ನವದೆಹಲಿ (ಮಾ. 13): ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಕ್ರಿಯೆ ವೇಳೆ ಜನರು ಯಾವುದೇ ದಾಖಲೆಗಳನ್ನು ನೀಡಬೇಕಿಲ್ಲ. ಯಾರನ್ನೂ ‘ಸಂದೇಹಾಸ್ಪದ ವ್ಯಕ್ತಿಗಳು’ ಎಂದು ಗುರುತಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ವೈರಸ್ ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಿ; ಪ್ರಧಾನಿ ಮೋದಿ ಮನವಿ!

ರಾಜ್ಯಸಭೆಯಲ್ಲಿ ದಿಲ್ಲಿ ಹಿಂಸಾಚಾರದ ಚರ್ಚೆಗೆ ಉತ್ತರಿಸಿ ಗುರುವಾರ ಮಾತನಾಡಿದ ಅವರು, ‘ಎನ್‌ಪಿಆರ್‌ ಗಣತಿ ವೇಳೆ ಯಾರೂ ದಾಖಲೆ ನೀಡಬೇಕಿಲ್ಲ. ಗಣತಿದಾರರು ಬಂದಾಗ ತಮಗೆ ಇಷ್ಟವಾದ ಮಾಹಿತಿ ಒದಗಿಸಬಹುದು. ರಾಜ್ಯಸಭೆಯಲ್ಲಿ ಇದನ್ನು ನಾನು ಹೇಳುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಎಲ್ಲ ಗಣತಿಯಲ್ಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲೇಬೇಕು ಎಂದೇನಿಲ್ಲ ಎಂದು ಅವರು ಪರೋಕ್ಷವಾಗಿ ನುಡಿದರು.

ನರಕದಿಂದಲೂ ಹೊರಗೆಳೀತೇವೆ:

ದಿಲ್ಲಿ ಗಲಾಟೆಕೋರರು ನರಕದ ಆಳದಲ್ಲಿ ಅವಿತಿದ್ದರೂ ಸರಿ. ಅವರನ್ನು ಹೊರತೆಗೆಯಲಾಗುವುದು. ಗಲಭೆಕೋರರಲ್ಲಿ ಕೆಲವರಿಗೆ ಐಸಿಸ್‌ ಉಗ್ರರ ನಂಟು ಪತ್ತೆಯಾಗಿದೆ ಎಂದು ಶಾ ಹೇಳಿದರು. ದುಷ್ಕರ್ಮಿಗಳ ಪತ್ತೆಗೆ ಡಿಎಲ್‌ ಹಾಗೂ ವೋಟರ್‌ ಐಡಿ ಬಳಸಲಾಗುತ್ತಿದೆ. ಆದರೆ ಆಧಾರ್‌ ಬಳಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.