Asianet Suvarna News Asianet Suvarna News

‘ಡೆಲ್ಟಾ ಪ್ಲಸ್‌’ ಹೆಸರಿನ ಹೊಸ ಕೊರೋನಾ ವೈರಾಣು ಪತ್ತೆ!

* ‘ಡೆಲ್ಟಾಪ್ಲಸ್‌’ ಹೆಸರಿನ ಹೊಸ ಕೊರೋನಾ ವೈರಾಣು ಪತ್ತೆ

* ಇದೂ ಕೂಡ ‘ಡೆಲ್ಟಾ’ ತಳಿ ರೀತಿಯಲ್ಲೇ ಹೆಚ್ಚು ಸೋಂಕುಕಾರಕ ಆಗಬಲ್ಲದು

* ಆದರೆ ಭಾರತದಲ್ಲಿ ಇದು ಇನ್ನೂ ಹೆಚ್ಚು ಪ್ರಸರಣ ಆಗಿಲ್ಲ, ಆತಂಕ ಬೇಡ: ತಜ್ಞರು

New Delta plus variant of SARS CoV 2 identified; here what we know so far pod
Author
Bangalore, First Published Jun 15, 2021, 8:06 AM IST

ನವದೆಹಲಿ(ಜೂ.15): ಭಾರತಲ್ಲಿ ಕೊರೋನಾ ಎರಡನೇ ಅಲೆಗೆ ‘ಡೆಲ್ಟಾ’ ತಳಿಯ ರೂಪಾಂತರಿ ಕೊರೋನಾ ವೈರಸ್‌ ಕಾರಣವಾಗಿದೆ ಎಂದು ಇತ್ತೀಚೆಗೆ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ‘ಡೆಲ್ಟಾಪ್ಲಸ್‌ ಅಥವಾ ‘ಎವೈ.1’ ಎಂಬ ರೂಪಾಂತರಿ ಕೊರೋನಾ ವೈರಸ್‌ ತಳಿ ಪತ್ತೆಯಾಗಿದ್ದು ಆತಂಕ ಸೃಷ್ಟಿಸಬಹುದಾಗಿದೆ. ಆದರೆ ಈಗಿನ ಮಟ್ಟಿಗೆ ಈ ಬಗ್ಗೆ ಗಾಬರಿ ಪಡಬೇಕಿಲ್ಲ. ಏಕೆಂದರೆ ಈವರೆಗೆ ಇದು ಹೆಚ್ಚಾಗಿ ಸೋಂಕಿತರಲ್ಲಿ ಪತ್ತೆಯಾಗಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

‘ಬಿ.1.617.2’ ಅಥವಾ ‘ಡೆಲ್ಟಾ’ ಎಂದು 2ನೇ ಅಲೆಗೆ ಕಾರಣವಾದ ವೈರಾಣುವಿಗೆ ವಿಶ್ವ ಆರೋಗ್ಯ ಸಂಸ್ಥೆ ಹೆಸರಿಟ್ಟಿತ್ತು. ಈಗ ‘ಬಿ.1.617.2.1’ ಅಥವಾ ‘ಡೆಲ್ಟಾಪ್ಲಸ್‌’ ಅಥವಾ ‘ಎವೈ.1’ ಎಂದು ಹೊಸ ವೈರಾಣುವಿಗೆ ನಾಮಕರಣ ಮಾಡಲಾಗಿದೆ. ಇದೂ ಕೂಡ ತುಂಬಾ ಸೋಂಕುಕಾರಕವಾಗಬಲ್ಲುದಾಗಿದೆ. ರೋಗನಿರೋಧಕ ಶಕ್ತಿಯನ್ನು ಭೇದಿಸಬಲ್ಲುದಾಗಿದೆ ಎಂದು ದಿಲ್ಲಿ ಸಿಎಸ್‌ಐಆರ್‌ ಜೆನೋಮಿಕ್‌ ಇನ್ಸ್‌ಟಿಟ್ಯೂಟ್‌ನ ತಜ್ಞ ವಿನೋದ್‌ ಸ್ಕಾರಿಯಾ ಹೇಳಿದ್ದಾರೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಮಾನವನ ಕೋಶಗಳಲ್ಲಿ ಸೇರಿಕೊಳ್ಳುವ ಈ ರೂಪಾಂತರಿ ಕೊರೋನಾಗೆ ಅದರಲ್ಲಿ ಸೋಂಕು ಉಂಟು ಮಾಡಬಲ್ಲ ಶಕ್ತಿ ಇದೆ ಎಂದು ಅವರು ಹೇಳಿದ್ದಾರೆ.

ಬ್ರಿಟನ್‌ ಆರೋಗ್ಯ ಇಲಾಖೆ ಕೂಡ ಇದನ್ನು ಖಚಿತಪಡಿಸಿದೆ. ಡೆಲ್ಟಾಪ್ಲಸ್‌ ವೈರಾಣುವು ಭಾರತದ 6 ಜೆನೋಮ್‌ಗಳಲ್ಲಿ ಜೂನ್‌ 7ರವರೆಗೆ ಪತ್ತೆಯಾಗಿದೆ. ಆದರೆ ಈವರೆಗೆ ಇದು ಭಾರತದಲ್ಲಿ ಹೆಚ್ಚಾಗಿ ಸೋಂಕಿತರಲ್ಲಿ ಕಂಡುಬಂದಿಲ್ಲ. ಯುರೋಪ್‌, ಏಷ್ಯಾ ಹಾಗೂ ಅಮೆರಿಕದಲ್ಲಿ ಕೂಡ ಇದೇ ಮಾದರಿಯ ವೈರಾಣುವಿದೆ ಎಂದು ಅವರು ಹೇಳಿದ್ದಾರೆ. ಇದೇ ಮಾದರಿಯ ವೈರಾಣು ಯುರೋಪ್‌ನಲ್ಲಿ ಮಾಚ್‌ರ್‍ನಲ್ಲೂ ಪತ್ತೆಯಾಗಿತ್ತು ಎಂದಿದ್ದಾರೆ.

ಇದೇ ವೇಳೆ, ‘ಪತ್ತೆಯಾದ ಈ ಹೊಸ ವೈರಾಣು ಎಷ್ಟುಸೋಂಕು ಪ್ರಸರಣಕ್ಕೆ ಕಾರಣವಾಗಬಲ್ಲದು ಎಂಬುದು ಮುಖ್ಯವಾಗುದೆ’ ಎಂದು ತಜ್ಞೆ ವಿನೀತಾ ಬಾಲ್‌ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios