ಚೀನಾ ವಸ್ತುಗಳು ಬೇಡ, ಚೀನಾ ಆ್ಯಪ್ ಬೇಡ, ಚೀನಾಗೆ ಯಾವುದೇ ಗುತ್ತಿಗೆ ಬೇಡ ಎಂದ ಇದೀಗ ದೆಹಲಿ -ಮೀರತ್ ಕಾರಿಡಾರ್ ಯೋಜನೆಯ್ನು ಚೀನಾ ಕಂಪನಿಗೆ ನೀಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಜ.04): ಲಡಾಖ್ ಗಲ್ವಾಣ್ ಕಣಿವೆಯಲ್ಲಿ ಭಾರತೀಯ ಸೇನೆ ಮೇಲೆ ಚೀನಾ ಆಕ್ರಮಣದ ಬಳಿಕ ಭಾರತ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿತ್ತು. ಪರಿಣಾಮ ಚೀನಾ ಆ್ಯಪ್ ಬ್ಯಾನ್ ಆಯ್ತು, ಚೀನಾ ವಸ್ತುಗಳ ಬೇಡಿಕೆ ಕಡಿಮೆಯಾಯಿತು. ಚೀನಾ ಕಂಪನಿಗಳಿಗೆ ನೀಡಿದ್ದ ಒಪ್ಪಂದಗಳು ರದ್ದಾಗಿತ್ತು. ಆದರೆ ಇದೀಗ ದೆಹಲಿ-ಮೀರತ್ ಕಾರಿಡಾರ್ ಯೋಜನೆ ಚೀನಾ ಕಂಪನಿಗೆ ನೀಡಲಾಗಿದೆ. ಇದು ವಿವಾದದ ಕಿಡಿ ಹೊತ್ತಿಸಿದೆ
ವಿಮಾನ ನಿಲ್ದಾಣಕ್ಕೆ ಮೆಜೆಸ್ಟಿಕ್ ನಿಂದ ರೈಲು.. ಲಾಭಗಳು ಒಂದೇ..ಎರಡೇ!.
ದೆಹಲಿ-ಮೀರತ್ ಕಾರಿಡಾರ್ ಯೋಜನೆಯ ಅಂಡರ್‌ಗ್ರೌಂಡ್ ಸುರಂಗ ನಿರ್ಮಾಣ ಕಾಮಾಗಾರಿಯನ್ನು ನ್ಯಾಶನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಶನ್(NCTRC)ಚೀನಾ ಕಂಪನಿಗೆ ನೀಡಿದೆ. ಅಶೋಕನಗರದಿಂದ ಸಾಹಿಯಾಬಾದ್ ವರೆಗಿನ 5.6 ಕಿಲೋಮೀಟರ್ ಸುರಂಗ ಮಾರ್ಗ ಕಾಮಗಾರಿಯನ್ನು ಶಾಂಘೈ ಟನಲ್ ಎಂಜಿನೀಯರ್ ಕಂಪನಿ ಬಿಡ್ಡಿಂಗ್ ಮೂಲಕ ಪಡೆದುಕೊಂಡಿದೆ.
ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡ ಕಂಪನಿಗಳ ಪೈಕಿ ಶಾಂಘೈ ಕಂಪನಿ ಅತ್ಯುತ್ತಮ ಗುಣಮಟ್ಟದ ಸುರಂಗ ಮಾರ್ಗ ನಿರ್ಮಿಸಿಕೊಡಲು ಒಪ್ಪಿಕೊಂಡಿದೆ. ಇನ್ನು ಇತರ ಕಂಪನಿಗಳಿಗೆ ಹೋಲಿಸಿದರೆ ಬೆಲೆ ಕೂಡ ನಿರೀಕ್ಷಿತ ಮಟ್ಟದಲ್ಲಿದೆ ಇದೆ. ಹೀಗಾಗಿ NCTRC ಒಪ್ಪಂದಕ್ಕೆ ಸಹಿ ಮಾಡಿದೆ. ಶೀಘ್ರದಲ್ಲೇ ಕಾಮಗಾರಿಗಳು ಆರಂಭಗೊಳ್ಳಲಿದೆ.
ಗಲ್ವಾಣ್ ಘರ್ಷಣೆ ಬಳಿಕ ಒಪ್ಪಂದಗಳು ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕಾಮಗಾರಿಗೆ ಚುರುಕಿನ ವೇಗ ನೀಡಲಾಗಿದೆ. ದೆಹಲಿ,ಘಾಝಿಯಾಬಾದ್ ಹಾಗೂ ಮೀರತ್ ನಡುವಿನ 82 ಕಿಲೋಮೀಟರ್ ಉದ್ದದ ಕಾರಿಡಾರ್ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹಣ ಒದಗಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 4, 2021, 5:32 PM IST