ವಿಶ್ವಾದ್ಯಂತ ಕೋವಿಡ್‌ ಪ್ರಕರಣ ಇಳಿಕೆ ಬೆನ್ನಲ್ಲೇ, ಲಸಿಕೆಗೆ ಬೇಡಿಕೆ ಕುಂಠಿತವಾಗಿದ್ದು, ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿಯ ಬಳಿ ಇರುವ 5 ಕೋಟಿ ಡೋಸ್‌ ಲಸಿಕೆ ವ್ಯರ್ಥವಾಗುವ ಕಳವಳ ಎದುರಾಗಿದೆ. 

ಹೈದರಾಬಾದ್‌: ವಿಶ್ವಾದ್ಯಂತ ಕೋವಿಡ್‌ ಪ್ರಕರಣ ಇಳಿಕೆ ಬೆನ್ನಲ್ಲೇ, ಲಸಿಕೆಗೆ ಬೇಡಿಕೆ ಕುಂಠಿತವಾಗಿದ್ದು, ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿಯ ಬಳಿ ಇರುವ 5 ಕೋಟಿ ಡೋಸ್‌ ಲಸಿಕೆ ವ್ಯರ್ಥವಾಗುವ ಕಳವಳ ಎದುರಾಗಿದೆ. 

ಬೇಡಿಕೆ ಸ್ಥಗಿತಗೊಂಡ ಕಾರಣ, ಕಂಪನಿ ಈಗಾಗಲೇ ಲಸಿಕೆ ಉತ್ಪಾದನೆ ಸ್ಥಗಿತಗೊಳಿಸಿದೆ. ಆದರೆ ಈಗಾಗಲೇ ಉತ್ಪಾದಿಸಿರುವ 5 ಕೋಟಿ ಡೋಸ್‌ ಲಸಿಕೆಯ ಬಳಕೆ ಅವಧಿ 2023ರ ಆರಂಭದಲ್ಲಿ ಮುಕ್ತಾಯವಾಗಲಿದೆ. ಇದರ ಹೊರತಾಗಿ ಇನ್ನೂ 20 ಕೋಟಿ ಡೋಸ್‌ಗಳು ಲಸಿಕೆ ಸಗಟು ರೂಪದಲ್ಲಿ ಸಂಗ್ರಹವಿದೆ. ಹೀಗಾಗಿ ಅವುಗಳನ್ನು ನಾಶ ಮಾಡುವುದು ಅನಿವಾರ್ಯವಾಗಲಿದೆ. ಪುಣೆ (Pune) ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಕೂಡಾ ಅವಧಿ ಮುಗಿದ ಕಾರಣ ಇತ್ತೀಚೆಗೆ 10 ಕೋಟಿ ಡೋಸ್‌ ಲಸಿಕೆಯನ್ನು ನಾಶ ಪಡಿಸಿದ್ದಾಗಿ ಹೇಳಿತ್ತು.

ಕುಸಿದ ಬೇಡಿಕೆ, 50 ಮಿಲಿಯನ್ ಕೋವಾಕ್ಸಿನ್ ಲಸಿಕೆ ನಿಷ್ಕ್ರೀಯಕ್ಕೆ ಭಾರತ್ ಬಯೋಟೆಕ್‌ ಸಿದ್ಧತೆ

ಕ್ರೇನ್ ಮೂಲಕ ಕೋವಿಡ್ ರೋಗಿಯ ಸ್ಥಳಾಂತರಿಸಿದ ಚೀನಾ: ವಿಡಿಯೋ ವೈರಲ್