ಕೊರೋರ್‌(ಮೇ.13): ವಿಶ್ವಾದ್ಯಂತ ಕೊರೋನಾ ಭೀತಿಯ ನಡುವೆಯೇ ಪೆಸಿಫಿಕ್‌ನ ಪುಟ್ಟರಾಷ್ಟ್ರ ‘ನೌರು’ ತನ್ನೆಲ್ಲಾ ಪ್ರಜೆಗಳಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪೂರೈಸಿದೆ.

ಇದು ವಿಶ್ವ ದಾಖಲೆಯಾಗಿದೆ. ನೌರುನಲ್ಲಿ ಆಸ್ಟ್ರಾಜೆನೆಕಾದ ಕೋವಿಶೀಲ್ಡ್‌ ಲಸಿಕೆ ವಿತರಿಸಲಾಗಿದೆ. ಕೊರೋನಾ ಸೋಂಕಿನಿಂದ ಮುಕ್ತವಾಗಿರುವ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಈ ಪುಟ್ಟದ್ವೀಪ ರಾಷ್ಟ್ರವೂ ಒಂದು.

ನಾಲ್ಕು ವಾರಗಳ ಲಸಿಕೆ ಅಭಿಯಾನದಲ್ಲಿ ಸುಮಾರು 7392 ಜನರಿಗೆ ಮೊದಲ ಡೋಸ್‌ ಲಸಿಕೆ ನೀಡಿದೆ. ರಾಷ್ಟ್ರೀಯ ಕೊರೋನಾ ವೈರಸ್‌ ಕಾರ‍್ಯಪಡೆ ಈ ವಿಶ್ವ ದಾಖಲೆಯ ಫಲಿತಾಂಶದಿಂದ ಸಂತಸಗೊಂಡಿದೆ. ದೇಶದ ಒಟ್ಟು ಜನಸಂಖ್ಯೆ 10882.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona