ನಿಠಾರಿ ಸರಣಿ ಹತ್ಯೆಗಳಲ್ಲಿ ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಕಾದು ಕುಳಿತಿದ್ದ, ಹತ್ಯೆಯಾದ ಮಕ್ಕಳ ಪೋಷಕರು ತೀವ್ರ ನಿರಾಶೆ ಮತ್ತು ಕೋಪವನ್ನು ಹೊರಹಾಕಿದ್ದಾರೆ. ಇದೆಂಥ ನ್ಯಾಯಾಂಗ ವ್ಯವಸ್ಥೆ, ಈ ರಾಕ್ಷಸರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ ಎಂದು ಬಿಕ್ಕಳಿಸಿದ್ದಾರೆ.
ನೊಯ್ಡಾ: ನಿಠಾರಿ ಸರಣಿ ಹತ್ಯೆಗಳಲ್ಲಿ ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಕಾದು ಕುಳಿತಿದ್ದ, ಹತ್ಯೆಯಾದ ಮಕ್ಕಳ ಪೋಷಕರು ತೀವ್ರ ನಿರಾಶೆ ಮತ್ತು ಕೋಪವನ್ನು ಹೊರಹಾಕಿದ್ದಾರೆ. ಇದೆಂಥ ನ್ಯಾಯಾಂಗ ವ್ಯವಸ್ಥೆ, ಈ ರಾಕ್ಷಸರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ ಎಂದು ಬಿಕ್ಕಳಿಸಿದ್ದಾರೆ. ಮೂರು ವರ್ಷದ ಮತ್ತು ಐದು ವರ್ಷ ಸೇರಿದಂತೆ ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಕಳೆದುಕೊಂಡಿರುವ ಹಲವಾರು ಪೋಷಕರು ನ್ಯಾಯಾಂಗದ ತೀರ್ಪಿನಿಂದ ನಾವು ತೃಪ್ತರಾಗಿಲ್ಲ. ಇದು ಸರಿಯಲ್ಲ. ಅದೆಷ್ಟೋ ಮಕ್ಕಳನ್ನು ಕೊಂದ ಇವರೇ ಖುಲಾಸೆಗೊಂಡರೆ, ಒಬ್ಬ ಅಥವಾ ಇಬ್ಬರನ್ನು ಕೊಲೆ ಮಾಡಿದವರಿಗೆ ಇನ್ನಾವ ಶಿಕ್ಷೆಯಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪುಟ್ಟ ಪುಟ್ಟ ಮಕ್ಕಳ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ದುರುಳರು ಖುಲಾಸೆ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2006 ನಿಠಾರಿ ಸರಣಿ ಕೊಲೆ ಪ್ರಕರಣಗಳಲ್ಲಿ ದೋಷಿಗಳಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ (Moninder Singh Pandher) ಹಾಗೂ ಆತನ ಮನೆಕೆಲಸಗಾರ ಸುರೇಂದ್ರ ಕೋಲಿಯನ್ನು (Surendra Koli) ಅಲಹಾಬಾದ್ ಹೈಕೋರ್ಟ್ ಸೋಮವಾರ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತ್ತು. ಇದರಿಂದಾಗಿ ಪಂಧೇರ್ ಶೀಘ್ರ ನೋಯ್ಡಾ ಜೈಲಿನಿಂದ ಹೊರಬರಲಿದ್ದಾನೆ. ಆದರೆ ಕೋಲಿ ಬೇರೊಂದು ಕೇಸಿನಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಕಾರಣ ಗಾಜಿಯಾಬಾದ್ ಜೈಲು (Ghaziabad Jail) ಕಂಬಿಗಳ ಹಿಂದೆಯೇ ಉಳಿಯಲಿದ್ದಾನೆ.
ಇಸ್ರೇಲ್ ರಾಜತಾಂತ್ರಿಕನ ವಜಾ: ಗಾಜಾಪಟ್ಟಿ ಕ್ಲೀನ್ ಸ್ವಿಪ್ ಮಾಡುವ ಇಸ್ರೇಲ್ ಯತ್ನಕ್ಕೆ ಅಮೆರಿಕಾದಿಂದಲೂ ವಿರೋಧ
2006ರಲ್ಲಿ ನೋಯ್ಡಾದ ನಿಠಾರಿ ಎಂಬ ಗ್ರಾಮದ ಪಂಧೇರ್‌ನ ಬಂಗಲೆ ಹಿಂಭಾಗದಲ್ಲಿ ಹತ್ತಾರು ಅಸ್ಥಿಪಂಜರಗಳು ಸಿಕ್ಕಿದ್ದವು. ಆಗ ಪಂಧೇರ್ ಹಾಗೂ ಆತನ ಮನೆಕೆಲಸಗಾರ ಕೋಲಿಯನ್ನು ವಿಚಾರಣೆ ನಡೆಸಿದಾಗ ತಾವು ಅನೇಕ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿ ಅವರನ್ನು ಹೂತಿದ್ದಾಗಿ ಬಾಯಿ ಬಿಟ್ಟಿದ್ದರು. ಬಳಿಕ ಇಬ್ಬರನ್ನೂ ಗಾಜಿಯಾಬಾದ್ ಸಿಬಿಐ ಕೋರ್ಟ್ ದೋಷಿ ಎಂದು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ಇವರಿಬ್ಬರೂ ಶಿಕ್ಷೆ ಹಾಗೂ ತಮ್ಮನ್ನು ದೋಷಿ ಎಂದ ಸಿಬಿಐ ಕೋರ್ಟ್ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ನ ದ್ವಿಸದಸ್ಯ ಪೀಠ, ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿ ಇಬ್ಬರನ್ನೂ ದೋಷಮುಕ್ತಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಬಿಐ, ವಿಸ್ತೃತ ಆದೇಶ ಪ್ರತಿ ಕೈಸೇರಿದ ನಂತರ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದಿದೆ.
4 ದಿಕ್ಕುಗಳಿಂದ ಇಸ್ರೇಲ್ ಸುತ್ತುವರಿದ ಶತ್ರು ರಾಷ್ಟ್ರಗಳು: ಗಾಜಾ ಸಿರಿಯಾ ಲೆಬನಾನ್ ಮೂಲಕ ದಾಳಿ
ದೇಶವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ
ಡಿ.29, 2006 ರಂದು ರಾಷ್ಟ್ರ ರಾಜಧಾನಿಯ ಗಡಿಯಲ್ಲಿರುವ ನೋಯ್ಡಾದ (Noida) ನಿಠಾರಿಯಲ್ಲಿರುವ ಪಂಧೇರ್ ಮನೆಯ ಹಿಂಭಾಗದ ಚರಂಡಿಯಲ್ಲಿ ಎಂಟು ಮಕ್ಕಳ ಅಸ್ಥಿಪಂಜರ (dozens of skeletons) ಪತ್ತೆ ಆಗಿದ್ದವು. ಆಗ ಮನೆಯ ಸುತ್ತಲಿನ ಪ್ರದೇಶದಲ್ಲಿ ಚರಂಡಿಗಳನ್ನು ಮತ್ತಷ್ಟು ಅಗೆದಾಗ ಇನ್ನೂ ಹೆಚ್ಚಿನ ಅಸ್ಥಿಪಂಜರ ಪತ್ತೆಯಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದಾಗ ಈ ಅಸ್ಥಿಪಂಜರಗಳು ಆ ಪ್ರದೇಶದಲ್ಲಿ ಮೊದಲೇ ಕಾಣೆಯಾಗಿದ್ದ ಬಡ ಮಕ್ಕಳು ಹಾಗೂ ಒಬ್ಬ ಯುವತಿಗೆ ಸೇರಿದವಾಗಿದ್ದವು ಎಂಬುದು ದೃಢಪಟ್ಟಿತ್ತು. ಇದು ದೇಶವನ್ನೇ ಬೆಚ್ಚಿಬೀಳಿಸಿತ್ತು.
ಇದಾದ 10 ದಿನಗಳಲ್ಲಿ, ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡಾಗ ಮತ್ತಷ್ಟು ಶೋಧ ನಡೆಸಿತ್ತು. ಆಗಲೂ ಮತ್ತಷ್ಟು ಮೂಳೆಗಳು ಪತ್ತೆಯಾಗಿದ್ದವು. ಈ ವೇಳೆ ಪಂಧೇರ್ ಹಾಗೂ ಕೋಲಿಯನ್ನು ಸಂದೇಹದ ಹಿನ್ನೆಲೆಯಲ್ಲಿ ಸಿಬಿಐ ಬಂಧಿಸಿತ್ತು. ಲೈಂಗಿಕ ದೌರ್ಜನ್ಯ, ಕ್ರೂರ ಹತ್ಯೆ ಮತ್ತು ನರಭಕ್ಷಕತೆಯ (cannibalism) ಕೇಸು ದಾಖಲಿಸಿತ್ತು. ಅವರ ವಿಚಾರಣೆ ನಡೆಸಿದಾಗ ತಾವು ಮಕ್ಕಳು ಹಾಗೂ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾಗಿ ಮತ್ತು ಬಳಿಕ ಶವಗಳನ್ನು ಮನೆಯ ಹಿಂದೆ ಮುಚ್ಚಿ ಹಾಕಿದ್ದಾಗಿ ಇಬ್ಬರೂ ಹೇಳಿದ್ದರು. ಇದರ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್, 12 ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೋಲಿಯನ್ನು ಖುಲಾಸೆ ಮಾಡಿದೆ. ಇನ್ನೊಂದು ಪ್ರಕರಣದಲ್ಲಿ ಆತ ಜೀವಾವಧಿ ಶಿಕ್ಷೆಗೆ ಮೊದಲೇ ಗುರಿಯಾಗಿದ್ದ. ಇನ್ನು 2 ಕೇಸಿನಲ್ಲಿ ಗಲ್ಲು ಎದುರಿಸುತ್ತಿದ್ದ ಪಂಧೇರ್‌ನನ್ನೂ ದೋಷಮುಕ್ತಗೊಳಿಸಿದೆ.
ಇಸ್ರೇಲ್ ಪ್ಯಾಲೇಸ್ತೇನ್ ಯುದ್ಧ: ಹಮಾಸ್ ಉಗ್ರರಿಗೆ ಚೀನಾದಿಂದ ಶಸ್ತ್ರಾಸ್ತ್ರ ಪೂರೈಕೆ?
ತನಿಖಾಧಿಕಾರಿಗಳ ವೈಫಲ್ಯಕ್ಕೆ ಕೋರ್ಟ್ ತೀವ್ರ ಆಕ್ಷೇಪ
ನಿಠಾರಿ (Nithari) ಕೊಲೆ ಕೇಸ್‌ನ ಆರೋಪಿಗಳಾದ ಮೊನಿಂದರ್ ಸಿಂಗ್ ಪಂದೇರ್ ಹಾಗೂ ಸುರೇಂದ್ರ ಕೋಲಿ ಅವರ ಮೆಲಿನ ಆರೋಪ ಸಾಬೀತುಪಡಿಸುವಲ್ಲಿ ತನಿಖಾ ತಂಡದ ವೈಫಲ್ಯದ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಾಕ್ಷ್ಯ ಸಂಗ್ರಹಣೆ ವೇಳೆ ಕನಿಷ್ಠ ಮಾನದಂಡಗಳನ್ನೂ ನಿರ್ಲಜ್ಜವಾಗಿ ಉಲ್ಲಂಘಿಸಲಾಗಿದೆ. ಇದು ಸಾರ್ವಜನಿಕರು ವ್ಯವಸ್ಥೆ ಬಗ್ಗೆ ಇಟ್ಟಿರುವ ವಿಶ್ವಾಸಕ್ಕೆ ದ್ರೋಹವಲ್ಲದೇ ಮತ್ತೇನೂ ಅಲ್ಲ ಎಂದು ನ್ಯಾಯಪೀಠ ಕಿಡಿಕಾರಿದೆ.
ಸಂತ್ರಸ್ತರ ನಾಪತ್ತೆ, ಹತ್ಯೆಯನ್ನು ತನಿಖೆ ನಡೆಸಿದ ರೀತಿ ತೀವ್ರ ಬೇಸರ ತರಿಸಿದೆ. ಇಡೀ ಪ್ರಕರಣವನ್ನು ಕೇವಲ ಸುರೇಂದ್ರ ಕೋಲಿಯ ಸಾಕ್ಷ್ಯ ಆಧರಿಸಿ ಮುನ್ನಡೆಸಲಾಗಿದೆ. ಆತನ ಹೇಳಿಕೆ ಆಧರಿಸಿ ವಶಪಡಿಸಿಕೊಳ್ಳಲಾದ ಸಾಕ್ಷ್ಯಗಳ ಕುರಿತು ತನಿಖಾ ವರದಿಯಲ್ಲಿ ಸೂಕ್ತ ಪ್ರಸ್ತಾಪವನ್ನೇ ಮಾಡಿಲ್ಲ. ಬಂಧನ, ಸಾಕ್ಷ್ಯ ಸಂಗ್ರಹ, ತಪ್ಪೊಪ್ಪಿಕೆ ಹೇಳಿಕೆ ದಾಖಲು ಹೀಗೆ ಪ್ರತಿ ವಿಷಯದಲ್ಲೂ ತನಿಖಾಧಿಕಾರಿಗಳು ಉದಾಸೀನ ತೋರಿದ್ದಾರೆ. ಎಲ್ಲ ಸಾಕ್ಷ್ಯಗಳನ್ನು ಪಂದೇರ್ ಮನೆಯಿಂದ ಹೊರಗೆ ಮಾತ್ರವೇ ಸಂಗ್ರಹಿಸಲಾಗಿದೆ. ಪ್ರಕರಣದಲ್ಲಿ ಅಂಗಾಂಗ ಕಳ್ಳತನ ಕೋನದ ಬಗ್ಗೆ ಉನ್ನತ ಮಟ್ಟದ ಸಮಿತಿ ಪ್ರಸ್ತಾಪಿಸಿದ್ದರೂ ಆ ಬಗ್ಗೆಯೂ ತನಿಖೆ ನಡೆಸಿಲ್ಲ ಎಂದು ಕೋರ್ಟ್ ಕಿಡಿಕಾರಿದೆ.
