ನವದೆಹಲಿ(ಜೂ.01): ಪ್ರಧಾನಿ ನರೇಂದ್ರ ಮೋದಿ ಅವರ ಬಾಲ್ಯದ ಅಪರೂಪದ ಕಥೆಗಳು, ಫೋಟೋಗಳನ್ನು ಒಳಗೊಂಡ ಜೀವನ ಚರಿತ್ರೆಯೊಂದು ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ 10 ಭಾರತೀಯ ಮತ್ತು 10 ವಿದೇಶಿ ಭಾಷೆಗಳಲ್ಲಿರುವ ಈ ಕೃತಿಯನ್ನು ಕೊರೋನಾ ಹಿನ್ನೆಲೆಯಲ್ಲಿ ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಲಾಗಿದೆ.

ಅಖಿಲ ಭಾರತೀಯ ಬಾರ್‌ ಅಸೋಸಿಯೇಷನ್‌ನ ಅಧ್ಯಕ್ಷ ಆದಿಶ್‌ ಸಿ.ಅಗರ್‌ವಾಲಾ ಮತ್ತು ಅಮೆರಿಕ ಮೂಲದ ಕವಿ ಎಲಿಸಬೆತ್‌ ಹೊರಾನ್‌ ಅವರು ಬರೆದಿರುವ ‘ನರೇಂದ್ರ ಮೋದಿ ಹಾರ್ಬಿಂಜರ್‌ ಆಫ್‌ ಪ್ರಾಸ್ಪೆರಿಟಿ ಅಂಡ್‌ ಅಪೋಸಲ್‌ ಆಫ್‌ ವಲ್ಡ್‌ರ್‍ ಪೀಸ್‌ (ನರೇಂದ್ರ ಮೋದಿ ಅಭಿವೃದ್ಧಿಯ ದೂತ ಮತ್ತು ವಿಶ್ವಶಾಂತಿಯ ಪ್ರಚಾರಕ) ಹೆಸರಿನ ಈ ಜೀವನ ಚರಿತ್ರೆಯನ್ನು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್‌ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ನರೇಂದ್ರ ಮೋದಿ ಅವರ ಬಾಲ್ಯದ ಅಪರೂಪದ ಫೋಟೋಗಳು, ಆರಂಭಿಕ ಜೀವನ, ಚಹಾ ವ್ಯಾಪಾರಿಯಾಗಿದ್ದ ಬಾಲಕ ಪ್ರಧಾನಿಯಾದ ಅದ್ಭುತ ಬದಲಾವಣೆ, ಮೋದಿ ಕುರಿತ ಯಾರಿಗೂ ಗೊತ್ತಿಲ್ಲದ ಅಂಶಗಳು ಈ ಪುಸ್ತಕದಲ್ಲಿವೆ. ಪುಸ್ತಕ ಹಾಗೂ ಇ- ಬುಕ್‌ ರೂಪದಲ್ಲಿ ಒಟ್ಟು 20 ಭಾಷೆಗಳಲ್ಲಿ ಈ ಪುಸ್ತಕ ಲಭ್ಯವಿದೆ.