ನವದೆಹಲಿ(ಏ. 24) 'ಕೊರೋನಾ ಲಾಕ್ ಡೌನ್ ಜಾರಿಯಲ್ಲಿದ್ದು ಅಜಾನ್ ಬ್ಯಾನ್ ಮಾಡಲಾಗಿದೆ'  ಇದೇ ವಿಚಾರಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸರೊಂದಿಗೆ ನಡೆದ ಮಾತುಕತೆಯ ವಿಡಿಯೋ. 

ಏಪ್ರಿಲ್ 25 ರಂದು ಪವಿತ್ರ ರಂಜಾನ್ ತಿಂಗಳು ಆರಂಭವಾಗಲಿದೆ.  ಪೇದೆಯೊಬ್ಬರು  ಅಜಾನ್ ಬ್ಯಾನ್ ಮಾಡಲಾಗಿದ  ಎಂದು ಹೇಳಿದ್ದು ದೊಡ್ಡ ಸಮಾಚಾರವಾಗಿದೆ. ಅಜಾನ್ ನಿಷೇಧ ಮಾಡಲು ಹಿರಿಯ ಪೊಲೀಸರು ತಿಳಿಸಿದ್ದಾರೆ ಎಂದಾಗ ದೆಹಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲಿದೆ ಆದೇಶದ ಕಾಪಿ ಎಂದು ಕೇಳಿದ್ದಾರೆ. ಅಜಾನ್ ಮಾಡುವುದರಿಂದ ಕೊರೋನಾ ಹರಡುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಡೆಲೆವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ಆಹಾರ ತಿರಸ್ಕರಿಸಿದ

ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ, ಜನರಿಗೆ ಲಾಕ್ ಡೌನ್ ಆದೇಶ ಪಾಲನೆ ಮಾಡಲು ತಿಳಿಸಲಾಗಿದೆ. ಯಾರು ಮನೆಯಿಂದ ಹೊರಬರಬಾರದು. ಆದರೆ ಅಜಾನ್ ಮೇಲೆ ನಿಷೇಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಈ ಘಟನೆ ಬಗ್ಗೆ ತನಿಖೆ ನಡೆಸಲು ದೆಹಲಿ ಪೊಲೀಸರು ನಿರ್ಧಾರ ಮಾಡಿದ್ದಾರೆ.