Asianet Suvarna News Asianet Suvarna News

ಗಾಜಿಯಾಬಾದ್‌ ವ್ಯಕ್ತಿಗೆ ಕೊರೋನಾ: 30ಕ್ಕೆ ಏರಿದ ಸೋಂಕು ಪೀಡಿತರ ಸಂಖ್ಯೆ!

ಮೋದಿ ವಿದೇಶ ಪ್ರವಾಸ ಮುಂದೂಡಿಕೆ| ಗಾಜಿಯಾಬಾದ್‌ ವ್ಯಕ್ತಿಗೆ ಕೊರೋನಾ| 30ಕ್ಕೆ ಏರಿದ ಸೋಂಕು ಪೀಡಿತರ ಸಂಖ್ಯೆ| 

New case reported from Ghaziabad India now has 30 patients
Author
Bangalore, First Published Mar 6, 2020, 7:32 AM IST

ನವದೆಹಲಿ[ಮಾ.06]: ಇತ್ತೀಚೆಗೆ ಇರಾನ್‌ಗೆ ತೆರಳಿದ್ದ ಗಾಜಿಯಾಬಾದ್‌ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು ಪರೀಕ್ಷೆಯಲ್ಲಿ ದೃಢ ಪಟ್ಟಿದೆ. ಆ ಮೂಲಕ ದೇಶದಲ್ಲಿ ಈ ಮಾರಿಗೆ ತುತ್ತಾದವರ ಸಂಖ್ಯೆ 30ಕ್ಕೆ ಏರಿದೆ. ರಾಷ್ಟ್ರ ರಾಜಧಾನಿ ಪ್ರದೇಶದ ಮಧ್ಯವಯಸ್ಕ ವ್ಯಕ್ತಿಗೆ ಸೋಂಕು ಅಂಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ 16 ವರ್ಷದ ಭಾರತೀಯ ವಿದ್ಯಾರ್ಥಿನಿಯೊಬ್ಬಳಿಗೆ ದುಬೈನಲ್ಲಿ ಕೊರೋನಾ ವೈರಸ್‌ ತಗುಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ವಿದೇಶಕ್ಕೆ ಹೋಗಿದ್ದ ತಂದೆಯಿಂದ ಈ ಸೋಂಕು ಹರಡಿದೆ. ಹೀಗಾಗಿ ವಿದ್ಯಾರ್ಥಿನಿ ಕಲಿಯುತ್ತಿರುವ ಶಾಲೆಯನ್ನು ಗುರುವಾರ ಮುಚ್ಚಲಾಗಿದೆ.

ಮೋದಿ ವಿದೇಶ ಪ್ರವಾಸ ಮುಂದೂಡಿಕೆ:

ಕೊರೋನಾ ವ್ಯಾಧಿ ಜಗತ್ತಿನಾದ್ಯಂತ ಹರಡುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಲ್ಜಿಯಂ ಪ್ರವಾಸವನ್ನು ರದ್ದು ಮಾಡಿದ್ದಾರೆ. ಐರೋಪ್ಯ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಈ ಮಾಸಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ಗೆ ತೆರಳಬೇಕಿತ್ತು. ಆದರೆ, ಆರೋಗ್ಯ ಅಧಿಕಾರಿಗಳ ಸಲಹೆಯಂತೆ ಪ್ರವಾಸ ರದ್ದು ಮಾಡಿದ್ದಾರೆ ಎಂದು ವಿದೇಶಾಂಗ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ಹೈಅಲರ್ಟ್‌:

ಈ ನಡುವೆ ಯಾವುದೇ ಸಮುದಾಯಗಳ ನಡುವೆ ಕೊರೋನಾ ಸೋಂಕು ಹಬ್ಬಿದ ಪ್ರಕರಣಗಳು ಬೆಳಕಿಗೆ ಬಂದಿದ್ದೇ ಆದರ ನಿರ್ವಹಣೆಗೆ ಅನುವಾಗುವಂತೆ ಜಿಲ್ಲೆ, ವಲಯ ಮತ್ತು ಗ್ರಾಮಮಟ್ಟದಲ್ಲಿ ಕ್ಷಿಪ್ರಕಾರ್ಯ ಪಡೆ ರಚಿಸುವಂತೆ ಎಲ್ಲಾ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

Follow Us:
Download App:
  • android
  • ios