ಮುಂಬೈ(ಅ. 06)  ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸೋಮವಾರ ದೇಶದಲ್ಲಿಯೇ ಮೊದಲು ಎಂಬಂತೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

ಪಾರ್ಟಿಯಲ್ಲಿ ಎಲ್‌ಜಿಬಿಟಿಕ್ಯೂ ಸೆಲ್ ಸ್ಥಾಪನೆ ಮಾಡಿದ್ದು ದೇಶದಲ್ಲಿಯೇ ಈ ಕೆಲಸ ಮಾಡಿದ ಮೊದಲ ರಾಜಕೀಯ ಪಕ್ಷವಾಗಿದೆ.  ಸಲಿಂಗಿಗಳು,  ಕ್ವೀರ್, ದ್ವಿಲಿಂಗಿಗಳ ಕಲ್ಯಾಣಕ್ಕೆ ಇದು  ಕೆಲಸ ಮಾಡಲಿದೆ.

ಘಟನ ಸ್ಥಾಪನೆ ವಿಚಾರವನ್ನು  ಲೋಕಸಭಾ ಸಂಸದ ಸುಪ್ರಿಯಾ ಸುಳೆ ತಿಳಿಸಿದ್ದಾರೆ. ಎಲ್‌ಜಿಬಿಟಿ ಬಗ್ಗೆ ಹೊಂದಿರುವ ಪೂರ್ವಾಗ್ರಹವನ್ನು ತೊಡೆದುಹಾಕಬೇಕು. ಅವರನ್ನು ಸಮಾಜದಲ್ಲಿ ಎಲ್ಲರೊಂದಿಗೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು  ತಿಳಿಸಿದ್ದಾರೆ.

ಸಲಿಂಗಿ ಸಮುದಾಯ; ಪುರಾಣಗಳೇ ಒಪ್ಪಿಕೊಂಡಿದ್ದವು!

ಎನ್‌ಸಿಪಿ ಮಾತ್ರ ಇಂಥ ವಿಚಾರಗಳ ಬಗ್ಗೆ ಉದಾತ್ತವಾಗಿ ಮಾತನಾಡುತ್ತದೆ. ಭಾಷಣಗಳಲ್ಲಿ ಮಾತನಾಡುವ  ವಿಚಾರಗಳನ್ನು ಅಳವಡಿಕೆ ಮಾಡಿಕೊಳ್ಳುತ್ತೇವೆ. ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮಹಿಳೆಯರ ಮೀಸಲಾತಿಯನ್ನು ಮೊದಲು ಜಾರಿಗೆ ತಂದರು. ನಾವು ಮೊದಲು ಯುವತಿಯರಿಗಾಗಿ ವಿಶೇಷ ವಿಭಾಗವನ್ನು ರಚಿಸಿದ್ದೇವೆ ಮತ್ತು ಈಗ ಈ ಹೊಸ ಕೋಶವು  ಎಲ್‌ಜಿಬಿಟಿ ಸಮುದಾಯಲ್ಲೆ ರಾಜಕಾರಣದ ಮಾನ್ಯತೆ ಕಲ್ಪಿಸಿಕೊಡಲಿದೆ ಎಂದು ತಿಳಿಸಿದರು.

ಪ್ರಿಯಾ ಪಾಟೀಲ್ ಎಲ್‌ಜಿಬಿಟಿಕ್ಯೂ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.  ನಾವು ಒಂದಾಗಿ ನಮ್ಮ ಕಷ್ಟ ಸಂಕಟ ಹೇಳಿಕೊಂಡು ದನಿಯನ್ನು ಪ್ರಚುರಪಡಿಸಲು ಘಟಕ ಕಾರಣವಾಗಲಿದೆ ಎಂದು ಪಾಟೀಲ್ ಹೇಳಿದರು.

ಮಹಿಳಾ ಸಲಿಂಗಿಗಳು ಇನ್ನು ಮುಂದೆ ಒಂದಾಗಿ ಬಾಳಬಹುದು

ಸಮುದಾಯವು ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ ಅಥವಾ ಭಾವನಾತ್ಮಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಂಡಳಿ ಮತ್ತು ನಮ್ಮ ಪಕ್ಷವು ಕೆಲಸ ಮಾಡುತ್ತದೆ. ಎನ್ ಸಿಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ನೀರಾವರಿ ಸಚಿವ ಜಯಂತ್ ಪಾಟೀಲ್  ಸಹ ನಮ್ಮ ಜತೆಗೆ ಇರಲಿದ್ದಾರೆ ಎಂದು ತಿಳಿಸಿದರು.