Asianet Suvarna News Asianet Suvarna News

ಭಕ್ತರು, ಮೆರವಣಿಗೆ ಇಲ್ಲದೇ ನಡೆಯಲಿದೆ ತಿರುಪತಿ ನವರಾತ್ರಿ

ಅರ್ಚಕರು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ನವರಾತ್ರಿ ಬ್ರಹ್ಮೋತ್ಸವ | ಭಕ್ತರ ಭಾಗವಹಿಸುವಿಕೆ ಹಾಗೂ ಮೆರವಣಿಗೆ ಇಲ್ಲ

No gathering processions in Tirupati navarathri celebrations due to covid19 dpl
Author
Bangalore, First Published Oct 14, 2020, 12:06 PM IST
  • Facebook
  • Twitter
  • Whatsapp

ತಿರುಪತಿ(ಅ.14): ಕೊರೋನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಇಲ್ಲಿನ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವವನ್ನು ಭಕ್ತರ ಭಾಗವಹಿಸುವಿಕೆ ಹಾಗೂ ಮೆರವಣಿಗೆ ಇಲ್ಲದೇ ನಡೆಸಲು ತೀರ್ಮಾನಿಸಲಾಗಿದೆ.

ಅ.16ರಿಂದ 9 ದಿನಗಳ ನಡೆಯವ ಉತ್ಸವವನ್ನು ದೇವಾಲಯದ ಒಳಗಡೆ ಕೇವಲ ಅರ್ಚಕರು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲು ಟಿಟಿಡಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.

ಅ.20ರಿಂದ ಮುಂದಿನ ತಿಂಗಳ ಕೊನೆತನಕ 392 ಹಬ್ಬದ ವಿಶೇಷ ರೈಲು, ಇಲ್ಲಿದೆ ಡೀಟೆಲ್ಸ್

ಈ ಮುನ್ನ ದೇವಾಲಯದ ಆವರಣದಲ್ಲಿ ಬ್ರಹ್ಮೋತ್ಸವ ಮೆರವಣಿಗೆಯನ್ನು ಕೆಲವು ಸಾವಿರ ಭಕ್ತರ ಸಮ್ಮುಖದಲ್ಲಿ ನಡೆಸಲು ಹಾಗೂ ಆನ್‌ಲೈನ್‌ ಮೂಲಕ ಟಿಕೆಟ್‌ ಅನ್ನು ನೀಡಲು ಉದ್ದೇಶಿಸಲಾಗಿತ್ತು.

ಆದರೆ ಕೊರೋನಾ ನಿಯಂತ್ರಣಕ್ಕೆ ಬಾರದ ಕಾರಣ ಆಚರಣೆಯನ್ನು ಮೊಟಕುಗೊಳಿಸಲಾಗಿದೆ. ಪ್ರತಿ ವರ್ಷ ತಿರುಪತಿ ಬ್ರಹ್ಮೋತ್ಸವದಲ್ಲಿ ದೇಶಾದ್ಯಂತದ ಲಕ್ಷಾಂತರ ಭಕ್ತರು ಸೇರುತ್ತಿದ್ದರು.

Follow Us:
Download App:
  • android
  • ios