ಪಟನಾ(ನ.13): ನಿತೀಶ್‌ ಕುಮಾರ್‌ ಅವರು ದೀಪಾವಳಿಯ ಕೊನೆಯ ದಿನವಾದ ಬಲಿಪಾಡ್ಯಮಿ (ನವೆಂಬರ್‌ 16) ದಿನದಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ನರಕಚತುರ್ದಶಿ ಹಾಗೂ ಅಮಾವಾಸ್ಯೆ ಮರುದಿನ ಬಲಿಪಾಡ್ಯಮಿ ಇದ್ದು ಆ ದಿನದಂದು ಅವರು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಈ ನಡುವೆ ‘ಕೇವಲ 40 ಸ್ಥಾನದಲ್ಲಿ ಗೆದ್ದವರೂ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ’ ಎಂದು ನಿತೀಶ್‌ ಕುಮಾರ್‌ಗೆ ಆರ್‌ಜೆಡಿ ಟಾಂಗ್‌ ನೀಡಿದೆ. ‘ಜನರು ನಿಮ್ಮನ್ನು (ನಿತೀಶ್‌) ಯಾವ ಸ್ಥಿತಿಯಲ್ಲಿ ಇರಿಸಿದ್ದಾರೆ ನೋಡಿಕೊಳ್ಳಿ. 40 ಸ್ಥಾನ ಗೆದ್ದು ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದೀರಿ. ಜನಾದೇಶ ನಿಮ್ಮ ವಿರುದ್ಧ ಇದೆ ಎಂದು ತಿಳಿಯಿರಿ. ಆದರೂ ನೀವು ಆ ಹುದ್ದೆ ಗಿಟ್ಟಿಸಿದರೆ ಎಷ್ಟುದಿನ ಇರುತ್ತೀರಿ ಎಂಬುದನ್ನು ದೇವರೇ ಬಲ್ಲ’ ಎಂದು ಆರ್‌ಜೆಡಿ ಮುಖಂಡ ಮನೋಜ್‌ ಝಾ ವ್ಯಂಗ್ಯವಾಡಿದ್ದಾರೆ