ನವದೆಹಲಿ[ಫೆ.17]: ನಿರ್ಭಯಾ ಹಂತಕರು ಗಲ್ಲು ಢಶಿಕ್ಷೆ ಮುಂದೂಡಲು ನಾನಾ ಯತ್ನಗಳನ್ನು ನಡೆಸುತ್ತಿದ್ದು, ದೋಷಿಗಳ ಅರ್ಜಿಗಳೆಲ್ಲವೂ ಒಂದಾದ ಬಳಿಕ ಮತ್ತೊಂದರಂತೆ ವಜಾಗೊಳ್ಳುತ್ತಿವೆ. ಸದ್ಯ ದೋಷಿಗಳ ಈ ಎಲ್ಲಾ ಯತ್ನದ ಬಳಿಕ ಮತ್ತೆ ಗಲ್ಲು ಶಿಕ್ಷೆಗೆ ದಿನಾಂಕ ಫಿಕ್ಸ್ ಆಗಿದೆ.

"

ಹೌದು ಮಾರ್ಚ್ 3 ರಂದು ಹಂತಕರಿಗೆ ಗಲ್ಲುಶಿಕ್ಷೆ ಫಿಕ್ಸ್ ಆಗಿದೆ. ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ಹಂತಕರು ನೇಣುಗಂಬಬಕ್ಕೇರಿಸಲು ಡೆತ್ ವಾರಂಟ್ ಹೊರಡಿಸಲಾಗಿದೆ. 

ಈಗಾಗಲೇ ನಾಲ್ವರಲ್ಲಿ ಇಬ್ಬರು ಅಪರಾಧಿಗಳೆದುರು ಗಲ್ಲು ಮುಂದೂಡಲು ಇದ್ದ ಎಲ್ಲಾ ಕಾನೂನಾತ್ಮಕ ಹಾದಿಗಳು ಮುಗಿದ್ದಿದ್ದು, ಆಟಕ್ಕೆ ಬ್ರೇಕ್ ಬಿದ್ದಿದೆ. ಹೀಗಿದ್ದರೂ ಇನ್ನುಳಿದ ಇಬ್ಬರಿಗೆ ಕ್ಯುರೇಟೆವ್ ಹಾಘೂ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶ ಇದೆ ಎಂಬುವುದು ಉಲ್ಲೇಖನೀಯ. ಅಪರಾಧಿಗಳಿಬ್ಬರು ತಮ್ಮೆದುರು ಇರುವ ಈ ಅವಕಾಶಗಳನ್ನು ಬಳಸಿ ಗಲ್ಲು ಶಿಕ್ಷೆ ಮುಂದೂಡುವ ಅಂತಿಮ ಹಂತದ ಯತ್ನಗಳನ್ನು ನಡೆಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.