ಜೈಪುರ (ಆ. 02): ಕೊರೋನಾ ವೈರಸ್‌ ಹಾವಳಿ ಶುರುವಾದ ಬಳಿಕ ಎಲ್ಲಡೆಯೂ ಮಾಸ್ಕ್‌, ಸ್ಯಾನಿಟೈಸರ್‌ಗಳದ್ದೇ ಸುದ್ದಿ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಜೋಧ್‌ಪುರದ ರೆಸ್ಟೋರೆಂಟ್‌ವೊಂದು ಕೊರೋನಾ ವೈರಸ್‌ ಅನ್ನು ಹೋಲುವ ವಿಶೇಷ ಕರಿ ಹಾಗೂ ಮಾಸ್ಕ್‌ ಅನ್ನು ಹೋಲುವ ನಾನ್‌ ಅನ್ನು ಸಿದ್ಧಪಡಿಸಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.

ಜೋಧಪುರದ ಸಸ್ಯಾಹಾರಿ ವೇದಿಕ್‌ ರೆಸ್ಟೋರೆಂಟ್‌ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಈ ತಿನಿಸನ್ನು ಸಿದ್ಧಪಡಿಸಿದೆಯಂತೆ.