ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್!
ಬಿಹಾರದ ಮಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ನಿತೀಶ್ 7ನೇ ಬಾರಿ ಬಿಹಾರ ಮುಖ್ಯಮಂತ್ರಿಯಾದ ಸಾಧನೆ ಮಾಡಿದ್ದಾರೆ. ನಿತೀಶ್ ಕುಮಾರ್ ಜೊತೆ 15 ಸಚಿವರು ಪ್ರಮಾವಣ ಸ್ವೀಕರಿಸಿದ್ದಾರೆ.
ಪಾಟ್ನಾ(ನ.16): ಬಿಹಾರದ ನೂತನ ಮುಖ್ಯಮಂತ್ರಿಯಾಗಿ NDA ಕೂಟದ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸತತ 4ನೇ ಬಾರಿ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ.
ಬಿಹಾರ ಸರ್ಕಸ್ ಬಳಿಕ ರಾಜ್ಯ ಸಂಪುಟ ಕಸರತ್ತು: ಬಿಎಸ್‌ವೈ
ರಾಜಭನವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಫಾಗು ಚೌಹನ್ ಪ್ರತಿಜ್ಞಾವಿಧಿ ಭೋದಿಸಿದ್ದಾರೆ. ನಿತೀಶ್ ಕುಮಾರ್ ಜೊತೆ 14 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಜೆ 4.30ಕ್ಕೆ ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ.
ಉಪಮುಖ್ಯಮಂತ್ರಿ ಸ್ಥಾನಕ್ಕೆ ಸುಶೀಲ್ ಮೋದಿ ಹೆಸರು ಬಲವಾಗಿ ಕೇಳಿ ಬರುತ್ತಿತ್ತು. ಆದರೆ ಉಪಮುಖ್ಯಮಂತ್ರಿಯಾಗಿ ಬಿಜೆಪಿಯ ತಾರ್‌ಕಿಶೋರ್ ಪ್ರಸಾದ್ ಹಾಗೂ ರಾನು ದೇವಿ ಪ್ರಮಾಣವ ವಚನ ಸ್ವೀಕರಿಸಿದ್ದಾರೆ. ಆದರೆ ಈ ಸಮಾರಂಭವನ್ನು ಆರ್‌ಜೆಡಿ ಬಹಿಷ್ಕರಿಸಿದೆ.
ಪ್ರಮಾಣ ವಚನ ಸ್ವೀಕರಿಸಿದವರ ಲಿಸ್ಟ್;
ನಿತೀಶ್ ಕುಮಾರ್- ಮುಖ್ಯಮಂತ್ರಿ (JDU)
ತಾರ್‌ಕಿಶೋರ್ - ಉಪಮುಖ್ಯಮಂತ್ರಿ (BJP)
ರೇಣು ದೇವಿ-ಉಪಮುಖ್ಯಮಂತ್ರಿ (BJP)
ಮಂಗಲ್ ಪಾಂಡೆ- BJP
ರಾಂಪ್ರೀತ್ ಪಾಸ್ವಾನ್- BJP
ಅಮರೇಂದ್ರ ಪ್ರಸಾದ್ - BJP
ಜೀವೇಶ್ ಮಿಶ್ರಾ -BJP
ರಾಮಸೂರತ್ ರೈ - BJP
ವಿಜಯೇಂದ್ರ ಯಾದವ್- JDU
ವಿಜಯ್ ಚೌಧರಿ- JDU
ಅಶೋಕ್ ಚೌಧರಿ- JDU
ಮೇವ್‌ಲಾಲ್ ಚೌಧರಿ- JDU
ಶೀಲಾ ಮಂಡಲ್ - JDU
ಸಂತೋಶ್ ಮಹಂಜಿ- (HAM)
ಮುಖೇಲ್ ಮಲ್ಹ-(VIP)