ರಾಜಸ್ಥಾನದಲ್ಲೂ ಕಾಂಗ್ರೆಸ್‌ನಿಂದ ಗೃಹಲಕ್ಷ್ಮಿ ಸ್ಕೀಂ: 500ಕ್ಕೆ ಸಿಲಿಂಡರ್, ಮನೆ ಒಡತಿಗೆ 10 ಸಾವಿರ
ಕರ್ನಾಟಕದ ರೀತಿ ರಾಜಸ್ಥಾನದಲ್ಲೂ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಪ್ರಕಟಿಸಿದೆ. ಕರ್ನಾಟಕದಲ್ಲಿ ಗೃಹಿಣಿಯರಿಗೆ ಮಾಸಿಕ ₹2000 ನೀಡಲಾಗುತ್ತಿದ್ದರೆ, ರಾಜಸ್ಥಾನದಲ್ಲಿ ಪಕ್ಷ ಗೆದ್ದರೆ ವಾರ್ಷಿಕ ₹10 ಸಾವಿರ ನೀಡುವ ಘೋಷಣೆ ಮಾಡಲಾಗಿದೆ.
ಜೈಪುರ: ಕರ್ನಾಟಕದ ರೀತಿ ರಾಜಸ್ಥಾನದಲ್ಲೂ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಪ್ರಕಟಿಸಿದೆ. ಕರ್ನಾಟಕದಲ್ಲಿ ಗೃಹಿಣಿಯರಿಗೆ ಮಾಸಿಕ ₹2000 ನೀಡಲಾಗುತ್ತಿದ್ದರೆ, ರಾಜಸ್ಥಾನದಲ್ಲಿ ಪಕ್ಷ ಗೆದ್ದರೆ ವಾರ್ಷಿಕ ₹10 ಸಾವಿರ ನೀಡುವ ಘೋಷಣೆ ಮಾಡಲಾಗಿದೆ.
ಲೋಕಸಭೆ ಚುನಾವಣೆಗೂ ಮುನ್ನ ಸೆಮಿಫೈನಲ್ ಎಂತಲೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ (Assembly Election) ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಪಡೆಯಬೇಕೆಂದು ಕಾಂಗ್ರೆಸ್ ಹವಣಿಸುತ್ತಿದ್ದು, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ರೀತಿಯ ಗ್ಯಾರಂಟಿಗಳ ಘೋಷಣೆ ಮಾಡಿದೆ. ₹500ಕ್ಕೆ ಸಿಲಿಂಡರ್ ಹಾಗೂ ಮನೆ ಒಡತಿಗೆ ವಾರ್ಷಿಕ ₹10 ಸಾವಿರ ಇವು ರಾಜಸ್ಥಾನ ಕಾಂಗ್ರೆಸ್‌ನ ಗ್ಯಾರಂಟಿಗಳಾಗಿವೆ.
ಹೇಗಿದೆ ಇಂದು ನಿಮ್ಮ ನಗರದಲ್ಲಿ ಬೆಳ್ಳಿ ಬಂಗಾರದ ದರ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಝುಂಝುನುನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಬುಧವಾರ ಇದನ್ನು ಘೋಷಿಸಿ, ಕಾಂಗ್ರೆಸ್ ಮತ್ತೆ ಗೆದ್ದರೆ 1.05 ಕೋಟಿ ಕುಟುಂಬಕ್ಕೆ ಗೃಹ ಬಳಕೆ ಸಿಲಿಂಡರ್ 500 ರು. ಮತ್ತು ಕುಟುಂಬದ ಒಡತಿಗೆ ಗೃಹ ಲಕ್ಷ್ಮಿ (Gruhalakshmi scheme) ಯೋಜನೆಯಡಿ ವಾರ್ಷಿಕವಾಗಿ ಕಂತು ರೂಪದಲ್ಲಿ 10,000 ರು. ನೀಡಲಾಗುವುದು ಎಂದು ಹೇಳಿದರು. ಕಾಂಗ್ರೆಸ್ (congress) ಮತ್ತೆ ಅಧಿಕಾರಕ್ಕೆ ಬಂದರೆ ಈ ಎರಡೂ ಗ್ಯಾರಂಟಿಗಳ ಅನುಷ್ಠಾನವಾಗಲಿದೆ ಎಂದು ಹೇಳಿದರು. ನ.25 ರಂದು ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಡಿ.3 ರಂದು ಫಲಿತಾಂಶ ಹೊರಬೀಳಲಿದೆ.
ಮೋದಿ ಅವಹೇಳನ: ಪ್ರಿಯಾಂಕಾ ವಿರುದ್ಧ ಬಿಜೆಪಿ ದೂರು
ನವದೆಹಲಿ: ಪಂಚರಾಜ್ಯ ಚುನಾವಣೆ ರಂಗೇರುತ್ತಿರುವ ನಡುವೆಯೇ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ನಡುವೆ ಕಾಂಗ್ರೆಸ್ ಕಾರ್ಯದರ್ಶಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಧಾರ್ಮಿಕ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ನಿಯೋಗವೊಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಹೇಗಿದೆ ನಿಮ್ಮ ನಗರಗಳಲ್ಲಿ ಇಂದು ಪೆಟ್ರೋಲ್ ಡೀಸೆಲ್ ದರ
ಪ್ರಿಯಾಂಕಾ ಅವರು ರಾಜಸ್ಥಾನದ ದೌಸಾ ಎಂಬಲ್ಲಿ ಮಾತನಾಡುತ್ತಾ, ನರೇಂದ್ರ ಮೋದಿಯವರು ದೇಗುಲ ಲೋಕಾರ್ಪಣಾ ಸಮಾರಂಭದಲ್ಲಿ ಒಂದು ಕವರ್ ತಗೆದು 21 ರು. ದೇಣಿಗೆ ನೀಡಿರುವುದಾಗಿ ದೂರದರ್ಶನದಲ್ಲಿ ಸುದ್ದಿ ಬಿತ್ತರವಾಗಿರುವುದನ್ನು ನೋಡಿದೆ. ಹಾಗೆಯೇ ಬಿಜೆಪಿಯ ಸರ್ಕಾರ (BJP Govt) ಕೂಡ ಕವರ್ ತೋರಿಸಿ ಭರವಸೆಯ ರಾಶಿಯನ್ನೇ ನಿಮ್ಮ ಮುಂದಿಟ್ಟು ಗೆದ್ದ ನಂತರ ಅದನ್ನು ಈಡೇರಿಸಿಲ್ಲ ಎಂದು ಹೇಳಿದ್ದರು.
ಇದಕ್ಕೆ ಬಿಜೆಪಿಯು ‘ಪ್ರಿಯಾಂಕಾ ಅವರ ಈ ಹೇಳಿಕೆಯು ಪ್ರಧಾನಿ ಮೋದಿಯವರ (Narendra Modi) ವೈಯಕ್ತಿಕ ಧಾರ್ಮಿಕ ಭಾವನೆಗಳ ಕುರಿತು ಉಲ್ಲೇಖಿಸಿರುವುದರಿಂದ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಭಾರತೀಯ ದಂಡ ಸಂಹಿತೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951ರ ನಿಯಮಗಳ ಪ್ರಕಾರ ಶಿಕ್ಷಾರ್ಹ ಅಪರಾಧವಾದ ಕಾರಣ ಆಕೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.