4 ರೈಲುಗಳು ಹಳಿ ತಪ್ಪಿದ ಬಗ್ಗೆ ಎನ್‌ಐಎ ತನಿಖೆ ಪ್ರಾರಂಭ-ಮತ್ತೆ 27 ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ

ಇತ್ತೀಚೆಗೆ ನಡೆದ ನಾಲ್ಕು ರೈಲು ಹಳಿ ತಪ್ಪುವ ಘಟನೆಗಳಲ್ಲಿ ದುಷ್ಕೃತ್ಯದ ಸಂಚಿನ ಬಗ್ಗೆ NIA ತನಿಖೆ ಆರಂಭಿಸಿದೆ. ಹೆಚ್ಚುವರಿಯಾಗಿ, 27 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ, ಇದು ಹೆಚ್ಚುತ್ತಿರುವ ಸುರಕ್ಷತಾ ಕಳವಳಗಳನ್ನು ಹುಟ್ಟುಹಾಕಿದೆ.

NIA begins investigation into 4 train derailments mrq

ನವದೆಹಲಿ: ಇತ್ತೀಚೆಗೆ ದೇಶದ ವಿವಿಧ ಘಟನೆಗಳಲ್ಲಿ ದುಷ್ಕೃತ್ಯದ ಸಂಚು ಏನಾದರೂ ಇದೆಯೇ ಎಂಬುದರ ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಪ್ರಾಥಮಿಕ ತನಿಖೆ ಆರಂಭಿಸಿದೆ. ಇತ್ತೀಚೆಗೆ ರೈಲುಹಳಿ ತಪ್ಪಿಸಿದ, ತಪ್ಪಿಸುವ ಯತ್ನದ ಹಲವು ಘಟನೆಗಳು ನಡೆದಿದ್ದವಾದರೂ, ಈ ಪೈಕಿ 4 ಪ್ರಕ ರಣಗಳು ಹೆಚ್ಚು ಅನುಮಾನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅದರ ಮೇಲೆ ಎನ್‌ಐಎ ನಿಗಾ ವಹಿಸಿದೆ. 

ಕ್ರಾಸಿಂಗ್ ತಪಾಸಣೆಗೆ 15 ದಿನ ಅಭಿಯಾನ
ಇತ್ತೀಚೆಗೆ ದೇಶದ ಹಲವು ಕಡೆ ರೈಲುಗಳುಸಿಗ್ನಲ್ ಸಮಸ್ಯೆಯಿಂದಹಳಿತಪ್ಪಿದ ಘಟನೆ ನಡೆದ ಬೆನ್ನಲ್ಲೇ, ದೇಶವ್ಯಾಪಿ ಇಂಟರ್ ಲಾಕಿಂಗ್ ಪಾಯಿಂಟ್ ಮತ್ತು ಕ್ರಾಸಿಂಗ್ ಗಳನ್ನು ಪರಿಶೀಲಿಸಲು 15 ದಿನಗಳ ವಿಶೇಷ ಅಭಿಯಾನ ನಡೆಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈಕುರಿತುಎಲ್ಲಾವಲಯಗಳಿಗೂ ರೈಲ್ವೆ ಇಲಾಖೆ ಸುತ್ತೋಲೆ ರವಾನಿಸಿದೆ.

ಮತ್ತೆ 79 ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ: ಕಿಡಿಗೇಡಿಗಳ ಕೃತ್ಯಕ್ಕೆ 600 ಕೋಟಿ ನಷ್ಟ!

ಮತ್ತೆ 27 ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ
ದೇಶದಲ್ಲಿ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಯಂತಹ ಘಟನೆ ಮುಂದುವರೆದಿದೆ. ಶುಕ್ರವಾರವೂ 27 ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಮೂಲಗಳ ಪ್ರಕಾರ, ಇಂಡಿಗೋ, ವಿಸ್ತಾರ, ಸ್ಪೈಸ್‌ಜೆಟ್‌ ಸಂಸ್ಥೆಯ 7 ವಿಮಾನ ಹಾಗೂ ಏರಿಂಡಿಯಾದ 6 ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ ಎನ್ನಲಾಗಿದೆ. ಕಳೆದ 12 ದಿನಗಳಲ್ಲಿ 275ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದ್ದು, ಹೆಚ್ಚಿನವು ಸಾಮಾಜಿಕ ಜಾಲತಾಣದ ಮುಖೇನ ಬಂದಿವೆ.

ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ತನಿಖೆ ಕೈಗೊಂಡಿದ್ದು, ಮೆಟಾ ಮತ್ತು ಎಕ್ಸ್‌ಗೆ , ಸಾಮಾಜಿಕ ಜಾಲತಾಣದ ಮೂಲಕ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸುವವರು, ಇಂತಹ ಚಟುವಟಿಕೆ ಹಿಂದಿರುವರ ಮಾಹಿತಿ ನೀಡುವಂತೆ ಕೇಳಿದೆ.

Latest Videos
Follow Us:
Download App:
  • android
  • ios