Asianet Suvarna News Asianet Suvarna News

ಮೋದಿ, ಅಮಿತ್ ಶಾ ಮುಂದೆ ಮಹತ್ವದ ಬೇಡಿಕೆ ಇಟ್ಟ ನಿತೀಶ್ ಕುಮಾರ್?

ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಕೆ.ಸಿ.ತ್ಯಾಗಿ ಹೇಳಿದ್ದಾರೆ. ಬಿಜೆಪಿ ಸರ್ಕಾರ 2022ರಲ್ಲಿ  ಅಗ್ನಿಪಥ್ ಯೋಜನೆಯನ್ನು ಪರಿಚಯಗೊಳಿಸಿತ್ತು. 

Nitish Kumar s party leader KC tyagi seeks Agnipath scheme review mrq
Author
First Published Jun 6, 2024, 3:03 PM IST | Last Updated Jun 6, 2024, 3:03 PM IST

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿದೆ. ಈ ಬಾರಿಯ ಮೈತ್ರಿ ಬೆಂಬಲ ಪಡೆದುಕೊಳ್ಳೋದು ಅನಿವಾರ್ಯವಾಗಿದ್ದು, ಮಿತ್ರ ಪಕ್ಷದ ನಿತೀಶ್ ಕುಮಾರ್ (Nitish Kumar) ಮತ್ತು ಚಂದ್ರಬಾಬು ನಾಯ್ಡು (Chandrababu Naidiu) ಕಿಂಗ್‌ಮೇಕರ್ ಆಗಿದ್ದಾರೆ. ಪದಗ್ರಹಣಕ್ಕೂ ಮುನ್ನವೇ ಮಿತ್ರಪಕ್ಷಗಳಲ್ಲಿ ಖಾತೆ ಹಂಚಿಕೆ ಬಗ್ಗೆ ಹಗ್ಗ-ಜಗ್ಗಾಟ ಶುರುವಾದಂತೆ ಕಾಣಿಸುತ್ತಿದೆ. ಕಿಂಗ್ ಮೇಕರ್ ಆಗಿರುವ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಮಹತ್ವದ ಖಾತೆಗಳ ಮೇಲೆ ಕಣ್ಣಟ್ಟಿಂತೆ ಕಾಣಿಸುತ್ತಿದೆ. ಈ ನಡುವೆ ನಿತೀಶ್ ಕುಮಾರ್ ಅವರ ಜೆಡಿ(ಯು) ಬಣ ಬಿಜೆಪಿ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಅಗ್ನಿಪಥ್‌ನಲ್ಲಿ (Agnipath) ಕೆಲವು ಬದಲಾವಣೆಗಳು ತರುವಂತೆ ಹೇಳಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.  ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಮರುಪರಿಶೀಲಿಸುವಂತೆ ಜೆಡಿ(ಯು) ಒತ್ತಾಯಿಸುತ್ತಿದೆ.

ಅಗ್ನಿಪಥ್ ಯೋಜನೆ ಬಗ್ಗೆ ಜನತೆಯಲ್ಲಿ ತೀವ್ರ ಅಸಮಾಧಾನವಿದೆ. ಇದನ್ನೇ ಪ್ರಬಲ ಅಸ್ತ್ರವನ್ನಾಗಿ ವಿರೋಧ ಪಕ್ಷಗಳು ಚುನಾವಣೆ ಸಮಯದಲ್ಲಿ ಬಳಸಿಕೊಂಡಿವೆ. ಇದರ ಪರಿಣಾಮ ಚುನಾವಣೆ ಫಲಿತಾಂಶದಲ್ಲಿಯೂ ಕಾಣಬಹುದಾಗಿದೆ. ಈ ಹಿನ್ನೆಲೆ ಅಗ್ನಿಪಥ್ ಯೋಜನೆಯನ್ನು ಮರುಪರಿಶೀಲಿಸಬೇಕು ಅನಿವಾರ್ಯವಿದೆ ಎಂದು ಜೆಡಿ(ಯು) ನಾಯಕ ಕೆ.ಸಿ.ತ್ಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಅಗ್ನಿಪಥ್ ಯೋಜನೆಯನ್ನು ಪರಿಚಯಿಸಿದ್ದಾಗ ತೀವ್ರ ಆಕ್ರೋಶ ವ್ಯಕ್ತವಾಗಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ನಾನು ನೇರವಾಗಿ ನಾಯಕರನ್ನು ಭೇಟಿಯಾಗಿಲ್ಲ. ಚುನಾವಣೆ ಸಮಯದಲ್ಲಿಯೂ ಮಾಜಿ ಸೈನಿಕರ ಕುಟುಂಬಗಳು ಪ್ರತಿಭಟನೆ ನಡೆಸಿದ್ದವು. ಸಶಸ್ತ್ರ ಪಡೆಗಳ ವಲಯದಲ್ಲಿಯೂ ಈ ಬಗ್ಗೆ ಅಸಮಾಧಾನವಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಕೆ.ಸಿ.ತ್ಯಾಗಿ ಹೇಳಿದ್ದಾರೆ. ಬಿಜೆಪಿ ಸರ್ಕಾರ 2022ರಲ್ಲಿ  ಅಗ್ನಿಪಥ್ ಯೋಜನೆಯನ್ನು ಪರಿಚಯಗೊಳಿಸಿತ್ತು. 

300ರ ಗಡಿ ದಾಟಿದ ಎನ್‌ಡಿಎ- ಬಿಜೆಪಿಗೆ ಸಿಕ್ತು ಪಕ್ಷೇತರರು, ಸ್ಥಳೀಯ ಪಕ್ಷಗಳ ಬೆಂಬಲ
 
ಏನಿದು ಅಗ್ನಿಪಥ್ ಯೋಜನೆ?

ನಾಲ್ಕು ವರ್ಷ ಸೇವೆ ಸಲ್ಲಿಸಿದ ಸೈನಿಕರಿಗೆ ಅಗ್ನಿವೀರ್ ಎಂದು ಹೆಸರಿಸಲಾಗುವುದು. 4 ವರ್ಷಗಳ ನಂತರ, ಸೈನಿಕರ ಸೇವೆಯ ಪರಿಶೀಲನೆ ನಡೆಯಲಿದೆ. ಈ ಮೂಲಕ ಕೆಲವರ ಸೇವೆಯನ್ನು ವಿಸ್ತರಿಸಬಹುದು. ಈ 4 ವರ್ಷಗಳ ಉದ್ಯೋಗವು 6-9 ತಿಂಗಳ ತರಬೇತಿಯನ್ನು ಸಹ ಒಳಗೊಂಡಿರುತ್ತದೆ. ನಿವೃತ್ತಿಯ ನಂತರ ಪಿಂಚಣಿ ಇರುವುದಿಲ್ಲ. ಹೌದು, ಇದರ ಬದಲಾಗಿ ಒಂದು ದೊಡ್ಡ ಮೊತ್ತವನ್ನು ನೀಡಲಾಗುತ್ತದೆ. ಸೇನೆಯ ಯಾವುದೇ ರೆಜಿಮೆಂಟ್‌ನಲ್ಲಿ ಜಾತಿ, ಧರ್ಮ ಮತ್ತು ಪ್ರದೇಶದ ಆಧಾರದ ಮೇಲೆ ಯಾವುದೇ ನೇಮಕಾತಿ ಇರುವುದಿಲ್ಲ. 

ಬಿಹಾರದಲ್ಲಿ ಪ್ರತಿಭಟನೆ

ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ತಂದಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರದಲ್ಲಿ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದುಕೊಂಡಿತ್ತು. ಕೈಮೂರ್ ಜಿಲ್ಲೆಯ ಭಬುವಾ ರೋಡ್ ರೈಲು ನಿಲ್ದಾಣದಲ್ಲಿ ಕೋಪಗೊಂಡ ಪ್ರತಿಭಟನಾಕಾರರು ಇಂಟರ್‌ಸಿಟಿ ರೈಲಿನ ಬೋಗಿಯನ್ನು ಸುಟ್ಟು ಹಾಕಿದ್ದರು. ಆದರೆ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಪ್ರತಿಭಟನಾಕಾರರು ಅರಾ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 4 ಅನ್ನು ಧ್ವಂಸಗೊಳಿಸಿದ್ದರು.

ಹಿಂಸಾತ್ಮಕ ರೂಪ ಪಡೆದ 'ಅಗ್ನಿಪಥ' ಆಂದೋಲನ: ರೈಲುಗಳು ಧಗಧಗ!

ಅಗ್ನಿಪಥ್ ರದ್ದುಗೊಳಿಸೋದಾಗಿ ಹೇಳಿತ್ತು ಕಾಂಗ್ರೆಸ್

ಐದು, ಆರು ಮತ್ತು ಏಳನೇ ಹಂತದ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸೋದಾಗಿ ಹೇಳಿಕೊಂಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅಗ್ನಿಪಥ್ ಯೋಜನೆಯನ್ನು ಕಸದ ಬುಟ್ಟಿಗೆ ಹಾಕುತ್ತೇವೆ ಎಂದು ಹಲವು ಭಾಷಣಗಳಲ್ಲಿ ಹೇಳಿಕೊಂಡಿತ್ತು.

Latest Videos
Follow Us:
Download App:
  • android
  • ios