ಚೆನ್ನೈ(ಜೂ.03): ಕೊರೋನಾ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಲೂನ್‌, ಬ್ಯೂಟಿ ಪಾರ್ಲರ್‌, ಸ್ಪಾಗಳು ತಮ್ಮಲ್ಲಿಗೆ ಬರುವ ಗ್ರಾಹಕರಿಂದ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ಪಡೆಯುವುದು ಕಡ್ಡಾಯ ಎಂದು ತಮಿಳುನಾಡು ಸರ್ಕಾರ ಆದೇಶಿಸಿದೆ.

ಹೊಸ ನಿಯಮದನ್ವಯ ಸಲೂನ್‌, ಬ್ಯೂಟಿ ಪಾರ್ಲರ್‌ ಮತ್ತು ಸ್ಪಾಗಳು ಗ್ರಾಹಕರ ಹೆಸರು, ವಿಳಾಸ, ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ಒಳಗೊಂಡ ಮಾಹಿತಿಯನ್ನು ಹೊಂದಿರುವುದು ಕಡ್ಡಾಯ. ಇದರಿಂದ ಕೊರೋನಾ ಸೋಂಕಿತರ ಸಂಪರ್ಕವನ್ನು ಸುಲಭವಾಗಿ ಮತ್ತು ವೇಗವಾಗಿ ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರದಿಂದ ಮತ್ತು ರಾಜ್ಯದ ಉಳಿದೆಡೆ ಮೇ 24ರಿಂದ ಹಲವು ನಿಬಂಧನೆಗಳನ್ನು ವಿಧಿಸಿ ಸಲೂನ್‌ ಮತ್ತು ಬ್ಯೂಟಿ ಪಾರ್ಲರ್‌ ಕಾರ‍್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ.