Asianet Suvarna News Asianet Suvarna News

'ಶ್ರೀರಾಮ, ಸೀತೆಯ ಆಶಯದಂತೆ ಬಾಳೋಣ...' ದೀಪಾವಳಿಗೆ ನ್ಯೂಯಾರ್ಕ್‌ ಸಿಟಿ ಮೇಯರ್‌ ಸಂದೇಶ!

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧದ ನಡುವೆ ಅಮಾಯಕರು ಜೀವಗಳು ಬಲಿಯಾಗುತ್ತಿರುವ ಸಮಯದಲ್ಲಿ ಅಮೆರಿಕ್ ನ್ಯೂಯಾರ್ಕ್‌ ಸಿಟಿಯ ಮೇಯರ್‌ ಎರಿಕ್‌ ಆಡಮ್ಸ್‌ ದೀಪಾವಳಿಯ ಸಂದೇಶ ನೀಡಿದ್ದು, ಜಗತ್ತು ಶ್ರೀರಾಮ ಹಾಗೂ ಸೀತೆಯ ಆಶಯದಂತೆ ಬಾಳ್ವೆ ನಡೆಸಬೇಕಾಗಿದೆ ಎಂದಿದ್ದಾರೆ.
 

New York City Mayor Eric Adams  deepavali message Lets live in the spirit of Ram Sita san
Author
First Published Oct 18, 2023, 6:31 PM IST

ನ್ಯೂಯಾರ್ಕ್‌ (ಅ.18): ದೀಪಾವಳಿ ಕೇವಲ ಹಬ್ಬ ಮಾತ್ರವಲ್ಲ. ಎಲ್ಲರಲ್ಲಿರುವ ಕತ್ತಲನ್ನು ದೂರ ಮಾಡಿ ಬೆಳಕನ್ನು ತರುವುದನ್ನು ನೆನಪು ಮಾಡುವ ಸಂಭ್ರಮ ಎಂದು ನ್ಯೂಯಾರ್ಕ್‌ ಸಿಟಿ ಮೇಯರ್‌ ಎರಿಕ್‌ ಆಡಮ್ಸ್‌ ಹೇಳಿದ್ದಾರೆ. ಜನರು ಭಗವಾನ್ ಶ್ರೀರಾಮ, ಸೀತಾ ದೇವಿ ಮತ್ತು ಮಹಾತ್ಮ ಗಾಂಧಿಯವರ ಆಶಯವನ್ನು ಅಳವಡಿಸಿಕೊಳ್ಳಲು ಮತ್ತು ಉತ್ತಮ ಮಾನವರಾಗಲು ಕರೆ ನೀಡಿದರು. ಮಂಗಳವಾರ ತಮ್ಮ ನ್ಯೂಯಾರ್ಕ್ ನಿವಾಸ ಗ್ರೇಸಿ ಮ್ಯಾನ್ಷನ್‌ನಲ್ಲಿ ಆಯೋಜಿಸಲಾದ ವಾರ್ಷಿಕ ದೀಪಾವಳಿ ಆಚರಣೆಯಲ್ಲಿ ಆಡಮ್ಸ್ ಅವರು ಈ ಮಾತು ಹೇಳಿದ್ದಾಋಏ. ಅಮಾಯಕರ ಜೀವಗಳ ನಷ್ಟಕ್ಕೆ ಸಾಕ್ಷಿಯಾಗಿರುವ ಜಗತ್ತನ್ನು ಆವರಿಸಿರುವ ಕತ್ತಲೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಜನರು ಮಾಡಬೇಕಿದೆ ಎಂದಿದ್ದಾರೆ. ದೀಪಾವಳಿ ಅನ್ನೋದು ಕೇವಲ ರಜಾದಿನ ಎನ್ನುವ ಸಂಭ್ರಮ ಮಾತ್ರವಲ್ಲ. ನಾವು ಎಲ್ಲೇ ಕತ್ತಲನ್ನು ನೋಡಿದರೂ ಅದನ್ನು ದೂರ ತಳ್ಳಿ ಬೆಳಕನ್ನು ಸಾರಬೇಕು. ಅದಕ್ಕಾಗಿ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತದೆ. ಇದೇ ಬೆಳಕಿನ ಹಬ್ಬದ ಸಾರ ಎಂದು ಆಡಮ್ಸ್‌ ಹೇಳಿದ್ದಾರೆ

ಭಾರತೀಯ-ಅಮೆರಿಕನ್ ಮತ್ತು ದಕ್ಷಿಣ ಏಷ್ಯಾದ ಸಮುದಾಯದ ನೂರಾರು ಸದಸ್ಯರು ಮತ್ತು ಇತರ ರಾಷ್ಟ್ರದ ಜನರು ಮತ್ತು ಸರ್ಕಾರಿ ಅಧಿಕಾರಿಗಳಿಂದ ವಲಸೆ ಬಂದವರು ಭಾಗವಹಿಸಿದ ವಾರ್ಷಿಕ ಆಚರಣೆಯಲ್ಲಿ ಆಡಮ್ಸ್, ದೀಪಾವಳಿಯು ಮೇಣದಬತ್ತಿ ಅಥವಾ ಎಣ್ಣೆಯನ್ನು ಬೆಳಗಿಸುವುದಕ್ಕಿಂತ ಹೆಚ್ಚಿನದು ಆದರೆ "ನಮ್ಮ ಜೀವನವನ್ನು ಬೆಳಗಿಸುತ್ತದೆ" ಎಂದು ಹೇಳಿದರು.
ನಾವು ಪ್ರತಿದಿನ ಕತ್ತಲೆಯನ್ನೇ ಕಾಣುತ್ತಿದ್ದೇವೆ. ಆದ್ದರಿಂದ, ನಾವು ನಿಜವಾಗಿಯೂ ರಾಮಾಯಣದ ಜೀವನವನ್ನು ನಂಬಿದರೆ, ಸೀತೆಯ ಜೀವನವನ್ನು ನಿಜವಾಗಿಯೂ ನಂಬಿದರೆ, ನಾವು ನಿಜವಾಗಿಯೂ ಗಾಂಧಿಯ ಜೀವನವನ್ನು ನಂಬಿದರೆ, ನಾವು ಗಾಂಧಿಯ ಹೆಜ್ಜೆಗಳನ್ನು ಮುಂದುವರಿಸಬೇಕು. . ನಾವು ಕೇವಲ ಆರಾಧಕರಾಗಲು ಸಾಧ್ಯವಿಲ್ಲ, ಅದನ್ನು ಪಾಲಿಸುವಂತವರಾಗಬೇಕು ಅವರು ಹೇಳಿದರು.

ಜಗತ್ತಿನಾದ್ಯಂತ ಕತ್ತಲೆ ಆವರಿಸಿರುವ ಈ ಸಮಯದಲ್ಲಿ ಮತ್ತು ಮುಗ್ಧ ಜೀವಗಳ ನಷ್ಟಕ್ಕೆ ಜಗತ್ತು ಸಾಕ್ಷಿಯಾಗುತ್ತಿರುವ ಸಮಯದಲ್ಲಿ, "ಇದು ನಮ್ಮ ಭವಿಷ್ಯವನ್ನು ಆವರಿಸುವುದನ್ನು ಮತ್ತು ಮಾನವೀಯತೆಯನ್ನು ಆವರಿಸುವುದನ್ನು ನೋಡಿಕೊಳ್ಳುತ್ತಾ ಸುಮ್ಮನೆ ಇರಲು ಸಾಧ್ಯವಿಲ್ಲ' ಎಂದಿದ್ದಾರೆ.

"ನಾವು ಉತ್ತಮ ಮನುಷ್ಯರಾಗೋಣ. ದೀಪಾವಳಿಯ ಉತ್ಸಾಹದಲ್ಲಿ ಬದುಕೋಣ. ಗಾಂಧಿಯ ಉತ್ಸಾಹದಲ್ಲಿ ಬದುಕೋಣ. ಸೀತೆಯ ಆತ್ಮದಲ್ಲಿ ಬದುಕೋಣ. ರಾಮನ ಆತ್ಮದಲ್ಲಿ ಬದುಕೋಣ, ಮತ್ತು ನಂತರ  ಈ ರಜಾದಿನಕ್ಕೆ ನಿಜವಾದ ಅರ್ಥ ಬರುತ್ತದೆ ಎಂದಿದ್ದಾರೆ.

ಮಂಗಳ ಗ್ರಹದಲ್ಲಿ ಸತತ ಆರು ಗಂಟೆಗಳ ಕಾಲ ಕಂಪನ, ಏನು ಕಾರಣ?

ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಶಾಲಾ ರಜೆಯನ್ನಾಗಿ ಮಾಡುವ ಪ್ರಯತ್ನಗಳ ನೇತೃತ್ವ ವಹಿಸಿದ್ದ ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿ ಮಹಿಳೆ ಜೆನಿಫರ್ ರಾಜ್‌ಕುಮಾರ್, ಭಾರತೀಯ-ಅಮೆರಿಕನ್ ಸಮುದಾಯವು ಈಗಿನಷ್ಟು ಶಕ್ತಿಶಾಲಿ ಹಿಂದೆಂದೂ ಇದ್ದಿರಲಿಲ್ಲ ಎಂದಿದ್ದಾರೆ. ನಾವು ಈಗ ಈ ರಾಜ್ಯದಲ್ಲಿ ಅಧಿಕಾರದ ಟೇಬಲ್‌ಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿಯೊಂದಕ್ಕೂ, ಮಧ್ಯಪ್ರಾಚ್ಯದಲ್ಲಿ ಭೀಕರ ಹಿಂಸಾಚಾರವಿದೆ ಮತ್ತು ವಿವಿಧ ಗುಂಪುಗಳ ವಿರುದ್ಧ ದ್ವೇಷ ಮತ್ತು ಧರ್ಮಾಂಧತೆಯ ನಡುವೆ, "ನಾವು ಶಾಂತಿಯ ಹಾದಿಯಲ್ಲಿ ಮುಂದುವರಿಯಬೇಕಿದೆ' ಎಂದಿದ್ದಾರೆ. "ನಮ್ಮದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಸಂಸ್ಕೃತಿಯಾಗಿದೆ, ಅವರು ಗಾಂಧಿಯಿಂದ ಪ್ರೇರಿತರಾಗಿದ್ದವರು" ಎಂದು ರಾಜ್‌ಕುಮಾರ್ ಹೇಳಿದರು.

Watch: ಮಂಗಳ ಗ್ರಹದ ಮೇಲೆ 54ನೇ ಬಾರಿ ಹೆಲಿಕಾಪ್ಟರ್‌ ಹಾರಿಸಿದ ನಾಸಾ!

 

Follow Us:
Download App:
  • android
  • ios