೂರ್ . 1984 ರಲ್ಲಿ ಸಿಂಗಾಪುರದಲ್ಲಿ ಇವರ ಜನಿಸಿದ ಇವರ ಅವಳಿ ಸಹೋದರ ಕನಿಷ್ಕ್ ತರೂರ್. ಇಶಾನ್ ತರೂರ್ 2006 ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಜನಾಂಗೀಯತೆ ಜೊತೆಗೆ ವರ್ಣಭೇದ ಮತ್ತು ವಲಸೆಯಲ್ಲಿ ಎಂಬ ವಿಚಾರದಲ್ಲಿ ಪದವಿ ಪಡೆದಿದ್ದಾರೆ ಜೊತೆಗೆ ಲಿಂಕ್ಡ್ಇನ್ ಬಯೋದ ಪ್ರಕಾರ ಸುಡ್ಲರ್ ಫೆಲೋಶಿಪ್ ಪಡೆದಿದ್ದಾರೆ.
ಇಶಾನ್ 2006 ರಲ್ಲಿ ಟೈಮ್ ನಿಯತಕಾಲಿಕೆಯಲ್ಲಿ ವರದಿಗಾರರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ನಂತರ ನ್ಯೂಯಾರ್ಕ್ ನಗರ ಪ್ರದೇಶದ ಹಿರಿಯ ಸಂಪಾದಕರಾಗಿ ಭಡ್ತಿ ಪಡೆದರು. 2014 ರಲ್ಲಿ ಟೈಮ್ ಅನ್ನು ತೊರೆದು ಅಮೆರಿಕದ ರಾಜಧಾನಿಯಲ್ಲಿ ವಾಷಿಂಗ್ಟನ್ ಪೋಸ್ಟ್‌ಗೆ ಸೇರ್ಪಡೆಗೊಂಡರು. ಇಶಾನ್ ಒಬ್ಬ ಶಿಕ್ಷಕರೂ ಆಗಿದ್ದು, 2018 ರಿಂದ ಒಂದೆರಡು ವರ್ಷಗಳ ಕಾಲ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಬೋಧಕರಾಗಿ ಕೆಲಸ ಮಾಡಿದ್ದಾರೆ. ವಿಶ್ವವಿದ್ಯಾಲಯದ ವಿದೇಶಿ ಸೇವೆಯ ಶಾಲೆಯಲ್ಲಿ 'ಡಿಜಿಟಲ್ ಯುಗದಲ್ಲಿ ಜಾಗತಿಕ ವ್ಯವಹಾರಗಳು' ಎಂಬ ವಿಷಯದ ಬಗ್ಗೆ ಪಾಠ ಮಾಡಿದ್ದಾರೆ.
ವಾಷಿಂಗ್ಟನ್ ಡಿಸಿ ಯಲ್ಲಿ ಅಂಕಣಕಾರರಾಗಿರುವ ಇಶಾನ್ ತಂದೆಯಂತೆಯೇ, ಅವರು ಈಗಾಗಲೇ ವಿಶ್ವ ವೇದಿಕೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. 2017ರಲ್ಲಿ ಅವರು ಅಮೆರಿಕದಲ್ಲಿ ಸಿಎನ್ಎನ್ ನೇಮಕಾತಿ ಅಧಿಕಾರಿಯಾಗಿರುವ ಭೂಮಿಕಾ ದೇವ್ ಅವರನ್ನು ವಿವಾಹವಾದರು. ಭಾರತೀಯ ಸಂಪ್ರದಾಯದಂತೆ ಅಮೆರಿಕದ ವರ್ಜೀನಿಯಾದ ಹಿಲ್ಟನ್ ರಿಚ್ಮಂಡ್ ಹೋಟೆಲ್ & ಸ್ಪಾ/ಶಾರ್ಟ್ ಪಂಪ್‌ನಲ್ಲಿ ನಡೆದ ಈ ಮದುವೆಯಲ್ಲಿ ಶಶಿ ತರೂರ್, ಮಾಜಿ ಪತ್ನಿ ತಿಲೋತ್ತಮ ಮುಖರ್ಜೀ, ಶಶಿ ತರೂರ್ ತಾಯಿ ಲಿಲಿ ತರೂರ್ ಸಹೋದರಿಯರಾದ ಶೋಭಾ, ಸ್ಮಿತಾ ಸೇರಿದಂತೆ ಕುಟುಂಬದ ಎಲ್ಲರೂ ಭಾಗಿಯಾಗಿದ್ದರು.
ನನ್ನ ಮಗ ಮತ್ತು ವಾಷಿಂಗ್ಟನ್ ಪೋಸ್ಟ್ ವಿದೇಶಾಂಗ ವ್ಯವಹಾರಗಳ ಲೇಖಕನಾದ ಇಷಾನ್ ತರೂರ್ ಅವರ ಪ್ರಶ್ನೆಗೆ ಪಾಕಿಸ್ತಾನವು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಾವು ಯಾವುದೇ ಪಾತ್ರ ವಹಿಸಿಲ್ಲವೆಂದು ಹೇಳುತ್ತಿರುವ ಬಗ್ಗೆ ನಾನು ನೀಡಿದ ಪ್ರತಿಕ್ರಿಯೆ ಹೀಗಿದೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶಶಿ ತರೂರ್ ಬರೆದುಕೊಂಡಿದ್ದಾರೆ.
2015 ರಲ್ಲಿ ಮತ್ತೊಬ್ಬ ಪುತ್ರ ಕನಿಷ್ಕ್ ತರೂರ್ ವಿವಾಹ ನ್ಯೂಯಾರ್ಕ್ ನಲ್ಲಿ ವಿದೇಶಿ ಗೆಳತಿಯೊಂದಿಗೆ ನಡೆದಿತ್ತು. ಕೊಲ್ಕತ್ತಾದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿತ್ತು. ಕನಿಷ್ಕ್ ತರೂರ್ ಕೂಡ ಖ್ಯಾತ ಬರಹಗಾರ, ಅಂಕಣಕಾರ ಮತ್ತು ಪತ್ರಕರ್ತರಾಗಿದ್ದಾರೆ.
ಶಶಿ ತರೂರ್ ಅವರಿಗೆ ಮೂರು ಮದುವೆಯಾಗಿದೆ. ಮೊದಲ ಪತ್ನಿ ತಿಲೋತ್ತಮ ಮುಖರ್ಜಿ (ನೀ ಮುಖರ್ಜಿ). ಇಶಾನ್ ಮತ್ತು ಕನಿಷ್ಕ್ ಇವರ ಅವಳಿ ಗಂಡು ಮಕ್ಕಳು. ಅರ್ಧ ಬಂಗಾಳಿ ಮತ್ತು ಅರ್ಧ ಕಾಶ್ಮೀರಿ ಶೈಕ್ಷಣಿಕ ಮತ್ತು ರಾಜಕಾರಣಿ ಕೈಲಾಶ್ ನಾಥ್ ಕಟ್ಜು ಅವರ ಮೊಮ್ಮಗಳು ತಿಲೋತ್ತಮ ಮುಖರ್ಜಿ. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಮ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು , ನಂತರ ದಿ ಸೋರ್ಬೊನ್ನೆ (ಪ್ಯಾರಿಸ್ ವಿಶ್ವವಿದ್ಯಾಲಯ) ಮತ್ತು ದಿ ಫ್ಲೆಚರ್ ಸ್ಕೂಲ್ ಆಫ್ ಲಾ ಅಂಡ್ ಡಿಪ್ಲೊಮಸಿ (ಟಫ್ಟ್ಸ್ ವಿಶ್ವವಿದ್ಯಾಲಯ, ಯುಎಸ್ಎ) ನಲ್ಲಿ ಶಿಕ್ಷಣವನ್ನು ಪಡೆದರು. ತರೂರ್ ಮತ್ತು ಮುಖರ್ಜಿ ಕಾಲೇಜು ದಿನಗಳಲ್ಲಿ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪ್ರೇಮಿಗಳಾಗಿದ್ದರು. 1981 ರಲ್ಲಿ ವಿವಾಹವಾದರು.
ತಿಲೋತ್ತಮ ಮುಖರ್ಜಿ ಸ್ವತಂತ್ರ ಬರಹಗಾರರಾಗಿದ್ದಾರೆ. ತಿಲೋತ್ತಮ ಅವರನ್ನು ಕೆಲವು ಸಾಹಿತ್ಯ ಕಾರ್ಯಕ್ರಮಗಳು, ಪುಸ್ತಕ ಬಿಡುಗಡೆಗಳು ಮತ್ತು ಚಲನಚಿತ್ರೋತ್ಸವಗಳಲ್ಲಿ ಕಂಡಿದ್ದಾರೆ. ಇಬ್ಬರೂ ಗಂಡು ಮಕ್ಕಳು ಪತ್ರಿಕೋದ್ಯಮ ಮತ್ತು ಬರವಣಿಗೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಿದ್ದಾರೆ. ಮಗ ಕನಿಷ್ಕ್ ಓಪನ್ ಡೆಮಾಕ್ರಸಿಯ ಮಾಜಿ ಸಂಪಾದಕರಾಗಿದ್ದಾರೆ ಮತ್ತು ಹೆಚ್ಚು ಮೆಚ್ಚುಗೆ ಪಡೆದ ಸಣ್ಣ ಕಥಾ ಸಂಕಲನ ಸ್ವಿಮ್ಮರ್ ಅಮಾಂಗ್ ದಿ ಸ್ಟಾರ್ಸ್‌ನ ಲೇಖಕರಾಗಿದ್ದಾರೆ . ತಿಲೋತ್ತಮ ಪ್ರಸ್ತುತ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಮಾನವಿಕ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ.
2007 ರಲ್ಲಿ ತರೂರ್ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆನಡಾದ ರಾಜತಾಂತ್ರಿಕರಾದ ಕ್ರಿಸ್ಟಾ ಗೈಲ್ಸ್ ಅವರನ್ನು ಮದುವೆಯಾದರು ಆದರೆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 2010 ರಲ್ಲಿ ಬೇರ್ಪಟ್ಟರು. ದುಬೈ ಮೂಲದ ಉದ್ಯಮಿ ಕಾಶ್ಮೀರಿ ಪಂಡಿತ್ ಸುನಂದಾ ಪುಷ್ಕರ್ ಅವರೊಂದಿಗೆ 2010 ರಲ್ಲಿ ಮೂರನೇ ವಿವಾಹವಾದರು. ಬಳಿಕ ತಿರುವನಂತಪುರಂ ಮತ್ತು ನವದೆಹಲಿಯಲ್ಲಿ ವಾಸಿಸಲು ಪ್ರಾರಂಭಿಸಿದರು. ಆದರೆ ಜನವರಿ 17, 2014 ರಂದು, ಪುಷ್ಕರ್ (51 ವರ್ಷ) ನವದೆಹಲಿಯ ಚಾಣಕ್ಯಪುರಿಯಲ್ಲಿರುವ ದಿ ಲೀಲಾ ಹೋಟೆಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದರು.