Asianet Suvarna News Asianet Suvarna News

ಯೋಗಿ ನಾಡಲ್ಲಿ ಮಹಿಳಾ ದೌರ್ಜನ್ಯಕ್ಕಿಲ್ಲ ಲಗಾಮು, ದೇಶದ ಶೇ. 50ರಷ್ಟು ಕೇಸ್‌ ಯುಪಿಯಲ್ಲಿ!

* ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು

* ದೇಶದ ಶೇ. 50ರಷ್ಟು ಕೇಸ್‌ಗಳು ಯುಪಿಯಲ್ಲಿ

* ಮಹಿಳಾ ದೌರ್ಜನ್ಯದ ಕುರಿತಾದ ವರದಿ ಬಿಡುಗಡೆ

Nearly 31000 complaints of crimes against women received in 2021 over half from Uttar Pradesh NCW pod
Author
Bangalore, First Published Jan 2, 2022, 9:52 AM IST

ಲಕ್ನೋ(ಜ.02): ಯುಪಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ದೇಶಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಸಂಬಂಧಿಸಿದ 31,000 ದೂರುಗಳಲ್ಲಿ ಅರ್ಧದಷ್ಟು ದೂರುಗಳು ಕಳೆದ ವರ್ಷ ಉತ್ತರ ಪ್ರದೇಶದಿಂದ ಬಂದಿವೆ. ಯುಪಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ 15,828 ದೂರುಗಳು ದಾಖಲಾಗಿದ್ದರೆ, ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಸುಮಾರು 33 ನೂರು ದೂರುಗಳು ದಾಖಲಾಗಿವೆ. 2014ರ ನಂತರ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಹೇಳಿದೆ. 2020 ಕ್ಕೆ ಹೋಲಿಸಿದರೆ 2021 ರಲ್ಲಿ ಮಹಿಳಾ ಅಪರಾಧಗಳಲ್ಲಿ ಸುಮಾರು ಶೇ. 30ರಷ್ಟು ಹೆಚ್ಚಳವಾಗಿದೆ.

ಮಹಿಳಾ ದೌರ್ಜನ್ಯ ಪ್ರಕರಣಗಳು 30 ರಷ್ಟು ಏರಿಕೆ

ರಾಷ್ಟ್ರೀಯ ಮಹಿಳಾ ಆಯೋಗದ ಪ್ರಕಾರ, 2021 ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಸುಮಾರು 31 ಸಾವಿರ ದೂರುಗಳು ಬಂದಿವೆ. ಆದರೆ 2020 ರಲ್ಲಿ, 23722 ದೂರುಗಳು ದಾಖಲಾಗಿವೆ, ಇದು ಸುಮಾರು ಶೇ. 30 ರಷ್ಟು ಹೆಚ್ಚಳವಾಗಿರುವುದು ಸ್ಪಷ್ಟವಾಗಿದೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಇಡೀ ದೇಶದ ಅಂಕಿಅಂಶಗಳ ಪೈಕಿ ಯುಪಿಯಲ್ಲಿಯೇ ಮಹಿಳಾ ಅಪರಾಧಗಳ ದೂರುಗಳು ಅರ್ಧದಷ್ಟಿವೆ.

ಮಹಿಳಾ ಅಸ್ಮಿತೆಗೆ ಸಂಬಂಧಿಸಿದಂತೆ ಅತೀ ಹೆಚ್ಚು ದೂರು

ಅಧಿಕೃತ NCW ಡೇಟಾ ಪ್ರಕಾರ, 30,864 ದೂರುಗಳಲ್ಲಿ, ಗರಿಷ್ಠ 11,013 ಘನತೆಯಿಂದ ಬದುಕುವ ಹಕ್ಕಿಗೆ ಸಂಬಂಧಿಸಿದೆ. ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 6,633 ಮತ್ತು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ 4,589 ದೂರುಗಳು ಬಂದಿವೆ.

ಯುಪಿ ಅಗ್ರಸ್ಥಾನದಲ್ಲಿ, ದೆಹಲಿ ಎರಡನೇ ಸ್ಥಾನದಲ್ಲಿದೆ

ಬಿಜೆಪಿ ನೇತೃತ್ವದ ಯುಪಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪ್ರಕರಣಗಳಲ್ಲಿ ಅತಿ ಹೆಚ್ಚು ದೂರುಗಳಿವೆ. ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಯುಪಿ ಅಗ್ರಸ್ಥಾನದಲ್ಲಿದೆ. ಇಲ್ಲಿ 15,828 ದೂರುಗಳು ದಾಖಲಾಗಿವೆ. ಆದರೆ ದೆಹಲಿ ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 3,336 ದೂರುಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 1,504, ಹರಿಯಾಣದಲ್ಲಿ 1,460 ಮತ್ತು ಬಿಹಾರದಲ್ಲಿ 1,456 ದೂರುಗಳು ದಾಖಲಾಗಿವೆ.

ಮೂರು ಸಾವಿರಕ್ಕೂ ಹೆಚ್ಚು ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು

NCW ಅಂಕಿಅಂಶಗಳ ಪ್ರಕಾರ, ಶೀಲಭಂಗ ಅಥವಾ ಮಹಿಳೆಯರ ಕಿರುಕುಳದ ಅಪರಾಧಗಳಿಗೆ ಸಂಬಂಧಿಸಿದಂತೆ 1,819 ದೂರುಗಳು, 1,675 ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದ ದೂರುಗಳು, 1,537 ದೂರುಗಳು ಮಹಿಳೆಯರ ಬಗ್ಗೆ ಪೊಲೀಸರ ಅಸಡ್ಡೆ ದೂರುಗಳು ಮತ್ತು 858 ಸೈಬರ್ ಅಪರಾಧಗಳ ದೂರುಗಳು.

2014ರ ನಂತರ ಮಹಿಳಾ ಅಪರಾಧಗಳ ಹಠಾತ್ ಏರಿಕೆ

2014 ರಿಂದ NCW ಸ್ವೀಕರಿಸಿದ ದೂರುಗಳ ಸಂಖ್ಯೆ ಕಳೆದ ವರ್ಷ ಅತಿ ಹೆಚ್ಚು. 2014ರಲ್ಲಿ ಒಟ್ಟು 33,906 ದೂರುಗಳು ಬಂದಿದ್ದವು.

ಮಹಿಳೆಯರು ಜಾಗೃತರಾಗಿದ್ದಾರೆ ಎಂದು ಮಹಿಳಾ ಆಯೋಗ ಅಭಿಪ್ರಾಯಪಟ್ಟಿದೆ

ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರು ತಮ್ಮ ಕೆಲಸದ ಬಗ್ಗೆ ಆಯೋಗವು ಜನರಿಗೆ ಹೆಚ್ಚು ಅರಿವು ಮೂಡಿಸುತ್ತಿರುವುದರಿಂದ ದೂರುಗಳು ಹೆಚ್ಚಾಗುತ್ತಿವೆ ಎಂದು ಹೇಳುತ್ತಾರೆ. ಜುಲೈನಿಂದ ಸೆಪ್ಟೆಂಬರ್ 2021 ರವರೆಗೆ, ಪ್ರತಿ ತಿಂಗಳು 3,100 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು, ಭಾರತದ 'MeToo' ಆಂದೋಲನವು ಉತ್ತುಂಗದಲ್ಲಿದ್ದಾಗ ನವೆಂಬರ್ 2018 ರಲ್ಲಿ 3,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ ಎಂದಿದ್ದಾರೆ.

Follow Us:
Download App:
  • android
  • ios