ನವದೆಹಲಿ(ಡಿ.22): ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ಮಾದರಿ ಪತ್ತೆಯಾಗಿರುವ ಬಗ್ಗೆ ಭಾರತೀಯರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಭರವಸೆ ನೀಡಿದ್ದಾರೆ.

ಸೋಮವಾರ ಇಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮವೊಂದರ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಯಾರೂ ಆತಂಕಪಡುವ ಅಗತ್ಯವಿಲ್ಲ. ಹೊಸತಾಗಿ ಉದ್ಭವಿಸಿದ ಪರಿಸ್ಥಿತಿ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ಏನೇನೋ ಕಲ್ಪನೆ ಮಾಡಿಕೊಂಡು ಹೆದರಬೇಡಿ. ಕೋವಿಡ್‌ ನಿರ್ವಹಣೆಗೆ ಏನೇನು ಮಹತ್ವದ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲಾ ಕಳೆದ ಒಂದು ವರ್ಷದಲ್ಲಿ ಸರ್ಕಾರ ಕೈಗೊಂಡಿದೆ. ಇದಕ್ಕೆ ವೈಜ್ಞಾನಿಕ ಸಮುದಾಯ ಕೂಡಾ ಕೈಜೋಡಿಸಿದೆ’ ಎಂದು ಹೇಳಿದರು.

ನಂತರ ಅವರು ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ತುರ್ತು ಸಭೆ ನಡೆಸಿದರು.