ಮುಂಬೈ (ಅ. 22): ದೇಶ ವಿರೋಧಿ, ಹಿಂದುತ್ವ ಸಿದ್ಧಾಂತವನ್ನು ಟೀಕಿಸುವ ಸಿನಿಮಾ, ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಆರ್‌ಎಸ್‌ಎಸ್‌ ನಾಯಕರು ತನಗೆ ಸೂಚಿಸಿದ್ದಾರೆ ಎಂಬ ವರದಿಗಳನ್ನು ನೆಟ್‌ಫ್ಲಿಕ್ಸ್‌ ಸಂಸ್ಥೆ ತಳ್ಳಿಹಾಕಿ, ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಆರ್‌ಎಸ್‌ಎಸ್‌ ನಾಯಕರು ನೆಟ್‌ಫ್ಲಿಕ್ಸ್‌, ಅಮೇಜಾನ್‌, ಮತ್ತಿತರ ಡಿಜಿಟಲ್‌ ಪ್ರಸಾರ ವಾಹಿನಿಗಳ ಜತೆ ಅನೌಪಚಾರಿಕ ಸಭೆ ನಡೆಸಿ, ಕೇಂದ್ರ ಸರ್ಕಾರ, ರಾಷ್ಟ್ರ ವಿರೋಧಿ ಮತ್ತು ಹಿಂದುತ್ವ ವಿರೋಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಒತ್ತಡ ಹೇರಿದ್ದಾರೆ ಎಂದು ವರದಿಯಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ನೆಟ್‌ಫ್ಲಿಕ್ಸ್‌ನ ಕಾರ್ಯಕಾರಿ ನಿರ್ದೇಶಕರಾದ ಸೃಷ್ಟಿಆರ್ಯ ಅವರು ಆರ್‌ಎಸ್‌ಎಸ್‌ ನಮ್ಮ ಜತೆ ಯಾವುದೇ ಸಭೆ ನಡೆಸಿಲ್ಲ. ಈ ವರದಿಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟನೆ ನೀಡಿದ್ದಾರೆ.