Asianet Suvarna News Asianet Suvarna News

3 ಹೊಸ ಅಪರಾಧ ಕಾನೂನು ಜುಲೈ 1ರಿಂದ ಜಾರಿ, ಬ್ರಿಟಿಷರ ಐಪಿಸಿ-ಸಿಆರ್‌ಪಿಸಿಗೆ ಗುಡ್ ಬೈ!

ಬ್ರಿಟಿಷರು ರಚಿಸಿದ ಅಪರಾಧ ಕುರಿತ ಕಾನೂನು ಬದಲು ಭಾರತೀಯ ನ್ಯಾ ಸಂಹಿತೆ ಕಾನೂನುು ಜುಲೈ 1ರಿಂದ ಕಾಯ್ದೆಯಾಗಿ ಜಾರಿಗೆ ಬರುತ್ತಿದೆ. ಐಪಿಸಿ, ಸಿಆರ್‌ಪಿಸಿ ಸೆಕ್ಷನ್‌ಗಳಿಗೆ ಗುಡ್ ಬೈ ಹೇಳಲಿರುವ ಭಾರತ ಮೂರು ಹೊಸ ಅಪರಾಧ ಕಾನೂನು ಅಡಿಯಲ್ಲಿ ಮಹತ್ತರ ಬದಲಾವಣೆಯೊಂದಿಗೆ ಮುನ್ನಡೆಯಲಿದೆ.
 

New Criminal Law come into effect from july 1st replace Indian penal code ckm
Author
First Published Feb 24, 2024, 4:24 PM IST

ನವದೆಹಲಿ(ಫೆ.24) ಅಪರಾಧ ಕುರಿತು ಕೇಂದ್ರ ಬಿಜೆಪಿ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಇದೀಗ ಸರ್ಕಾರ ಹೇಳಿದೆ. ಬ್ರಿಟಿಷರ್ ರಚಿಸಿದ ಐಪಿಸಿ, ಸಿಆರ್‌ಪಿಸಿ ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲು ಜುಲೈ 1 ರಿಂದ  ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಸಂಹಿತೆ ಜಾರಿಗೆ ಬರಲಿದೆ.

ಮಳೆಗಾಲದ ಅಧಿವೇಶನದಲ್ಲಿ ಹೊಸ ಅಪರಾಧ ಕಾಯ್ದೆಯನ್ನು ಕೇಂದ್ರ ಸರ್ಕಾರ ಸದನದಲ್ಲಿ ಮಂಡಿಸಿತ್ತು. 2023ರ ಆಗಸ್ಟ್ ತಿಂಗಳಲ್ಲಿ ಮಂಡಿಸಿದ ಈ ಮಸೂದೆ ಹಲವು ಪರಿಷ್ಕರಣೆಗೊಂಡಿತ್ತು. ಪರಿಷ್ಕರಣೆ ಬಳಿ ನೂತನ ಅಪರಾದ ಸಂಹಿತೆ ಸದನದಲ್ಲಿ ಪಾಸ್ ಆಗಿತ್ತು. ಇದೀಗ ಈ ಮಸೂದೆ ಕಾಯ್ದೆಯಾಗಿ ಜುಲೈ 1ರಿಂದ ಜಾರಿಗೆ ಬರುತ್ತಿದೆ.

ಬ್ರಿಟಿಷ್ ಕಾಲದ ಕ್ರಿಮಿನಲ್ ಕಾನೂನು ಬದಲಿಸುವ 3 ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ!

ನೂರಾರು ವರ್ಷಗಳಿಂದ ಜಾರಿಯಲ್ಲಿರುವ ಹಾಗೂ ಬ್ರಿಟಿಷರ ಕಾನೂನು ವ್ಯವಸ್ಥೆ ಆಧರಿಸಿ ರಚಿಸಲಾಗಿರುವ ಕಾಯ್ದೆಗಳನ್ನು ಭಾರತೀಯ ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಲು ಕೇಂದ್ರ ಸರ್ಕಾರ ಈ ಕಾನೂನುಗಳನ್ನು ರೂಪಿಸಿದೆ. ಈ ಮೊದಲು ಇದನ್ನು ಮಂಡಿಸಲಾಗಿದ್ದರೂ ಸಹ ಸಂಸತ್‌ ಸಮಿತಿ ಮಾಡಿದ ಶಿಫಾರಸುಗಳನ್ನು ಸೇರ್ಪಡೆ ಮಾಡಲು ಇವುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು.

ಭಾರತೀಯ ದಂಡ ಸಂಹಿತೆ- 1860 (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ- 1897 (ಸಿಆರ್‌ಪಿಸಿ) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್- 1872 ಬದಲಾವಣೆಯ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಈ ಮಸೂದೆಗೆ ಸಂಸತ್ತಿನ ಉಭಯ ಸದನಗಳ ಅನುಮೋದನೆ ಸಿಕ್ಕ ಬಳಿಕ 3 ಹೊಸ ಭಾರತೀಯ ಕಾಯ್ದೆಗಳು ಅಸ್ತಿತ್ವಕ್ಕೆ ಬರಲಿವೆ. ಐಪಿಸಿಗೆ ಪ್ರತಿಯಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಸಿಆರ್‌ಪಿಸಿಗೆ ಬದಲಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿನ್‌ಎಸ್‌ಎಸ್) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಾಗಿ ಭಾರತೀಯ ಸಾಕ್ಷ್ಯ (ಬಿಎಸ್) ಕಾಯ್ದೆ ಜಾರಿಗೆ ಬರಲಿದೆ.

ಗುಂಪು ಹತ್ಯೆಗೆ ಗಲ್ಲು ಶಿಕ್ಷೆ, ಮಹತ್ತರ ಬದಲಾವಣೆಯ ಭಾರತೀಯ ನ್ಯಾಯ ಸಂಹಿತೆ ಬಿಲ್ ಪಾಸ್!

ಕ್ರಿಮಿನಲ್‌ ಕಾಯ್ದೆಗಳ ಬದಲಿಸುವ ನೂತನ ಭಾರತೀಯ ನ್ಯಾಯ ಸಂಹಿತ, ಭಾರತೀಯ ನಾಗರಿಕ ಸುರಕ್ಷಾಸಂಹಿತ ಹಾಗೂ ಭಾರತೀಯ ಸಾಕ್ಷ್ಯ ಸಂಹಿತಕ್ಕೆ 2023ರ ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದರು. ಸಂಸತ್‌ ಮುಂಗಾರು ಅಧಿವೇಶನದಲ್ಲಿ ಪ್ರಥಮ ಬಾರಿಗೆ ಮಂಡನೆಯಾದ ಈ ಕಾಯ್ದೆಗಳಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ದೊರೆಯಿತು. ಬಳಿಕ ಇವುಗಳನ್ನು ಕಾನೂನು ಸ್ವರೂಪಗೊಳಿಸಲು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿತ್ತು.

Follow Us:
Download App:
  • android
  • ios