ನೆಹರೂ ಕಾಶ್ಮೀರ ನೀತಿಯಿಂದ ಸಮಸ್ಯೆ ಡಬಲ್, ಕಾಂಗ್ರೆಸ್ ದುರಾಡಳಿತ ಬಿಚ್ಚಿಟ್ಟ ಜೈಶಂಕರ್
1953ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ, ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂಗೆ ನೀಡಿದ ಸಲಹೆಯನ್ನು ಕಿವಿಗೆ ಹಾಕಿಲ್ಲ. ಕೆಟ್ಟ ಕಾಶ್ಮೀರ ನೀತಿಯಿಂದ ಭಾರತದ ರಾಜತಾಂತ್ರಿಕತೆ ಮೇಲೆ ದೀರ್ಘಕಾಲದ ಪ್ರಭಾವ ಬೀರಿದೆ ಎಂದು ಜೈಶಂಕರ್ ಹೇಳಿದ್ದಾರೆ. ನೆಹರೂ ಹಾಗೂ ಕಾಂಗ್ರೆಸ್ ಆಡಳಿತದಲ್ಲಿ ನೀತಿಗಳ ಕುರಿತು ಜೈಶಂಕರ್ ಬಿಚ್ಚಿಟ್ಟಿದ್ದಾರೆ.
ಕೋಲ್ಕತಾ(ಜೂ.30) ಜವಾಹರ್ ಲಾಲ್ ನೆಹರೂ ಮಾಡಿದ ಕೆಟ್ಟ ಕಾಶ್ಮೀರ ನೀತಿಯಿಂದ ದೀರ್ಘಕಾಲ ಭಾರತದ ರಾಜತಾಂತ್ರಿಕತೆ ಮೇಲೆ ಪರಿಣಾಮ ಬೀರಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 1953ರಲ್ಲಿ ಹಿರಿಯ ಹಾಗೂ ದೂರದೃಷ್ಟಿ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ನೀಡಿದ ಸಲಹೆಯನ್ನು ನೆಹರೂ ಕಡೆಗಣಿಸಿದರು. ಕಾಶ್ಮೀರ ಸಮಸ್ಸೆಯನ್ನು ನಿರ್ವಹಣೆ ಮಾಡುತ್ತಿರುವ ರೀತಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಆದರೆ ಕೆಟ್ಟ ಕಾಶ್ಮೀರ ನೀತಿ ಭಾರತಕ್ಕೆ ತೀವ್ರ ತಲೆನೋವಾಗಿ ಪರಿಣಿಮಿಸಿತ್ತು ಎಂದು ಜೈಶಂಕರ್ ಹೇಳಿದ್ದಾರೆ.
ಕೋಲ್ಕತಾದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಸ್ ಜೈಶಂಕರ, ಪ್ರಸ್ತುತ ಭಾರತದ ರಾಜತಾಂತ್ರಿಕ ಸಂಬಂಧ, ಕಾಶ್ಮೀರ ಹಾಗೂ ಚೀನಾ ಸಮಸ್ಯೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸುತ್ತಿರುವ ರೀತಿ, ಕಾಶ್ಮೀರ ಕುರಿತು ಭಾರತ ತೆಗೆದುಕೊಂಡಿರುವ ನೀತಿಯಿಂದ ಸಮಸ್ಯೆಗಳೇ ಹೆಚ್ಚುತ್ತದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತಕ್ಕೆ ಹಿನ್ನೆಡೆಯಾಗಲಿದೆ. ಹೀಗಾಗಿ ನೀತಿಗಳ ಪುನರ್ ಪರಿಶೀಲನೆ ಅಗತ್ಯ ಅನ್ನೋ ಶ್ಯಾಮ್ ಪ್ರಸಾದ್ ಮುಖರ್ಜಿ ಮಾತನ್ನು ನೆಹರೂ ಕಡೆಗಣಿಸಿದರು. ಇದರ ಪರಿಣಾಮ ಭಾರತದ ರಾಜತಾಂತ್ರಿಕ ಪರಿಣಾಮ ದೀರ್ಘಕಾಲ ಎದುರಿಸಬೇಕಾಯಿತು ಎಂದು ಜೈಶಂಕರ್ ಹೇಳಿದ್ದಾರೆ.
ಭಾರತ ಎಲ್ಲಾ ದೇಶಗಳ ಜೊತೆ ಉತ್ತಮ ಸಂಬಂಧ ಹೊಂದಿದೆ. ಕಾಶ್ಮೀರ ಹಾಗೂ ಲಡಾಖ್ ಗಡಿ ಸಮಸ್ಯೆಗಳ ನಿವಾರಿಸಲು ಕೇಂದ್ರ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇಡುತ್ತಿದೆ. ಈ ಹಿಂದಿನ ತಪ್ಪುಗಳಿಂದ ಆಗಿರುವ ರಾಜತಾಂತ್ರಿಕ ನಷ್ಟವನ್ನು ಸರಿದೂಗಿಸುವ ಕೆಲಸವಾಗುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ. ಭಾರತ ರಷ್ಯಾ ಹಾಗೂ ಅಮೆರಿಕ ಜೊತೆ ಅತ್ಯುತ್ತಮ ಸಂಬಂಧ ಹೊಂದಿದೆ. ಭಾರತದ ರಾಜತಾಂತ್ರಿಕತೆಯನ್ನು ಹಲವು ದೇಶಗಳು ಮಾದರಿಯಾಗಿಸಿಕೊಂಡಿದೆ. ಭಾರತ ವಿಶ್ವದಲ್ಲೇ ಬಲಿಷ್ಠಗೊಂಡಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಇತ್ತೀಚೆಗೆ ಜೈಶಂಕರ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.ರಾಹುಲ್ ಗಾಂಧಿ ಅವರು ದೇಶದಲ್ಲಿ ಭಾರತವನ್ನು ಟೀಕಿಸುವ ಖಯಾಲಿ ಹೊಂದಿದ್ದಾರೆ’ ಎಂದು ಟೀಕಿಸಿದ್ದರು. ರಾಹುಲ್ ವಿದೇಶಗಳಲ್ಲಿ ಭಾರತವನ್ನು ಟೀಕಿಸುವ ಚಟ ಹೊಂದಿದ್ದಾರೆ. ಭಾರತದ ಹಿತಾಸಕ್ತಿ ದೃಷ್ಟಿಯಿಂದ ಭಾರತದ ಆಂತರಿಕ ರಾಜಕೀಯವನ್ನು ದೇಶದ ಆಚೆ ಕೊಂಡೊಯ್ಯುವುದು ಸರಿಯಲ್ಲ. ವಿಶ್ವವೇ ನಮ್ಮನ್ನು ಎದುರು ನೋಡುತ್ತಿದೆ’ ಎಂದಿದ್ದರು.
ಪ್ರಧಾನಿ ಮೋದಿ ಭೇಟಿಗೂ ಮುನ್ನ 'ನ್ಯಾಟೋ' ಆಫರ್ ನೀಡಿದ ಅಮೆರಿಕ, ತಿರಸ್ಕರಿಸಿದ ಭಾರತ!
ಇತ್ತೀಚೆಗೆ ಗೋವಾದಲ್ಲಿ ನಡೆದ ಶಾಂಘೈ ಸಹಕಾರ ಸಭೆಯಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದರು. ಭಯೋತ್ಪಾದನೆಯನ್ನು ಮಟ್ಟಹಾಕುವುದು ಶಾಂಘೈ ಸಹಕಾರ ಸಂಘದ ಪ್ರಮುಖ ನಿರ್ಧಾರವಾಗಿದೆ. ಅಲ್ಲದೇ ಭಯೋತ್ಪಾದನೆಗೆ ಯಾವುದೇ ಸಮರ್ಥನೆಗಳಿಲ್ಲ ಎಂಬುದನ್ನು ನಾವು ಬಲವಾಗಿ ನಂಬಿದ್ದೇವೆ. ಹಾಗಾಗಿ ಭಯೋತ್ಪಾದನೆ ಯಾವ ರೀತಿಯಲ್ಲಿದ್ದರೂ ನಾವು ಅದನ್ನು ತಡೆಗಟ್ಟಬೇಕು ಎಂದಿದ್ದರು.