ನವದೆಹಲಿ[ಜ.09]: ಜನವರಿ 22ರಂದು ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರುತ್ತಾರಾ? ಗಲ್ಲು ಶಿಕ್ಷೆಯಾಗುತ್ತಾ? ಸದ್ಯ ಸಂದೇಹಗಳು ಮತ್ತೆ ಕಾಡಲಾರಂಭಿಸಿವೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣ ಮತ್ತೆ ಕಬ್ಬಿಣದ ಕಡಲೆಯಾಗುವಂತೆ ಭಾಸವಾಗಿದೆ. ಹೌದು ನಿರ್ಭಯಾ ಅತ್ಯಾಚಾರಿಗಳಲ್ಲೊಬ್ಬನಾದ ವಿನಯ್ ಶರ್ಮಾ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದು, ಮತ್ತೆ ದೋಷಿಗಳ ಗಲ್ಲು ಮುಂದಕ್ಕೋಗುವ ಲಕ್ಷಣಗಳು ಗೋಚರಿಸಿವೆ. 

ಏಳು ವರ್ಷಗಳ ಹಿಂದೆ ನಡೆದಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಸಂಬಂಧ ಅಂತಿಮ ಕ್ಷಣದ ಕಾನೂನು ಸಂಘರ್ಷ ಮತ್ತೆ ಶುರುವಾಗಿದೆ. ಪರಾಧಿಗಳು ಶಿಕ್ಷೆಯಿಂದ ತಪ್ಪಿದಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದು, ಸದ್ಯ ಕೋರ್ಟ್ ನೀಡಿರುವ ಗಲ್ಲು ಶಿಕ್ಷೆ ತೀರ್ಪನ್ನು ಪ್ರಶದ್ನಿಸಿ ಅಪರಾಧಿಗಳಲ್ಲೊಬ್ಬನಾದ ವಿನಯ್ ಶರ್ಮಾ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಇದು ಮೊದಲ ಕ್ಯುರೇಟಿವ್ ಅರ್ಜಿಯಾಗಿದ್ದು, ಉಳಿದ ಇಬ್ಬರು ಕ್ಯುರೇಟಿವ್ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ತಯಾರಿಲ್ಲದರಿಂದ ಅರ್ಜಿ ಸಲ್ಲಿಸಲು ಕೊಂಚ ವಿಳಂಬವಾಗಲಿದೆ ಎಂದು ಅಪರಾಧಿ ಪರ ವಕೀಲ ಎಪಿ ಸಿಂಗ್ ಹೇಳಿದ್ದಾರೆ.

ನಿರ್ಭಯಾ ರೇಪಿಸ್ಟ್‌ಗಳನ್ನು ಗಲ್ಲಿಗೇರಿಸುವ ಪವನ್‌ಗೆ ನಟ ಜಗ್ಗೇಶ್‌ರಿಂದ 1 ಲಕ್ಷ ರೂ!

ಪಟಿಯಾಲಾ ಹೌಸ್ ಕೋರ್ಟ್ ನಿಂದ ಅವರ ಪ್ರತಿಲಿಪಿ ಒದಗಿಸಲು ಅಲ್ಲೇ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿಂದ ದಾಖಲೆಗಳ ಪ್ರತಿ ಸಿಕ್ಕ ಬಳಿಕವಷ್ಟೇ ಸುಪ್ರೀಂ ಕೋರ್ಟ್ ನಲ್ಲಿ ಔಪಚಾರಿಕ ಮನವಿ ಸಲ್ಲಿಸಲಿದ್ದಾರೆ. ಇದರೊಂದಿಗೇ ಈ ಬಹುಚರ್ಚಿತ ವಿಚಾರ ಮತ್ತೊಂಮ್ಮೆ ಕಾನೂನಿನ ದಾಳದಲ್ಲಿ ಸಿಲುಕಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಇದರೊಂದಿಗೇ ಜನವರಿ 22 ರಂದು ಈ ದೋಷಿಗಳಿಗೆ ಗಲ್ಲು ವಿಧಿಸಲಿರುವ ಡೆತ್ ವಾರಂಟ್ ಕುರಿತೂ ಅನುಮಾನಗಳು ಎದ್ದಿವೆ. 

ನಿರ್ಭಯಾ ಗ್ಯಾಂಗ್ ರೇಪ್ ಕೇಸ್ ಸಾಗಿಬಂದ ಹಾದಿ..!