ಮೊಬೈಲ್ ಕರೆ ವೇಳೆ ನಟ ಅಮಿತಾಭ್ ಬಚ್ಚನ್ ಧ್ವನಿಯಲ್ಲಿ ಕೇಳಿಬರುತ್ತಿದ್ದ, ಕೊರೋನಾ ಜಾಗೃತಿಯ ಕಾಲರ್ ಟ್ಯೂನ್| ಅದರ ಬದಲು ಮಹಿಳೆಯ ಧ್ವನಿಯಲ್ಲಿ ಕೊರೋನಾ ಲಸಿಕೆ ಅಭಿಯಾನ ಕುರಿತ ಕಾಲರ್‌ಟ್ಯೂನ್ ಬಿಡುಗಡೆ
ನವದೆಹಲಿ(j.೧೭): ಮೊಬೈಲ್ ಕರೆ ವೇಳೆ ನಟ ಅಮಿತಾಭ್ ಬಚ್ಚನ್ ಧ್ವನಿಯಲ್ಲಿ ಕೇಳಿಬರುತ್ತಿದ್ದ, ಕೊರೋನಾ ಜಾಗೃತಿ ಕುರಿತ ಕಾಲರ್ ಟ್ಯೂನ್ ಅನ್ನು ಶುಕ್ರವಾರದಿಂದಲೇ ಹಿಂದಕ್ಕೆ ಪಡೆಯಲಾಗಿದೆ. ಅದರ ಬದಲು ಮಹಿಳೆಯ ಧ್ವನಿಯಲ್ಲಿ ಕೊರೋನಾ ಲಸಿಕೆ ಅಭಿಯಾನ ಕುರಿತ ಕಾಲರ್‌ಟ್ಯೂನ್ ಬಿಡುಗಡೆ ಮಾಡಲಾಗಿದೆ.
ಲಸಿಕೆಯ ಬಗೆಗಿನ ವದಂತಿ ನಿವಾರಿಸಲು ಹೊಸ ಕಾಲರ್‌ಟ್ಯೂನ್ ಒಳಗೊಂಡಿದೆ. ಈ ಹೊಸ ವರ್ಷವು ಕೊರೋನಾ ವಿರುದ್ಧ ಹೋರಾಡುವ ಸಾಮರ್ಥ್ಯದ ಲಸಿಕೆಗಳೊಂದಿಗೆ ನಮಗೆ ಹೊಸ ಆಶಾಕಿರಣವನ್ನು ಹೊತ್ತು ತಂದಿವೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಸಂಪೂರ್ಣ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದ್ದು, ಅವು ಕೊರೋನಾ ಸೋಂಕಿನಿಂದ ರಕ್ಷಣೆ ನೀಡಲಿವೆ.
ನಿಮ್ಮ ಪಾಳಿ ಬಂದಾಗ ಲಸಿಕೆಯನ್ನು ಪಡೆಯಿರು. ಯಾವುದೇ ಕಾರಣಕ್ಕೂ ಗಾಳಿ ಸುದ್ದಿಯನ್ನು ನಂಬಬೇಡಿ ಎಂಬ ಧ್ವನಿ ಇದೀಗ ಕೇಳಿಬರುತ್ತಿದೆ.
