Asianet Suvarna News Asianet Suvarna News

'ಉಡುಗೊರೆ ಬೇಡ, ಮೋದಿಗೆ ಓಟ್ ಮಾಡಿ; ಆಮಂತ್ರಣ ಪತ್ರಿಕೆಯಲ್ಲಿ ಮಧುಮಗನ ತಂದೆಯ ವಿಶೇಷ ಮನವಿ

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮದುಮಗನ ತಂದೆಯೊಬ್ಬರು ತಮ್ಮ ಮಗನ ವಿವಾಹಕ್ಕೆ ಉಡುಗೊರೆ ಕೊಡಬೇಡಿ, ಬದಲಿಗೆ ಮೋದಿಗೆ ಓಟ್ ಮಾಡಿ ಎಂದು ಆಮಂತ್ರಣ ಪತ್ರಿಕೆಯಲ್ಲಿ ವಿಶೇಷ ಮನವಿ ಮಾಡಿ ಸುದ್ದಿಯಾಗಿದ್ದಾರೆ. 

no gifts vote for PM Modi instead grooms fathers special request on wedding invitation card skr
Author
First Published Mar 25, 2024, 10:29 AM IST

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮದುಮಗನ ತಂದೆಯೊಬ್ಬರು ತಮ್ಮ ವಿಶಿಷ್ಠ ಆಮಂತ್ರಣ ಪತ್ರಿಕೆಗಾಗಿ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಉಡುಗೊರೆ ಬೇಡ ಎನ್ನುವವರು ಆಮಂತ್ರಣ ಪತ್ರಿಕೆಯಲ್ಲಿ 'ಆಶೀರ್ವಾದವೇ ಉಡುಗೊರೆ' ಎಂದು ಹಾಕುತ್ತಾರೆ. ಆದರೆ, ಈ ತಂದೆ ತಮ್ಮ ಮಗನ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ 'ಉಡುಗೊರೆ ಬೇಡ, ಬದಲಿಗೆ ಮೋದಿಗೆ ಮತ ಹಾಕಿ' ಎಂದು ಕೋರಿಕೊಂಡಿದ್ದಾರೆ.

ಆಮಂತ್ರಣ ಪತ್ರಿಕೆಯು ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹೊಂದಿದೆ ಮತ್ತು, 'ನರೇಂದ್ರ ಮೋದಿಗೆ ಮತ ನೀಡುವುದು ನೀವು ನೀಡಬಹುದಾದ ಅತ್ಯುತ್ತಮ ಕೊಡುಗೆಯಾಗಿದೆ' ಎಂದು ಬರೆಯಲಾಗಿದೆ. 

ನಂದಿಕಾಂತಿ ನರಸಿಂಲು ಮತ್ತು ಅವರ ಪತ್ನಿ ನಂದಿಕಾಂತಿ ನಿರ್ಮಲಾ ಅವರೇ ತಮ್ಮ ಏಕೈಕ ಪುತ್ರನ ವಿವಾಹ, ಆಮಂತ್ರಣ ಪತ್ರಿಕೆಯಲ್ಲಿ ವಿಶೇಷ ಮನವಿ ಮಾಡಿದವರು. ನಿರ್ಮಾಣ ಯೋಜನೆಗಳಿಗೆ ಮರದ ವಸ್ತುಗಳನ್ನು ಪೂರೈಸುವ ನರಸಿಮ್ಲು ಪ್ರಧಾನಿ ಮೋದಿಯವರಿಗೆ ಗೌರವ ಸೂಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಕ್ಕರೆ ಕಾಯಿಲೆ ಸೂಚಿಸುವ ದೇಹದ ಈ 6 ಸಂಕೇತಗಳನ್ನು ತಪ್ಪಿಯೂ ಕಡೆಗಣಿಸ್ಬೇಡಿ!
 

ಈ ಹಿಂದೆ ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ಆಯೋಜಿಸಿದ್ದರೂ ಈ ಹಿಂದೆ ಯಾವುದೇ ಮನವಿ ಮಾಡಿರಲಿಲ್ಲ. ಮದುವೆಯ ಆಮಂತ್ರಣ ಪತ್ರಗಳನ್ನು ವಿತರಿಸುವಾಗ ನರಸಿಮ್ಲು, 'ನನ್ನ ಕುಟುಂಬವು ಈ ಆಲೋಚನೆಯನ್ನು ಚೆನ್ನಾಗಿ ಕಂಡುಕೊಂಡಿದೆ ಮತ್ತು ಮುಂದುವರಿಯಲು ನನ್ನನ್ನು ಕೇಳಿದೆ' ಎಂದಿದ್ದಾರೆ. 

ನಿದ್ದೆ ಕಡಿಮೆಯಾದ್ರೆ ಹಾರ್ಟ್ ಅಟ್ಯಾಕ್ ಆಗುತ್ತಾ? ನಿಮ್ಮ ವಯಸ್ಸಿಗೆ ನೀವೆಷ್ಟು ಸಮಯ ನಿದ್ರಿಸಬೇಕು?
 

ಕಳೆದ ತಿಂಗಳೂ ವಿನಂತಿಯೊಂದು ಸುದ್ದಿಯಾಗಿತ್ತು..
ಮದುವೆಗೆ ಹಾಜರಾಗುವ ಅತಿಥಿಗಳಿಗೆ ಇದೇ ರೀತಿಯ 'ಅಸಾಮಾನ್ಯ' ವಿನಂತಿಯಲ್ಲಿ, ಕಳೆದ ತಿಂಗಳು ವಿದೇಶದಲ್ಲಿರುವ ವಧು-ವರರು, ತಮ್ಮ ಮದುವೆಯ ದಿನದ ಮೊದಲು ಆಶ್ಚರ್ಯಕರವಾದ ವಿನಂತಿಯನ್ನು ಮಾಡಿ ತೀವ್ರ ಟೀಕೆಗೆ ಒಳಗಾಗಿದ್ದರು. ಅವರು ಪ್ರತಿ ಅತಿಥಿಯೂ ವಯಸ್ಕರಾದರೆ $40 ಮತ್ತು ಮಕ್ಕಳಾದರೆ $20 ವರ್ಗಾಯಿಸಲು ಅತಿಥಿಗಳನ್ನು ವಿನಂತಿಸಿದ್ದರು. ಇದು ನಾವು ಒಟ್ಟಿಗೆ ಅದ್ಭುತವಾದ ಊಟವನ್ನು ಹಂಚಿಕೊಳ್ಳಲು ಮತ್ತು ನಮ್ಮ ಪ್ರೀತಿಪಾತ್ರರೊಂದಿಗೆ ಶಾಶ್ವತವಾದ ನೆನಪುಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ ಎಂದವರು ಹೇಳಿದ್ದರು!

Follow Us:
Download App:
  • android
  • ios