ಕಾಠ್ಮಂಡು(ಮೇ.20): ಭಾರತ ಹಾಗೂ ನೇಪಾಳದ ನಡುವೆ ಈಗ ಗಡಿಗಾಗಿ ಸಂಘರ್ಷ ಆರಂಭವಾಗಿದೆ. ಭಾರತದ ಪ್ರದೇಶಗಳಾದ ಕಾಲಾಪಾನಿ, ಲಿಪುಲೇಖ ಹಾಗೂ ಲಿಂಪಿಯಾಧುರಾ ಪ್ರದೇಶಗಳನ್ನು ತನ್ನ ಪ್ರದೇಶಗಳು ಎಂದು ಘೋಷಿಸಿರುವ ನೇಪಾಳ, ಇವನ್ನು ಒಳಗೊಂಡ ಹೊಸ ನೇಪಾಳದ ನಕ್ಷೆಗೆ ಅನುಮೋದನೆ ನೀಡಿದೆ.

ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ವಿದೇಶಾಂಗ ಸಚಿವ ಪ್ರದೀಪ್‌ ಕುಮಾರ್‌ ಗ್ಯಾವಲಿ ಮಂಗಳವಾರ ತಿಳಿಸಿದ್ದಾರೆ. ಈ ನಕ್ಷೆಯನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ.

ಭಾರತ ಗಡಿಯಲ್ಲಿ ಟೆಂಟ್‌ ಹಾಕಿದ ಚೀನಾ ಯೋಧರು!

ಟಿಬೆಟ್‌ನ ಕೈಲಾಸ ಮಾನಸ ಸರೋವರಕ್ಕೆ ಹೋಗಲು ಸಂಪರ್ಕ ರಸ್ತೆ ಕಲ್ಪಿಸುವ ಲಿಪುಲೇಖ ಪಾಸ್‌ ಎಂಬುದು ಕಾಲಾಪಾನಿ ಸಮೀಪ ಇದೆ. ಇದು ಉಭಯ ದೇಶಗಳ ನಡುವಿನ ವಿವಾದಿತ ಪ್ರದೇಶ. ಇದನ್ನು ಎರಡೂ ದೇಶಗಳು ತಮ್ಮದೆಂದು ಹೇಳಿಕೊಳ್ಳುತ್ತವೆ. ಕಾಲಾಪಾನಿ ಉತ್ತರಾಖಂಡದ ಪಿತೋರಗಢ ಜಿಲ್ಲೆಯ ಭಾಗ ಎಂದು ಭಾರತ ಹೇಳಿಕೊಳ್ಳುತ್ತದೆ ಹಾಗೂ ನೇಪಾಳವು ಧರ್ಚುಲಾ ಜಿಲ್ಲೆಯಲ್ಲಿದೆ ಎಂದು ಹೇಳಿಕೊಳ್ಳುತ್ತದೆ.

ಇತ್ತೀಚೆಗೆ ಲಿಪುಲೇಖ ಪಾಸ್‌ನಲ್ಲಿ ರಸ್ತೆ ಕಾಮಗಾರಿ ನಡೆಸಿದ್ದಕ್ಕೆ ನೇಪಾಳವು ಭಾರತದ ರಾಯಭಾರಿಗೆ ತನ್ನ ಪ್ರತಿಭಟನೆ ಸಲ್ಲಿಸಿತ್ತು. ಆದರೆ ರಸ್ತೆಯು ತನ್ನ ಭಾಗಕ್ಕೆ ಸೇರಿದ್ದು ಎಂದು ಭಾರತ ತಿರುಗೇಟು ಕೊಟ್ಟಿತ್ತು.

ಹೊಸ ನಕ್ಷೆ ಕುರಿತಾದ ನೇಪಾಳ ಸಂಪುಟ ನಿರ್ಣಯ ಸುವರ್ಣಾಕ್ಷರದಲ್ಲಿ ಬರೆಯುವಂಥದ್ದು ಎಂದು ಸಚಿವ ಯೋಗೇಶ್‌ ಭಟ್ಟಾರಾಯ್‌ ಹೇಳಿದ್ದಾರೆ. ಆದರೆ, ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಕ್ಷದ ಮುಖಂಡ ಗಣೇಶ್‌ ಶಾ, ‘ರಾಜತಾಂತ್ರಿಕ ಮಾತುಕತೆ ಮೂಲಕ ಗಡಿ ವಿವಾದ ಬಗೆ ಹರಿಸಿಕೊಳ್ಳಬೇಕು. ಕೊರೋನಾ ಬಿಕ್ಕಟ್ಟಿನ ವೇಳೆ ಇಂಥ ನಿರ್ಣಯ ಬೇಕಿರಲಿಲ್ಲ’ ಎಂದಿದ್ದಾರೆ.

ಕೇರಳ-ಕರ್ನಾಟಕ ಬಾರ್ಡರ್‌ನಲ್ಲೇ ತಾಳಿ ಕಟ್ಟೋಕೆ ಮುಂದಾದ ವರ: ಏನಾಯ್ತು ನೋಡಿ

ಕೈತೊಳೆದುಕೊಂಡ ಚೀನಾ:

ಕಾಲಾಪಾನಿ ಗಡಿ ವಿಷಯ ಭಾರತ ಹಾಗೂ ನೇಪಾಳದ ದ್ವಿಪಕ್ಷೀಯ ವಿಚಯ. ವಿವಾದವನ್ನು ಉಭಯ ದೇಶಗಳು ಇತ್ಯರ್ಥಪಡಿಸಿಕೊಳ್ಳುವ ವಿಶ್ವಾಸವಿದೆ ಎಂದು ಚೀನಾ ಪ್ರತಿಕ್ರಿಯಿಸಿದೆ.

ಇತ್ತೀಚೆಗೆ ಕಾಲಾಪಾನಿ ಸಮೀಪದ ಲಿಪುಲೇಖ ಪಾಸ್‌ ರಸ್ತೆ ಕಾಮಗಾರಿಗೆ ನೇಪಾಳ ಆಕ್ಷೇಪಿಸಿದ್ದರ ಹಿಂದೆ ಕೆಲವು ಅದೃಶ್ಯ ಶಕ್ತಿಗಳ ಕೈವಾಡವಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಜ

ಎಂ.ಎಂ. ನಾರವಣೆ ಹೇಳಿದ್ದರು. ಇದರ ಬೆನ್ನಲ್ಲೇ ಚೀನ ಈ ಪ್ರತಿಕ್ರಿಯೆ ನೀಡಿದೆ.