ಕೊರೋನಾ 2ನೇ ಅಲೆಗೆ ಸುಸ್ತಾಗಿರುವ ಭಾರತಕ್ಕೆ 3ನೇ ಅಲೆ ಆತಂಕ ಹೆಚ್ಚಾಗಿದೆ 3ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಅನ್ನೋ ಮಾತುಗಳಿಗೆ ಏಮ್ಸ್ ನಿರ್ದೇಶಕರ ಸ್ಪಷ್ಟನೆ ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಟಿಯಲ್ಲಿ ಡಾ. ರಂದೀಪ್ ಗುಲೇರಿಯಾ ಹೇಳಿಕೆ
ನವದೆಹಲಿ(ಜೂ08): ಕೊರೋನಾ ವೈರಸ್ 2ನೇ ಅಲೆ ನೀಡಿದ ಹೊಡೆತಕ್ಕೆ ಭಾರತ ನಲುಗಿ ಹೋಗಿದೆ. ಸತತ ಹೋರಾಟ, ಲಾಕ್‌ಡೌನ್, ಚಿಕಿತ್ಸೆ, ಲಸಿಕೆ ಸೇರಿದಂತೆ ಹಲವು ಕ್ರಮಗಳಿಂದ 2ನೇ ಅಲೆಯನ್ನು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತಂದಿದೆ. ಇದೀಗ 3ನೇ ಅಲೆ ಚಿಂತೆ ಶುರುವಾಗಿದೆ. ಕೊರೋನಾ 3ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ಈ ಆತಂಕಕ್ಕೆ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ತೆರೆ ಎಳೆದಿದ್ದಾರೆ.
ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗಕ್ಕೆ ಮುಂದಾದ ದೆಹಲಿ ಏಮ್ಸ್!.
ಕೇಂದ್ರ ಆರೋಗ್ಯ ಇಲಾಖೆ ನಡೆಸಿದ ಸುದ್ಧಿಗೋಷ್ಟಿಯಲ್ಲಿ ರಂದೀಪ್ ಹೇಳಿಕೆ ಕೋಟ್ಯಾಂತರ ಪೋಷಕರಲ್ಲಿ ನೆಮ್ಮದಿ ತಂದಿದೆ. ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಗುಲೆರಿಯಾ ಹೇಳಿದ್ದಾರೆ. ಆದರೆ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಸೇರಿದಂತೆ ಕೊರೋನಾ ನಿಯಮ ಪಾಲನೆ ಅತೀ ಅಗತ್ಯ ಎಂದಿದ್ದಾರೆ.
ಕೊರೋನಾ 3ನೇ ಅಲೆ ಮಕ್ಕಳನ್ನು ಟಾರ್ಗೆಟ್ ಮಾಡಲಿದೆ ಅನ್ನೋದಕ್ಕೆ ಯಾವುದೇ ಪುರಾವೆಗಳಿಲ್ಲ. ಇನ್ನು 2ನೇ ಅಲೆಯಲ್ಲಿ ಮಕ್ಕಳ ಮೇಲೆ ಕೊರೋನಾ ಬಾಧಿಸಿದ ಸಂಖ್ಯೆ ಕಡಿಮೆ. ಮಕ್ಕಳಲ್ಲಿ ಮೈಲ್ಡ್ ಕೊರೋನಾ ಕಾಣಿಸಿಕೊಂಡಿದೆ. ಆದರೆ ಇತರ ಆರೋಗ್ಯ ಸಮಸ್ಯೆ ಇರುವ ಮಕ್ಕಳು ಆಸ್ಪತ್ರೆ ದಾಖಲಾಗಿದ್ದಾರೆ ಎಂದು ಗುಲೆರಿಯಾ ಅಂಕಿ ಅಂಶ ತೆರೆದಿಟ್ಟಿದ್ದಾರೆ.
ಹಾವೇರಿಯಲ್ಲಿ 3ನೇ ಅಲೆಗೂ ಮುನ್ನವೇ 300 ಮಕ್ಕಳಿಗೆ ಕೊರೋನಾ..!.
ತಜ್ಞರ ಪ್ರಕಾರ 3ನೇ ಅಲೆ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಅನ್ನೋ ಮಾತಿಗೆ ಯಾವುದೇ ಆಧಾರಗಳಿಲ್ಲ. ಮಕ್ಕಳಲ್ಲಿ ಹೆಚ್ಚಾಗಿ ಮೈಲ್ಡ್ ಕೊರೋನಾ ಕಾಣಿಸಿಕೊಳ್ಳಬಹುದು. ಇತರ ಆರೋಗ್ಯ ಸಮಸ್ಯೆ ಇರುವ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಗುಲೆರಿಯಾ ಹೇಳಿದ್ದಾರೆ
