Asianet Suvarna News Asianet Suvarna News

'ನನ್ನನ್ನು ಸಿಎಂ ಸ್ಥಾನದಿಂದ ಮಧ್ಯದಲ್ಲೇ ಪದಚ್ಯುತಗೊಳಿಸಬಹುದು'!

ನಾನು ಸಿಎಂ ಸ್ಥಾನದಿಂದ ಮಧ್ಯದಲ್ಲೇ ಪದಚ್ಯುತ ಸಾಧ್ಯತೆ: ನಿತೀಶ್‌| ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸುಳಿವು

Nitish Kumar hints he might get removed midway like Karpoori Thakur pod
Author
Bangalore, First Published Jan 25, 2021, 2:11 PM IST
  • Facebook
  • Twitter
  • Whatsapp

ಪಟನಾ(ಜ.25): ಬಿಹಾರದ ಜನನಾಯಕ ಕರ್ಪೂರಿ ಠಾಕೂರ್‌ ರೀತಿಯಲ್ಲಿ ತಮ್ಮನ್ನು ಸಹ ಮಧ್ಯದಲ್ಲೇ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸುಳಿವು ನೀಡಿದ್ದಾರೆ.

ಬಿಹಾರ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್‌ ಅವರ ಜಯಂತ್ಯೋತ್ಸವ ಪ್ರಯುಕ್ತ ಜೆಡಿಯು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿತೀಶ್‌ ಮಾತನಾಡಿದರು. ‘ಕರ್ಪೂರಿ ಠಾಕೂರ್‌ ಸಹ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿದ್ದಾಗ್ಯೂ, ಅವರನ್ನು ಎರಡೇ ವರ್ಷಗಳಲ್ಲಿ ಸಿಎಂ ಪದವಿಯಿಂದ ಕೆಳಗಿಳಿಸಲಾಗಿತ್ತು. ಅದೇ ರೀತಿ ನಾವು ಸಹ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಕೆಲವರಿಗೆ ಸಿಟ್ಟು, ಕೋಪ ಬರುತ್ತದೆ’ ಎಂದರು.

ಈ ಮೂಲಕ ತಮ್ಮ ಬಗ್ಗೆ ಬಿಜೆಪಿಗೆ ಬೇಸರವಿದೆ ಎಂಬುದನ್ನು ಪರೋಕ್ಷವಾಗಿ ನುಡಿದರು.

Follow Us:
Download App:
  • android
  • ios