Asianet Suvarna News Asianet Suvarna News

ಬಿಡುಗಡೆ ಬಳಿಕ ಫಾರೂಕ್, ಓಮರ್‌ ಭಾರತದಿಂದ ಔಟ್?

ಫಾರುಕ್‌, ಓಮರ್‌ ಅಬ್ದುಲ್ಲಾ ಬ್ರಿಟನ್‌ಗೆ ಕಳಿಸುವ ಸಾಧ್ಯತೆ| ಕೆಲ ಕಾಲ ರಾಜಕೀಯದಿಂದ ಬ್ರೇಕ್‌ ಪಡೆಯುವಂತೆ ಸೂಚಿಸುವ ಸಾಧ್ಯತೆ| ಕಾಶ್ಮೀರಕ್ಕೆ ಭೇಟಿ ನೀಡಿದ್ದ ವಿದೇಶಿ ರಾಯಭಾರಿಗಳಿಗೆ ಅಧಿಕಾರಿಗಳ ಮಾಹಿತಿ

NC seeks unconditional release of Omar And Farooq Abdullah
Author
Bangalore, First Published Jan 12, 2020, 10:08 AM IST
  • Facebook
  • Twitter
  • Whatsapp

ಶ್ರೀನಗರ[ಜ.12]: ಜಮ್ಮು-ಕಾಶ್ಮೀರದ ಮೇಲೆ ಹೇರಲಾದ ವಿವಿಧ ನಿರ್ಬಂಧಗಳನ್ನು ತೆರವುಗೊಳಿಸುವುದರ ಬಗ್ಗೆ ವಾರದೊಳಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿದ ಬೆನ್ನಲ್ಲೇ, ಕಳೆದ 6 ತಿಂಗಳಿನಿಂದ ಗೃಹ ಬಂಧನದಲ್ಲಿರುವ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲಾ ಹಾಗೂ ಅವರ ಪುತ್ರ ಓಮರ್‌ ಅಬ್ದುಲ್ಲಾಗೆ ಬಿಡುಗಡೆ ಭಾಗ್ಯ ಲಭಿಸುವ ಸಾಧ್ಯತೆ ಇದೆ. ಆದರೆ ಬಿಡುಗಡೆ ಬಳಿಕ ಇಬ್ಬರಿಗೂ ಬ್ರಿಟನ್‌ಗೆ ತೆರಳುವಂತೆ ಷರತ್ತು ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಶ್ಮೀರಕ್ಕೆ 15 ದೇಶಗಳ ಅಂತಾರಾಷ್ಟ್ರೀಯ ನಿಯೋಗ: ಜನರ ಪ್ರತಿಕ್ರಿಯೆಗೆ ಸಂತಸ!

ಇಬ್ಬರೂ ರಾಜಕೀಯ ನಾಯಕರು, ತಮ್ಮ ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ಯತ್ನಕ್ಕೆ ಅಡ್ಡಿ ಮಾಡಬಹುದು ಎನ್ನವ ಕಾರಣಕ್ಕೆ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. ಹೀಗಾಗಿ ಬಿಡುಗಡೆ ಮಾಡುವುದಾದರೆ, ಇಬ್ಬರೂ ಕೆಲ ಕಾಲ ದೇಶದಲ್ಲಿದ್ದುಕೊಂಡೇ ರಾಜಕೀಯ ಚಟುವಟಿಕೆ ನಡೆಸುವುದಕ್ಕೆ ವಿರಾಮ ಹಾಡಬೇಕು. ಇದಕ್ಕಾಗಿ ಕೆಲ ಕಾಲ ಬ್ರಿಟನ್‌ಗೆ ಹೋಗಿ ನೆಲೆಸಬೇಕು. ಬ್ರಿಟನ್‌ನಿಂದಲೇ ತಮ್ಮ ಆಪ್ತರ ಮೂಲಕವೇ ಜಮ್ಮು-ಕಾಶ್ಮೀರ ರಾಜಕೀಯವನ್ನು ನಿರ್ವಹಿಸಬಹುದಾಗಿದೆ ಎಂದು ಸಲಹೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಇದಕ್ಕೆ ಉಭಯ ನಾಯಕರು ಒಪ್ಪಿದರೆ, ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಇಂಥ ಒಂದು ಸುಳಿವನ್ನು ಕಾಶ್ಮೀರ ವಾಸ್ತವದ ಸ್ಥಿತಿ ಅವಲೋಕನಕ್ಕಾಗಿ ಖುದ್ದು ಭೇಟಿ ನೀಡಿದ್ದ ವಿದೇಶಿ ರಾಯಭಾರಿಗಳ ನಿಯೋಗಕ್ಕೆ ಸರ್ಕಾರ ನೀಡಿದೆ ಎನ್ನಲಾಗಿದೆ.

15 ವರ್ಷ ನೆಲೆಸಿದ್ದವರಿಗಷ್ಟೇ ಕಾಶ್ಮೀರದಲ್ಲಿ ಕೆಲಸ, ಭೂಮಿ!

Follow Us:
Download App:
  • android
  • ios